ಫುಜಿತ್ಸು ಎಫ್ಎಂವಿ ಸರಣಿಯ 17 ಕಂಪ್ಯೂಟರ್ ಮಾರುಕಟ್ಟೆಗೆ

Posted By: Staff

ಫುಜಿತ್ಸು ಎಫ್ಎಂವಿ ಸರಣಿಯ 17 ಕಂಪ್ಯೂಟರ್ ಮಾರುಕಟ್ಟೆಗೆ
ಫುಜಿತ್ಸು ಕಂಪನಿಯ ಕಂಪ್ಯೂಟರ್ ಗಳು ಸ್ಟೈಲ್ ಮತ್ತು ಫರ್ಮಾಮೆನ್ಸ್ ವಿಷಯದಲ್ಲಿ ಇಷ್ಟವಾಗುತ್ತದೆ. ಈ ತಿಂಗಳು ಹದಿಮೂರನೇ ತಾರೀಖು ಫುಜಿತ್ಸು ನೂತನ 17 ಹೊಸ ಕಂಪ್ಯೂಟರ್ ಗಳನ್ನು ಪರಿಚಯಿಸಲಿದೆ. ಇವೆಲ್ಲ ಆರಂಭದಲ್ಲಿ ಜಪಾನಿನಲ್ಲಿ ಬಿಡುಗಡೆಯಾಗಲಿದೆ. ಶೀಘ್ರದಲ್ಲಿ ಜಾಗತಿಕ ಮಾರುಕಟ್ಟೆಗೂ ಆಗಮಿಸುವ ನಿರೀಕ್ಷೆಯಿದೆ.

ಈ ಹದಿನೇಳು ಮಾಡೆಲ್ ಕಂಪ್ಯೂಟರ್ ಗಳು ಸೌಂದರ್ಯ ಮತ್ತು ಹೊಸ ತಂತ್ರಜ್ಞಾನಗಳಿಂದ ಇಷ್ಟವಾಗುತ್ತದೆ. ಎಫ್ ಲಿಂಕ್ ಎಂಬ ಐಫೋನ್ ಫೀಚರು ಇದರಲ್ಲಿವೆ. ವಿಡಿಯೊ ಮತ್ತು ಇಮೇಜುಗಳನ್ನು ವಯರ್ ಲೆಸ್ ಆಗಿ ಕಂಪ್ಯೂಟರ್ ನಲ್ಲಿ ಸಂಗ್ರಹಿಸಲು ಐಲಿಂಕ್ ನೆರವಾಗುತ್ತದೆ.

ಮತ್ತೊಂದು ಆಕರ್ಷಕ ಫೀಚರ್ ಕ್ವಿಕ್ ಸ್ಟಾರ್ಟ್. ಅಂದ್ರೆ ಕೇವಲ ಆರು ಸೆಕೆಂಡಿನಲ್ಲಿ ಈ ಕಂಪ್ಯೂಟರ್ ಗಳು ಆರಂಭವಾಗುತ್ತದೆ. ಎಲ್ಲಾ ಹೊಸ ಕಂಪ್ಯೂಟರ್ ಗಳು ಕೂಡ ಇಕೊ ಬಟನ್ ಹೊಂದಿವೆ. ಇದರಿಂದ ಕರೆಂಟ್ ಉಳಿತಾಯವಾಗಿ ಬ್ಯಾಟರಿ ಬ್ಯಾಕಪ್ ಹೆಚ್ಚಾಗುತ್ತದೆ.

ಫುಜಿತ್ಸು ಎಫ್ಎಂವಿ ಸರಣಿಯಲ್ಲಿ ಒಂದರ ಹೆಸರು ಹೆಸರು Lifebook SH76/E. ಇದು 13.3 ಇಂಚಿನ ಎಲ್ ಸಿಡಿ ಪರದೆ ಹೊಂದಿದೆ. ಇದರಲ್ಲಿ ಸಣ್ಣದಾದ ಸೂಪರ್ ಮಲ್ಟಿ ಡ್ರೈವ್ ಇದೆ. ಮತ್ತೊಂದು Esprimo FH ಕಂಪ್ಯೂಟರ್ ನಲ್ಲಿ ಗುಣಮಟ್ಟದ ಆಡಿಯೋ ಮತ್ತು ಅತ್ಯಧಿಕ ರೆಸಲ್ಯೂಷನ್ ನ ಟೆಲಿವಿಷನ್ ಅನುಭವ ಪಡೆಯಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot