ಹುರ್ರೆ... 1,700 ರುಪಾಯಿಗೆ ಟ್ಯಾಬ್ಲೆಟ್ ಕಂಪ್ಯೂಟರ್

Posted By: Staff

ಹುರ್ರೆ... 1,700 ರುಪಾಯಿಗೆ ಟ್ಯಾಬ್ಲೆಟ್ ಕಂಪ್ಯೂಟರ್
ಬಳಪ ಮತ್ತು ಸ್ಲೇಟ್ ನೇಪಥ್ಯಕ್ಕೆ ಸರಿಯಲಿದೆ. ಇನ್ನು ಮುಂದಿನ ತಲೆಮಾರಿನ ವಿದ್ಯಾರ್ಥಿಗಳ ಕೈಗೆ ಟ್ಯಾಬ್ಲೆಟ್ ಬರಲಿದೆ. ಬುಧವಾರ ಭಾರತ ಸರಕಾರ ಅಗ್ಗದ ಟ್ಯಾಬ್ಲೆಟ್ ಕಂಪ್ಯೂಟರ್ "ಆಕಾಶ್" ಹೊರತಂದಿದೆ. ಇದರ ದರ ಜಸ್ಟ್ 1,700 ರುಪಾಯಿ ಅಷ್ಟೇ. ಅಂದ್ರೆ ನೋಕಿಯಾ ಕಲರ್ ಮೊಬೈಲ್ ದರದಷ್ಟು. ಕೆಲವು ವರದಿಗಳು ಆಕಾಶ್ ದರ 1,400 ರು. 1500 ರು, ಎಂದಿದೆ.

ಜಗತ್ತಿಗೆ ಅಗ್ಗದ ನ್ಯಾನೊ ಕಾರು ಕೊಟ್ಟವರು ನಾವು. ಇದೀಗ ಅಗ್ಗದ ಟ್ಯಾಬ್ಲೆಟ್ ಕಂಪ್ಯೂಟರ್ ಪರಿಚಯಿಸಿದ ಮೊದಲ ದೇಶವೂ ನಮ್ಮದು. ಈ ಟ್ಯಾಬ್ಲೆಟ್ ಕಂಪ್ಯೂಟರ್ ಮುಂದಿನ ತಿಂಗಳು ಮಾರುಕಟ್ಟೆಗೆ ತಲುಪಲಿದೆ.

ಈ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಿದ್ದು ಅನಿವಾಸಿ ಭಾರತೀಯರಾದ ರಾಜಾ ಸಿಂಗ್ ಟುಲಿ ಮತ್ತು ಸುನೀತ್ ಸಿಂಗ್ ಟುಲಿ ಒಡೆತನದ ಡೇಟಾ ವಿಂಡ್ ಸಂಸ್ಥೆ.

ದೇಶದ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಈ ಅಗ್ಗದ ಟ್ಯಾಬ್ಲೆಟ್ ಪಡೆಯಲಿದ್ದಾರೆ. ಇದರ ನಿಜವಾದ ದರ 2,276 ರು. ಮಾರುಕಟ್ಟೆ ದರ ಸುಮಾರು 3 ಸಾವಿರ ರು. ವಿದ್ಯಾರ್ಥಿಗಳಿಗೆ ವಿನಾಯಿತಿ ದರ 1,700 ರುಪಾಯಿ ಅಂತೆ. ಆಕಾಶ್ ಹೆಸರಿನ ಈ ಟ್ಯಾಬ್ಲೆಟ್ ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಕೈಸೇರಲಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲೇ ಈ ಟ್ಯಾಬ್ಲೆಟ್ ಮಾದರಿಯನ್ನು ಕೇಂದ್ರ ಮಾನವ ಸಂಪನ್ಮೂಲ ವಿಭಾಗ ಅನಾವರಣಗೊಳಿಸಿತ್ತು. ಸರಕಾರದ ಅನುದಾನದಲ್ಲಿ ಅಗ್ಗದ ಟ್ಯಾಬ್ಲೆಟ್ ಕಂಪ್ಯೂಟರ್ ಮಾರುಕಟ್ಟೆ ಮೇಲೆ ಹೊಸ ದರ ಸಮರ ಆರಂಭಿಸುವ ನಿರೀಕ್ಷೆಯಿದೆ. ಖಾಸಗಿ ಕಂಪನಿಗಳು ಅಗ್ಗದ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಲು ಪ್ರಯತ್ನಿಸುವ ನಿರೀಕ್ಷೆಯಿದೆ.

ಮೊಬೈಲ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಸುಮಾರು 99 ರುಪಾಯಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಯೋಜನೆಯೂ ಇದೆ. ಇದರಲ್ಲಿ ಕಂಪ್ಯೂಟರ್ ಗೇಮ್ಸ್ ಮತ್ತು ನೆಟ್ ಬ್ರೌಸಿಂಗ್ ಅವಕಾಶವಿದೆ. ವಿದ್ಯಾರ್ಥಿಗಳು ಓದೋದನ್ನು ಮರೆತು ಗೇಮ್ಸ್ ನಲ್ಲಿ ಮೈಮರೆಯದಿದ್ದರೆ ಸಾಕು.

ಈ ಟ್ಯಾಬ್ಲೆಟ್ ಮೂಲಕ 70 ಸಾವಿರ ಇಂಟರ್ ನೆಟ್ ಪುಸ್ತಕ(ಇರೀಡರ್ ಮಾದರಿಯಲ್ಲಿ) ಮತ್ತು ಇಂಟರ್ ನೆಟ್ ಸುದ್ದಿ ಪತ್ರಿಕೆಗಳನ್ನು ಓದುವ ಅವಕಾಶ ವಿದ್ಯಾರ್ಥಿಗಳಿಗೆ ದೊರಕಲಿದೆ.

ಆಕಾಶ್ ವಿಶೇಷತೆ

* 256 ಎಂಬಿ RAM
* 7 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ
* ನಿಸ್ತಂತು ಇಂಟರ್ ನೆಟ್ ಸೌಲಭ್ಯ
* ಮಲ್ಟಿಮೀಡಿಯಾ ಪ್ಲೇಯರ್
* ಕೀಬೋರ್ಡ್ ಕೂಡ ಜೋಡಿಸಬಹುದು
* 2 ಜಿಬಿ ಮೆಮೊರಿ, 32 ಜಿಬಿ ವರೆಗೆ ವಿಸ್ತರಿಸಬಹುದು
* ಬ್ಯಾಟರಿ ಬ್ಯಾಕಪ್ 3 ಗಂಟೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot