3ಡಿ ಗ್ಲಾಸ್ ಅಗತ್ಯವಿಲ್ಲದ ಸೋನಿ 3ಡಿ ಲ್ಯಾಪ್ ಟಾಪ್

Posted By: Staff

3ಡಿ ಗ್ಲಾಸ್ ಅಗತ್ಯವಿಲ್ಲದ ಸೋನಿ 3ಡಿ ಲ್ಯಾಪ್ ಟಾಪ್
ಕಟ್ಟಿಂಗ್ ಎಡ್ಜ್ ತಂತ್ರಜ್ಞಾನದ ಮೂಲಕ ಸೋನಿ ವಿನೂತನ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ಕಂಪನಿಯ ನೂತನ ಉತ್ಪನ್ನ ಸೊನಿ ವಿಯೊ ಎಸ್ ಲ್ಯಾಪ್ ಟಾಪ್ 3ಡಿ ಗ್ಲಾಸ್ ಡಿಸ್ ಪ್ಲೇಯೊಂದಿಗೆ ಬರಲಿದೆ.

ಅಂದ್ರೆ ಈ ಲ್ಯಾಪ್ ಟಾಪ್ ನೋಡಲು ಕಣ್ಣಿಗೆ 3ಡಿ ಕನ್ನಡಕ ಹಾಕೋ ಅವಶ್ಯಕತೆಯಿಲ್ಲ. ಅದರಲ್ಲಿರುವ ವಿಶೇಷ ಫೀಚರು ನಮಗೆ ಕನ್ನಡಕವಿಲ್ಲದೇ 3ಡಿ ಅನುಭವ ನೀಡುತ್ತದೆ. ಅದರಲ್ಲಿರುವ ಒಂದು ಬಟನ್ ಕ್ಲಿಕ್ ಮಾಡಿದಾಗ ಲ್ಯಾಪ್ ಟಾಪ್ 3ಡಿ ಲೋಕಕ್ಕೆ ತೆರೆದುಕೊಳ್ಳುತ್ತದೆ.

ಈ ಲ್ಯಾಪ್ ಟಾಪ್ ಹೈಡೆಫಿನೇಷನ್ ತಂತ್ರಜ್ಞಾನ ಹೊಂದಿದೆ. ಅದರಲ್ಲಿರುವ ವೆಬ್ ಕ್ಯಾಮರಾ ನಮ್ಮ ಕಣ್ಣಿನ ಚಲನೆಯ ಮೇಲೆ ನಿಗಾವಿರಿಸಿ 3ಡಿ ಅನುಭವ ನೀಡಲಿದೆಯಂತೆ! ಇದು ಒಂದು ರೀತಿಯಲ್ಲಿ 3ಡಿ ಸರ್ ಪ್ರೈಸ್ ಆಗಿದೆ.

ನೂತನ ಸೋನಿ ವಿಯೊ ಎಸ್ ಗ್ಲಾಸ್ ಫ್ರೀ 3ಡಿ ಲ್ಯಾಪ್ ಟಾಪ್ 2.30 ಗಿಗಾ ಹರ್ಟ್ಸ್ ನ ಇಂಟೆಲ್ ಕೋರ್ ಐ7 ಪ್ರೊಸೆಸರ್ ಹೊಂದಿರುವ ನಿರೀಕ್ಷೆಯಿದೆ. ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್ ಕೂಡ ಇರುವ ನಿರೀಕ್ಷೆಯನ್ನು ಟೆಕ್ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.

ಇದರಲ್ಲಿರುವ ನಿರೀಕ್ಷಿತ ಫೀಚರುಗಳು ಇಂತಿವೆ. 1920x1080 ರೆಸಲ್ಯೂಷನ್ ನ 16.4 ಇಂಚಿನ ಸ್ಕ್ರೀನ್ ಇರುವ ನಿರೀಕ್ಷೆಯಿದೆ. ಉಳಿದಂತೆ ಬ್ಲೂಟೂಥ್ ಕನೆಕ್ಟಿವಿಟಿ, ಬ್ಲೂರೇ ಡಿಸ್ಕ್, 8 ಜಿಬಿ ಆಂತರಿಕ ಮೆಮೊರಿ ಇರುವ ನಿರೀಕ್ಷೆಯಿದೆ. ಇದರ ದರದ ಕುರಿತು ಯಾವ ಮಾಹಿತಿಯೂ ದೊರಕಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot