ಉದ್ದಿಮೆದಾರರಿಗೆ ಮೊಟೊರೊಲಾ ಹೊಸ ಟ್ಯಾಬ್ಲೆಟ್

Posted By: Staff

ಉದ್ದಿಮೆದಾರರಿಗೆ ಮೊಟೊರೊಲಾ ಹೊಸ ಟ್ಯಾಬ್ಲೆಟ್
ವಿಶೇಷವಾಗಿ ಉದ್ದಿಮೆದಾರರಿಗೆ ಹೆಚ್ಚು ಇಷ್ಟವಾಗುವ ಟ್ಯಾಬ್ಲೆಟ್ ಕಂಪ್ಯೂಟರೊಂದನ್ನು ಮೊಟೊರೊಲಾ ಹೊರತಂದಿದೆ. ಇದರ ಹೆಸರು ಮೊಟೊರೊಲಾ ಇಟಿ1. ಇದು ಆಂಡ್ರಾಯ್ಡ್ ಟ್ಯಾಬ್ಲೆಟ್ ಆಗಿದ್ದು, ವಿಂಡೊಸ್ ಸಿಇ ಮತ್ತು ವಿಂಡೋಸ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಇದು ಆರೋಗ್ಯಸೇವಾ ಉತ್ಪನ್ನಗಳ ಮಾರಾಟಗಾರರು, ಆರೋಗ್ಯಸೇವೆ, ರಿಟೇಲ್ ಉದ್ಯಮ ಸೇರಿದಂತೆ ಹಲವು ಉದ್ದಿಮೆದಾರರಿಗೆ ಸಹಾಯಕವಾಗುವಂತಹ ಟ್ಯಾಬ್ಲೆಟ್ ಕಂಪ್ಯೂಟರ್ ಆಗಿದೆ.

ಇದರ ಬ್ಯಾಟರಿ ಬಾಳಿಕೆ ಸುಮಾರು 8 ಗಂಟೆ. ಮೊಟೊರೊಲಾ ಇಟಿ1, ಒಂದು ಗಿಗಾಹರ್ಟ್ಸ್ ನ ಡ್ಯೂಯಲ್ ಕೋರ್ ಪ್ರೊಸೆಸರ್, 1 ಜಿಬಿ RAM ಮತ್ತು ಒಂದು ಜಿಬಿ ಫ್ಲಾಷ್ ಹೊಂದಿದೆ. ಮೈಕ್ರೊ ಎಸ್ ಡಿ ಕಾರ್ಡ್ ಮೂಲಕ ಇದರ ಸಂಗ್ರಹ ಸಾಮರ್ಥ್ಯವನ್ನು ಸುಮಾರು 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

ಕಂಪನಿ ಮಾರಾಟಗಾರರಿಗೆ ಉಪಯುಕ್ತವಾಗುವಂತಹ ಅಪ್ಲಿಕೇಷನ್ ಗಳು ಇದರಲ್ಲಿವೆ. ಅಂದರೆ ಮಾರಾಟಗಾರನು ಯಾವುದಾದರೂ ಉತ್ಪನ್ನವೊಂದರ ಪ್ರಚಾರ ಮಾಡಲು ನೆರವಾಗುವ ಆಪ್ ಇದರಲ್ಲಿದೆ. ಇದನ್ನೇ ಗ್ರಾಹಕರಿಗೆ ತೋರಿಸಿ ಅವರಿಗೆ ಸುಲಭವಾಗಿ, ಮನಮುಟ್ಟುವಂತೆ ವಿವರಿಸಬಹುದು. ಹೀಗಾಗಿ ಇದು ಮಾರಾಟಗಾರರ ಸ್ನೇಹಿಯಾಗಿದೆ ಎನ್ನಬಹುದು.

ರಿಟೇಲ್ ಉದ್ದಿಮೆಗೆ ಅನುಕೂಲವಾಗುವ ಹಲವು ಫೀಚರುಗಳು ಇದರಲ್ಲಿವೆ. ಉಳಿದಂತೆ ಪುಷ್ ಟು ಟಾಕ್, ವಿಒಐಪಿ, ಕ್ರೆಡಿಟ್ ಕಾರ್ಡ್ ಮತ್ತು ಬಾರ್ ಕೋಡ್ ಸ್ಕ್ಯಾನಿಂಗ್ ಫೀಚರು, ಎರಡು ಬುಲ್ಟ್ ಇನ್ ಕ್ಯಾಮರಾ ಮತ್ತು ವೈಫೈ ಸಾಧನ ಇದರಲ್ಲಿದೆ.

ಈ ಟ್ಯಾಬ್ಲೆಟ್ 7.2 ಇಂಚಿನ ಸ್ಕ್ರೀನ್ ಹೊಂದಿದೆ. ಇದರಲ್ಲಿರುವ ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಹೆಚ್ಚು ದಕ್ಷತೆ ಹೊಂದಿದೆ. ಈ ಟ್ಯಾಬ್ಲೆಟ್ ಕಂಪ್ಯೂಟರ್ ಮೂಲಕ ಅತ್ಯುತ್ತಮವಾಗಿ ವಿಡಿಯೋ ಕಾನ್ಪರೆನ್ಸ್ ಮಾಡಬಹುದಾಗಿದೆ. ಮೊಟೊರೊಲಾ ಇಟಿ1 ಟ್ಯಾಬ್ಲೆಟ್ ದರ ಸುಮಾರು 39 ಸಾವಿರ ರು. ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot