ಇದು ಟಿವಿಯಲ್ಲ, ಸ್ಯಾಮ್ ಸಂಗ್ ಕಂಪ್ಯೂಟರ್!!

By Super
|
ಇದು ಟಿವಿಯಲ್ಲ, ಸ್ಯಾಮ್ ಸಂಗ್ ಕಂಪ್ಯೂಟರ್!!
ಟೆಲಿವಿಷನ್ ತಂತ್ರಜ್ಞಾನ ಆಧರಿತ ಪರ್ಸನಲ್ ಕಂಪ್ಯೂಟರೊಂದನ್ನು ಸ್ಯಾಮ್ ಸಂಗ್ ಹೊರತಂದಿದೆ. ಕಂಪ್ಯೂಟರ್ ಗಳಲ್ಲಿ ಟೆಲಿವಿಷನ್ ಕ್ವಾಲಿಟಿ ಅನುಭವ ಪಡೆಯಲು ಇದರಿಂದ ಸಾಧ್ಯವಿದೆ ಎಂದು ಕಂಪನಿ ಹೇಳಿದೆ. ಅಂದಹಾಗೆ ಈ ಕಂಪ್ಯೂಟರ್ ಹೆಸರು ಸ್ಯಾಮ್ ಸಂಗ್ ಸೀರಿಸ್ 7 ಎಯೊ ಪಿಸಿ.

Samsung Series 7 AIO PC ಸ್ಯಾಮ್ ಸಂಗ್ ಕಂಪನಿಯ ಮತ್ತೊಂದು ಅನ್ವೇಷಣೆ ಎನ್ನಲಾಗಿದೆ. ಇದು ನೋಡಲು ದೊಡ್ಡದಾಗಿ ಕಂಡರೂ ಇದನ್ನು ಇಡಲು ಕಡಿಮೆ ಸ್ಥಳಾವಕಾಶ ಸಾಕಂತೆ.

ಇದು ಬೃಹತ್ ಅಂದರೆ 23 ಇಂಚಿನ ವಿಶಾಲ ಸ್ಕ್ರೀನ್ ಹೊಂದಿದೆ. ಇದು ಟಚ್ ಡಿಸ್ ಪ್ಲೇ ಹೊಂದಿದೆ. ಎಲ್ ಇಡಿ ಹೈಡೆಫಿನೇಷನ್ ಹೊಂದಿರುವ ಇದರ ಪರದೆ 1,920 x 1,080 ರೆಸಲ್ಯೂಷನ್ ಹೊಂದಿದೆ. ಮಾಮೂಲಿ ಕಂಪ್ಯೂಟರ್ ಗಳಿಗಿಂತ ಭಿನ್ನವಾಗಿ ಇದರ ವಿನ್ಯಾಸ ಮಾಡಲಾಗಿದೆ. (ಚಿತ್ರ ನೋಡಿ).

ಸ್ಯಾಮ್ ಸಂಗ್ ಸೀರಿಸ್ 7 ಎಐಒ ಪಿಸಿ, ಇಂಟೆಲ್ ಐ3-2120 ಟಿ ಪ್ರೊಸೆಸರ್ ಹೊಂದಿದೆ. ಇದು 8 ಜಿಬಿಯ ಡಿಡಿಆರ್3 ಮೆಮೊರಿ ಹೊಂದಿದೆ. ಜೊತೆಗೆ ವಿಂಡೋಸ್ 7 ಹೋಮ್ ಪ್ರೀಮಿಯಂ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಗುಣಮಟ್ಟ ಹೆಚ್ಚಿಸಲು ಇಂಟೆಲ್ ಹೈಡೆಫಿನೇಷನ್ ಗ್ರಾಫಿಕ್ಸ್ ಜೊತೆಗಿದೆ.

ಇದು ಕೇವಲ ಗೇಮ್ಸ್ ಅನುಭವಕ್ಕೆ ಮಾತ್ರವಲ್ಲ. ಇದು ಅತ್ಯುತ್ತಮ ಗುಣಮಟ್ಟದ ಸ್ಕ್ರೀನ್ ಹೊಂದಿದೆ. ಇದರ ಸಂಗ್ರಹ ಸಾಮರ್ಥ್ಯವೂ ಜಾಸ್ತಿಯಿದೆ. ಸ್ಯಾಮ್ ಸಂಗ್ ಸೀರಿಸ್ 7 ಎಐಒ ಪಿಸಿ ಸಂಗ್ರಹ ಸಾಮರ್ಥ್ಯ ಸುಮಾರು 1 ಸಾವಿರ ಜಿಬಿವರೆಗಿದೆ.

ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಸಂಗೀತವೂ ಕೇಳಲು ಸಾಧ್ಯವಿಂತೆ. ಡಿವಿಡಿ ಪ್ಲೇಯರ್ ಕೂಡ ಇದರಲ್ಲಿದೆ. ಯುಎಸ್ ಬಿ 2.0 ಮತ್ತು ಯುಎಸ್ ಬಿ 3.0 ಸಾಥ್ ಇದಕ್ಕಿದೆ. ಹೀಗೆ ಹತ್ತು ಹಲವು ಫೀಚರುಗಳಿರುವ ಈ ಬೃಹತ್ ವಿಶೇಷ ಕಂಪ್ಯೂಟರ್ ದರ ಸುಮಾರು 46,700 ರು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X