Subscribe to Gizbot

ಆಪಲ್ ಐಪ್ಯಾಡ್ ಮಿನಿ: ಇದು ಪುಟ್ಟ ಟ್ಯಾಬ್ಲೆಟ್

Posted By: Staff

ಆಪಲ್ ಐಪ್ಯಾಡ್ ಮಿನಿ: ಇದು ಪುಟ್ಟ ಟ್ಯಾಬ್ಲೆಟ್
ಆಪಲ್ ತರೋ ಎಲ್ಲಾ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿಸುತ್ತಿದೆ. ಐಪ್ಯಾಡ್, ಐಪೋಡ್, ಕಂಪ್ಯೂಟರ್ ಸೇರಿದಂತೆ ಆಪಲ್ ಉತ್ಪನ್ನಗಳೆಲ್ಲ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಇದೀಗ ಕಂಪನಿಯು ಆಪಲ್ ಮಿನಿ ಎಂಬ ಟ್ಯಾಬ್ಲೆಟ್ ಕಂಪ್ಯೂಟರ್ ಹೊರತರಲು ಸಿದ್ಧವಾಗಿದೆ.

Apple ipad mini ಹೆಸರಿನ ಟ್ಯಾಬ್ಲೆಟ್ ಶೀಘ್ರದಲ್ಲಿ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ಈ ಸೆಗ್ಮೆಂಟಿನಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ, ಅಮೆಝಾನ್ ಕಿಂಡಲ್ ಫೈರ್ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿವೆ. 2012ರೊಳಗೆ ನೂತನ ಆಪಲ್ ಮಿನಿ ಟ್ಯಾಬ್ಲೆಟ್ ಆಗಮಿಸುವ ನಿರೀಕ್ಷೆಯಿದೆ.

ಆಪಲ್ ಐಪ್ಯಾಡ್ ಮಿನಿ ಆಗಮಿಸಿದಾಗ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸುವ ಎಲ್ಲಾ ಸಾಧ್ಯತೆಯಿರುವುದಾಗಿ ಗ್ಯಾಜೆಟ್ ಗುರುಗಳು ಹೇಳುತ್ತಾರೆ. ಆಪಲ್ ಹೊರತರುವ ಉತ್ಪನ್ನಗಳ ಮೇಲಿನ ನಂಬಿಕೆಯೇ ವಿಶ್ಲೇಷಕರು ಹೀಗೆ ಷರಾ ಬರೆಯಲು ಕಾರಣ.

ಕಂಪನಿಯ ನೂತನ ಮಿನಿ ಟ್ಯಾಬ್ಲೆಟ್ ಆಕರ್ಷಕ ಫೀಚರುಗಳೊಂದಿಗೆ ಆಗಮಿಸು ನಿರೀಕ್ಷೆಯಿದೆ. ಅಂದರೆ ದೊಡ್ಡ ಗಾತ್ರ ಸ್ಕ್ರೀನ್, ವೇಗವಾಗಿ ಬ್ರೌಸಿಂಗ್ ಮಾಡುವ ತಂತ್ರಜ್ಞಾನ ಮತ್ತು ದೀರ್ಘಕಾಲದ ಬ್ಯಾಟರಿ ಬಾಳಿಕೆಗೆ ಕಂಪನಿಯು ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ.

ಐಪ್ಯಾಡ್ ಮಿನಿ ಐಒಎಸ್ 4.3 ಅಪರೇಟಿಂಗ್ ಸಿಸ್ಟಮ್, ಒಂದು ಗಿಗಾ ಹರ್ಟ್ಸ್ ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿರುವ ನಿರೀಕ್ಷೆಯಿದೆ. ಆಕರ್ಷಕ ಗ್ರಾಫಿಕ್ಸ್ ತಂತ್ರಜ್ಞಾನಗಳು, ಅನನ್ಯ ಫೀಚರುಗಳು ಇರುವ ಸಾಧ್ಯತೆಯಿದೆ.

ಒಂದು ಅಂದಾಜಿನ ಪ್ರಕಾರ ಮಿನಿ ಟ್ಯಾಬ್ಲೆಟ್ ದರ ಭಾರತದಲ್ಲಿ ಸುಮಾರು 8,500 ರು. ಆಸುಪಾಸಿನಲ್ಲಿರಲಿದೆಯಂತೆ. ಆಪಲ್ ಮಿನಿ ಟ್ಯಾಬ್ಲೆಟ್ ಕುರಿತು ಹೆಚ್ಚಿನ ಮಾಹಿತಿ ಸದ್ಯಕ್ಕೆ ದೊರಕಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot