ಯೆಸ್, ಬ್ರೌಸರ್ ಕೂಡ ಓಎಸ್ ಆಗುತ್ತೆ!!

By Super
|
ಯೆಸ್, ಬ್ರೌಸರ್ ಕೂಡ ಓಎಸ್ ಆಗುತ್ತೆ!!
ಗೂಗಲ್ ಕ್ರೊಮ್ ಒಎಸ್ ಎಲ್ಲರಿಗೂ ಗೊತ್ತು. ಅದೊಂದು ಬ್ರೌಸರ್. ಆದರೆ ಬ್ರೌಸರೇ ಇನ್ನು ಮುಂದೆ ಅಪರೇಟಿಂಗ್ ಸಿಸ್ಟಮ್ ಆಗಲಿದೆಯೇ? ಈಗಾಗಲೇ ಸ್ಯಾಮ್ ಸಂಗ್ ಅಮೆರಿಕದಲ್ಲಿ ಕ್ರೋಮ್ ಬುಕ್ ಹೊರತಂದಿದೆ. ಇದು Google Chrome browser-OS ಮೂಲಕ ಕಾರ್ಯನಿರ್ವಹಿಸುತ್ತದೆ.

ಹೆಚ್ಚಿನ ಲ್ಯಾಪ್ ಟಾಪ್ ಗಳು ವಿಂಡೋಸ್ ಅಥವಾ ಮ್ಯಾಕ್ ಅಪರೇಟಿಂಗ್ ಸಿಸ್ಟಮ್ ನೊಂದಿಗೆ ಬರುತ್ತಿವೆ. ಆದರೆ ಈ ಲ್ಯಾಪ್ ಟಾಪ್ ಗೆ ಕ್ರೋಮ್ ಒಎಸ್ ಜೀವಾಳ. ಗೂಗಲ್ ಉತ್ಪನ್ನಗಳನ್ನು ಬಳಸುವರಿಗಿದು ಅತ್ಯುತ್ತಮ ಉತ್ಪನ್ನವೆಂದು ಕಂಪನಿ ಹೇಳಿದೆ.

ಈ ಕ್ರೋಮ್ ಲ್ಯಾಪ್ ಟಾಪ್ ನಲ್ಲಿ ಎಲ್ಲಾ ಮಾಹಿತಿ, ದಾಖಲೆಗಳನ್ನು ಆನ್ ಲೈನ್ ನಲ್ಲಿ ಸಂಗ್ರಹಿಸಿಡಬಹುದು. ಅದನ್ನು ನೋಡಬೇಕಿದ್ದಲ್ಲಿ ಗೂಗಲ್ ಐಡಿ ಮೂಲಕ ಲಾಗಿನ್ ಆದರೆ ಸಾಕು. ಸ್ಯಾಮ್ ಸಂಗ್ ಕ್ರೋಮ್ ಬುಕ್ ವೈರ್ ಲೆಸ್ ನೆಟ್ ವರ್ಕ್ ಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ 3ಜಿ ಕನೆಕ್ಷನ್ ಕೂಡ ಹೊಂದಿದೆ.

ಈ ಲ್ಯಾಪ್ ಟಾಪ್ ವಿನ್ನೊಂದು ವಿಶೇಷತೆಯೆಂದರೆ ಇದನ್ನು ಆಫ್ ಮಾಡಲು ಅಥವಾ ಆನ್ ಮಾಡಲು ಕೇವಲ 10 ಸೆಕೆಂಡ್ ಸಾಕಂತೆ. ಈ ಲ್ಯಾಪ್ ಟಾಪ್ ಒಳಗಡೆ ಪ್ರವೇಶಿಸಲು ನಿಮ್ಮ ಜಿಮೇಲ್ ಅಥವಾ ಗೂಗಲ್ ಖಾತೆಯ ಮಾಹಿತಿ ನೀಡಬೇಕು. ಒಂದು ರೀತಿಯಾಗಿ ಹೇಳಬೇಕಾದರೆ ಈ ಲ್ಯಾಪ್ ಟಾಪ್ ನಿಮ್ಮ ಗೂಗಲ್ ಲೋಕ.

ಇನ್ನೊಂದು ವಿಷಯವಿದೆ. ಈ ಲ್ಯಾಪ್ ಟಾಪ್ ಗೆ ನೀವು ಯಾವುದೇ ಪ್ರೊಗ್ರಾಂ ಇನ್ ಸ್ಟಾಲ್ ಮಾಡೋ ಹಾಗಿಲ್ಲ. ನಿಮಗೆ ಯಾವುದಾದರೂ ಮನರಂಜನೆ ಅಥವಾ ಕೆಲಸಕ್ಕೆ ಸಂಬಂಧಿಸಿದ ಅಪ್ಲಿಕೇಷನ್ ಬೇಕಿದ್ದರೆ ಆನ್ ಲೈನ್ ಅಪ್ಲಿಕೇಷನ್ ಗಳ ಮೊರೆ ಹೋಗಬೇಕಷ್ಟೇ.

ಮೈಕ್ರೊಸಾಫ್ಟ್ ಅಥವಾ ಕಿಬ್ರೆ ಆಫೀಸ್ ಟೂಲ್ ಗೆ ಹೋಲಿಸಿದರೆ ಗೂಗಲ್ ಡಾಕ್ಸ್ ಉಪಯೋಗ ಹೆಚ್ಚಿನವರಿಗೆ ಇಷ್ಟವಾಗಲಿಕ್ಕಿಲ್ಲ. ಇದರಲ್ಲಿರುವ ಗೂಗಲ್ ಫಿಕಾಸಾ ಅಪ್ಲಿಕೇಷನ್ ಅತ್ಯುತ್ತಮವಾಗಿ ಫೋಟೊ ಎಡಿಟ್ ಮಾಡಲು ನೆರವಾಗುತ್ತದೆ. ಜೊತೆಗೆ ಇದರಲ್ಲಿ ಚಿತ್ರಗಳನ್ನು ಸಂಗ್ರಹಿಸಲು ಮತ್ತು ಹಂಚಬಹುದು.

ಉಳಿದಂತೆ ಜೀಮೆಲ್ ಮತ್ತು ಮ್ಯಾಪ್ ಗಳಿವೆ. ಎಚ್ ಡಿ ವಿಡಿಯೋ ಕೂಡ ಇದರಲ್ಲಿ ವೀಕ್ಷಿಸಬಹುದು. ಗೂಗಲ್ ಕ್ರೊಮ್ ಲ್ಯಾಪ್ ಟಾಪ್ ಹಗುರವಾಗಿದೆ. ಅಂದರೆ 1.5 ಕೆಜಿ ಮತ್ತು 2 ಸೆಂಟಿಮೀಟರ್ ದಪ್ಪವಿದೆ ಅಷ್ಟೇ. ಇದರ ಬ್ಯಾಟರಿ ಬಾಳಿಕೆ 8 ಗಂಟೆ. ಇದರ ದರ ಭಾರತಕ್ಕೆ ಬಂದಾಗ ಸುಮಾರು 26,906 ರು. ಇರಲಿದೆಯಂತೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X