ಹಗುರ ಮತ್ತು ತೆಳ್ಳಗಿನ ತೋಷಿಬಾ ಅಲ್ಟ್ರಾ ಎಟಿ700 ಟ್ಯಾಬ್ಲೆಟ್

ಇದು ತೆಳು ಲ್ಯಾಪ್ ಟಾಪ್. ಈ ಟ್ಯಾಬ್ಲೆಟ್ 0.3 ಇಂಚು ತೆಳ್ಳಗಿನ ಸುಂದರಿ. ಇದರ ಸ್ಕ್ರೀನ್ ಡಿಸ್ ಪ್ಲೇ 10.1 ಇಂಚು ವಿಸ್ತಾರವಾಗಿದ್ದು, 1280x800 ರೆಸಲ್ಯೂಷನ್ ಹೊಂದಿದೆ. ಇದರ ಆಕರ್ಷಕ ಬಾಡಿ ವಿನ್ಯಾಸ, ಹಗುರ ಮತ್ತು ಆಕರ್ಷಕ ಫೀಚರುಗಳಿಂದ ಟ್ಯಾಬ್ಲೆಟ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ನೂತನ ತೋಷಿಬಾ ಅಲ್ಟ್ರಾ ಥಿನ್ ಎಟಿ ಟ್ಯಾಬ್ಲೆಟ್ ನಲ್ಲಿ ಅಡ್ವಾನ್ಸ್ ಫೀಚರಿನ ಆಂಡ್ರಾಯ್ಡ್ 3.2 ಅಪರೇಟಿಂಗ್ ಸಿಸ್ಟಮ್ ಇದೆ. ಇದರಿಂದಾಗಿ ಇದರ ನಿರ್ವಹಣೆ ದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಾಗಿದೆ. ಇದು ಸುಮಾರು ಒಂದು ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಜೊತೆಗೆ ಇದಕ್ಕೆ ಸುಮಾರು 32 ಜಿಬಿ ಮೆಮೊರಿ ಕಾರ್ಡ್ ಅಳವಡಿಸುವ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.
ಈ ತೆಳ್ಳಗಿನ ಸುಂದರವಾದ ಟ್ಯಾಬ್ಲೆಟ್ ನಲ್ಲಿ ಅತ್ಯಧಿಕ ಗುಣಮಟ್ಟದ ಕ್ಯಾಮರಾವಿದೆ. ಟ್ಯಾಬ್ಲೆಟ್ ಹಿಂಭಾಗದಲ್ಲಿ 5 ಮೆಗಾಫಿಕ್ಸೆಲ್ ಮತ್ತು ಮುಂಭಾಗದಲ್ಲಿ 2 ಎಂಪಿ ಪಿಕ್ಸೆಲ್ ಸಾಮರ್ಥ್ಯದ ಕ್ಯಾಮರಾವಿದೆ.
ಸದ್ಯ ಈ ಟ್ಯಾಬ್ಲೆಟ್ ಜಪಾನಿನ ಮಾರುಕಟ್ಟೆಗೆ ಬಂದಿದೆ. ಡಿಸೆಂಬರ್ ವೇಳೆಗೆ ಭಾರತದ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಈ ಟ್ಯಾಬ್ಲೆಟ್ ಸಣ್ಣದಾಗಿದ್ದರೂ ದರ ಕೊಂಚ ದುಬಾರಿಯಾಗಿರುವ ನಿರೀಕ್ಷೆಯಿದೆ. ದರದ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇನ್ನೂ ದೊರಕಿಲ್ಲ.


Click it and Unblock the Notifications




