ಎಸ್ ಎಚ್76/ಇ: ಫುಜಿತ್ಸು ಲೈಫ್ ಬುಕ್ ಫುಲ್ ಡಿಟೈಲ್ಸ್

Posted By: Staff

ಎಸ್ ಎಚ್76/ಇ: ಫುಜಿತ್ಸು ಲೈಫ್ ಬುಕ್ ಫುಲ್ ಡಿಟೈಲ್ಸ್
ಫುಜಿತ್ಸು ಕಂಪನಿಯು ಸೈಲೆಂಟ್ ಕಿಲ್ಲರ್. ಅಂದ್ರೆ ಸೈಲೆಂಟ್ ಆಗಿದ್ದುಕೊಂಡು ಎದುರಾಳಿಗಳಿಗೆ ಪೈಪೋಟಿ ನೀಡುತ್ತಿರುತ್ತದೆ. ತನ್ನ ಆಕರ್ಷಕ ಅನ್ವೆಷಣೆಗಳ ಮೂಲಕ ಅತ್ಯಧಿಕ ಗುಣಮಟ್ಟದ ಉತ್ಪನ್ನಗಳನ್ನು ಹೊರತರುವಲ್ಲಿ ಫುಜಿತ್ಸು ಯಾವತ್ತೂ ಮುಮದೆ. ಇದೀಗ ಕಂಪನಿಯು ಅಲ್ಟ್ರಾ ಹಗುರ ಅಲ್ಟ್ರಾ ಬುಕ್ ಹೊರತಂದಿದೆ. ಅದರ ಹೆಸರು Fujitsu Lifebook SH76/E.

ಇದು ಇತ್ತೀಚಿನ ತಂತ್ರಜ್ಞಾನಗಳನ್ನೆಲ್ಲ ಅರಗಿಸಿಕುಡಿದುಕೊಂಡು ಬಂದಿದೆ ಎಂದರೆ ಜಾಸ್ತಿಯಾಗಲಿಕ್ಕಿಲ್ಲ. ಯಾಕೆಂದರೆ ಈ ಲೈಫ್ ಬುಕ್ ವಿಶ್ಲೇಷಣೆಯಲ್ಲಿ ವಿಶ್ಲೇಷಕರು "ಮೈಂಡ್ ಬ್ಲೋವಿಂಗ್", "ಅವೆಸಂ" ಅಂತ ಹೊಗಳಿದ್ದಾರೆ. ಅಂತದ್ದು ಏನಪ್ಪ ಇದೆ ಇದರಲ್ಲಿ ಅಂತ ಕೇಳುತ್ತೀರಾ?

ಇದು 13.3 ಇಂಚಿನ ಡಿಸ್ ಪ್ಲೇ ಹಿಂದಿದೆ. ಇದರ ಸ್ಕ್ರೀನ್ ರಸಲ್ಯೂಷನ್ 1366x768 ಪಿಕ್ಸೆಲ್. ಇದು ಇಂಟೆಲ್ ಐ2520ಎಂ ಕೋರ್ ಪ್ರೊಸೆಸರ್ ಹೊಂದಿದೆ. ಇದು ಸುಮಾರು 2.5 ಗಿಗಾಹರ್ಟ್ಸ್ ಪವರ್ ಇರುವ ನಿರೀಕ್ಷೆಯಿದೆ. ಇದರ RAM ಸಾಮರ್ಥ್ಯ 4 ಜಿಬಿ. ಇದಕ್ಕೆ 128 ಜಿಬಿಯ ಎಂಎಸ್ಎಟಿಎ ಎಸ್ಎಸ್ ಡಿ ಮೆಮೊರಿ ಕಾರ್ಡ್ ಅಳವಡಿಸುವ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಇದು ಹಗುರವಾಗಿದೆ. ಅಂದ್ರೆ ಇದರ ತೂಕ ಕೇವಲ 1.34 ಕೆ.ಜಿ. ಇದರಲ್ಲಿ ಎರಡು ಯುಎಸ್ ಬಿ 2.0 ಪೋರ್ಟ್ ಇದೆ. ಜೊತೆಗೊಂದು ಯುಎಸ್ ಬಿ 3.0 ಪೋರ್ಟ್ ಇದೆ. ಒಂದು ಗಿಗಾಬಿಟ್ ಎಥರ್ನೆಟ್ ಪೋರ್ಟ್ ಜೊತೆಗಿದೆ. ಮೈಕ್ರೊ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು.

Fujitsu Lifebook SH76/E ಬ್ಯಾಟರಿ ಬಾಳಿಕೆಯೂ ಅತ್ಯುತ್ತಮವಾಗಿದೆ. ಇದು 72 ವೋಲ್ಟೆಜ್ ನ 6 ಸೆಲ್ ಬ್ಯಾಟರಿ ಬ್ಯಾಕಪ್ ಹೊಂದಿದೆ. ಹೀಗಾಗಿ ಇದು ನಂಬಲು ಅಸಾಧ್ಯವೆಂಬಂತೆ 18.2 ಗಂಟೆ ಬ್ಯಾಟರಿ ಬಾಳಿಕೆ ನೀಡುತ್ತದೆ. ಇತರ ಅಲ್ಟ್ರಾ ಬುಕ್ ಗಳಿಗೆ ಹೋಲಿಸಿದರೆ ಇದು ಅತ್ಯಧಿಕ ಬ್ಯಾಟರಿ ಬಾಳಿಕೆಯಾಗಿದೆ.

ಉಳಿದಂತೆ ಇದರಲ್ಲಿ ವೈಫೈ ಕನೆಕ್ಟಿವಿಟಿ, ವೈಮ್ಯಾಕ್ಸ್ ಸಪೋರ್ಟ್ ಇದೆ. ಈಗ ಬೆಚ್ಚಿ ಬೀಳುವ ವಿಷಯವೊಂದಿದೆ. ಅದು ಇದರ ದರದ ವಿಷ್ಯ. ಈ ಅಲ್ಟ್ರಾ ಬುಕ್ ಆರಂಭಿಕ ದರ ಸುಮಾರು 93,800 ರುಪಾಯಿ ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot