ಲೆನೊವೊ ಐಡಿಯಾಪ್ಯಾಡ್ ಟ್ಯಾಬ್ಲೆಟ್ ಎ1 ವಿಮರ್ಶೆ

Posted By: Staff

ಲೆನೊವೊ ಐಡಿಯಾಪ್ಯಾಡ್ ಟ್ಯಾಬ್ಲೆಟ್ ಎ1 ವಿಮರ್ಶೆ
ಚೈನಿಸ್ ವಸ್ತುಗಳೆಲ್ಲ ಚೆನ್ನಾಗಿರೊಲ್ಲ ಅನ್ನೋದಕ್ಕೆ ಲೆನೊವೊ ಅಪವಾದ. ಕಂಪನಿಯು ಕಂಪ್ಯೂಟರ್ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪದನೆಯಲ್ಲಿ ಫೇಮಸ್ಸು. ಇದೀಗ ಲೆನೆವೊ ಟ್ಯಾಬ್ಲೆಟ್ ಉದ್ಯಮದತ್ತ ಮುಖ ಮಾಡಿದೆ.

ಲೆನೊವೊ ಶೀಘ್ರದಲ್ಲಿ ಐಡಿಯಾಪ್ಯಾಡ್ ಎ1 ಟ್ಯಾಬ್ಲೆಟ್ ಹೊರತರಲಿದೆ. ಇದು ಮುಂದಿನ ತಿಂಗಳು ಅಂದ್ರೆ ನವೆಂಬರ್ ಅಂತ್ಯದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

Lenovo IdeaPad Tablet A1 ಗ್ರಾಹಕರಿಗೆ ಇಷ್ಟವಾಗುವ ಹಲವು ಫೀಚರುಗಳನ್ನು ಹೊಂದಿರಲಿವೆಯಂತೆ. ಎಲ್ಲಕ್ಕಿಂತ ಪ್ರಮುಖವಾಗಿ ಇದು ಗೂಗಲ್ ಆಂಡ್ರಾಯ್ಡ್ 2.3 ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆ.

ಇದು ಹಗುರ ಟ್ಯಾಬ್ಲೆಟ್. ಅಂದ್ರೆ ಬ್ಯಾಟರಿ ಸೇರಿ ಕೇವಲ 400 ಗ್ರಾಮ್ ಇರಲಿದೆ ಅಷ್ಟೇ. ಇದು ಒಎಂಎಪಿ 3622 ಸಿಪಿಯು ಪ್ರೊಸೆಸರ್ ಹೊಂದಿರಲಿದೆ. ಇದರ RAM ಸಾಮರ್ಥ್ಯ 512 ಎಂಬಿ ಇರಲಿದೆ. ಇದು ಸ್ಟಾಂಡರ್ಡ್ 1 ಗಿಗಾ ಹರ್ಟ್ಸ್ ಪ್ರೊಸೆಸರ್ ಹೊಂದಿರಲಿದೆ.

ಕಪ್ಪು ಬಣ್ಣದ ಫಿನಿಷ್ ಹೊಂದಿರುವ ಈ ಟ್ಯಾಬ್ಲೆಟ್ ಆಕರ್ಷಕ ವಿನ್ಯಾಸ ಹೊಂದಿರಲಿದೆಯಂತೆ. ಈ ಟ್ಯಾಬ್ಲೆಟ್ 7 ಇಂಚಿನ ಡಿಸ್ ಪ್ಲೇ ಹೊಂದಿರಲಿದ್ದು, ರೆಸಲ್ಯೂಷನ್ 1024x600 ಇರಲಿದೆ. ಇದು ಎಲ್ ಇಡಿ ಮಲ್ಟಿ ಟಚ್ ಡಿಸ್ ಪ್ಲೇ ಆಗಿರಲಿದೆ. ಮೆಮೊರಿ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಮೈಕ್ರೊ ಎಸ್ ಡಿ ಸ್ಲಾಟ್ ಇರಲಿದೆ.

ಲೆನೊವೊ ಐಡಿಯಾಪ್ಯಾಡ್ ಟ್ಯಾಬ್ಲೆಟ್ ಎ1 ನಿಸ್ತಂತು ಬೆಂಬಲ ಹೊಂದಿರುತ್ತದೆ. ಅಂದರೆ ಬ್ಲೂಟೂಥ್, ವೈಫೈ ಕನೆಕ್ಟಿವಿಟಿ ಬೆಂಬಲ ನೀಡುತ್ತದೆ. ಜೊತೆಗೆ ಯುಎಸ್ ಬಿ 2.0 ಪೋರ್ಟ್ ಇರಲಿದೆ. ದಾರಿತೋರಿಸುವ ಜಿಪಿಎಸ್ ನ್ಯಾವಿಗಷನ್ ಸಿಸ್ಟಮ್ ಕೂಡ ಈ ಟ್ಯಾಬ್ಲೆಟ್ ಕಂಪ್ಯೂಟರ್ ನಲ್ಲಿ ಇರಲಿದೆ.

ಲೆನೊವೊ ಈ ಐಡಿಯಾಪ್ಯಾಡ್ ದರ ಕೂಡ ಅಗ್ಗವಂತೆ. ಅಂದರೆ 2 ಜಿಬಿ ಆವೃತ್ತಿಗೆ 8 ಸಾವಿರ ರು. ಮತ್ತು 16 ಜಿಬಿ ವರ್ಷನ್ ಗೆ 12 ಸಾವಿರ ರು. ಇರಲಿದೆ. ಇದು ಕಪ್ಪು, ಬಿಳಿ, ನಸುಗೆಂಪು ಮತ್ತು ನೀಲಿ ಬಣ್ಣಗಳಲ್ಲಿ ದೊರಕಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot