Subscribe to Gizbot

ಏಸರ್ ಟ್ರಾವೆಲ್ ಮೇಟ್ ಲ್ಯಾಪ್ ಟಾಪ್ 8481G ವಿಮರ್ಶೆ

Posted By: Super

ಏಸರ್ ಟ್ರಾವೆಲ್ ಮೇಟ್ ಲ್ಯಾಪ್ ಟಾಪ್ 8481G ವಿಮರ್ಶೆ
ಕೈಗೆಟುಕುವ ದರದಲ್ಲಿ ಅತ್ಯಧಿಕ ಗುಣಮಟ್ಟದ ಉತ್ಪನ್ನಗಳನ್ನು ನೀಡುವಲ್ಲಿ ಏಸರ್ ಕಂಪನಿ ಫೇಮಸ್ಸು. ಕಂಪನಿಯು ಶೀಘ್ರದಲ್ಲಿ ಹೊರತರಲಿರುವ ಉತ್ಪನ್ನ ಏಸರ್ ಟ್ರಾವೆಲ್ ಮೇಟ್ 8481ಜಿ. ಈ ಲ್ಯಾಪ್ ಟಾಪ್ ಉದ್ದಿಮೆದಾರರಿಗೆ ಮತ್ತು ವೃತ್ತಿಪರರಿಗೆ ಹೆಚ್ಚು ಅನುಕೂಲಕರ. .

Acer Travel Mate 8481G ವಿನ್ಯಾಸ ಆಕರ್ಷಕ. ಇದರ ಡಿಸ್ ಪ್ಲೇ 14 ಇಂಚು ಇದ್ದು, ಸ್ಕ್ರೀನ್ ರೆಸಲ್ಯೂಷನ್ 1366x768 ಫಿಕ್ಸೆಲ್ ಇದೆ. ಸೂರ್ಯನ ಕಿರಣಗಳನ್ನು ತಡೆಯಲು ಈ ಲ್ಯಾಪ್ ಟಾಪ್ ಬಾಡಿ ಪ್ಯಾನೆಲ್ ಸನ್ ಲೈಟ್ ರೆಸಿಸ್ಟೆಂಟ್ ಹೊಂದಿದೆ.

ಟ್ರಾವೇಲ್ ಮೀಟ್ 8481ಜಿ ತೂಕ ಕೇವಲ 1.6 ಕೆ.ಜಿ. ಸದ್ಯ ಮಾರುಕಟ್ಟೆಯಲ್ಲಿರುವ ಇತರ ಲ್ಯಾಪ್ ಟಾಪ್ ಗಳಿಗೆ ಹೋಲಿಸಿದರೆ ಭಾರ ಹೆಚ್ಚಾಗಿಲ್ಲ. ಇದು ತೆಳ್ಳಗಿನ ಸುಂದರಿ. ಅಂದರೆ 25 ಮಿ.ಮೀ. ದಪ್ಪಗಿದೆ ಅಷ್ಟೇ. ಇದರಲ್ಲಿ ಸಾಕಷ್ಟು ಬಳಕೆದಾರರ ಸ್ನೇಹಿ ಮತ್ತು ಭದ್ರತಾ ಫೀಚರುಗಳಿವೆ

ವಿಶೇಷತೆಗಳು

* ಹೆಸರು: ಏಸರ್ ಟ್ರಾವೆಲ್ ಮೇಟ್ 8481ಜಿ
* ಇಂಟೆಲ್ ಕೋರ್ ಐ7 2617 ಎಂ ಪ್ರೊಸೆಸರ್
* 4 ಜಿಬಿ RAM
* ಭದ್ರತಾ ಫೀಚರುಗಳು(ಫಿಂಗರ್ ಪ್ರಿಂಟ್ ರೀಡರ್ ಇತ್ಯಾದಿ)
* 4 ಯುಎಸ್ ಬಿ ಪೊರ್ಟ್ ಬಳಸಬಹುದು
* ಎಚ್ ಡಿಎಂಐ ಪೊರ್ಟ್ ಕೂಡ ಇದೆ.
* ನಿಸ್ತಂತು, ವೈಫೈ ಕನೆಕ್ಟಿವಿಟಿ
* ವೆಬ್ ಕ್ಯಾಮರಾ, ಹಡ್ ಫೋನ್, ಮೈಕ್ರೊಫೋನ್ ಇತ್ಯಾದಿ ಸಾಮಾನ್ಯ ಫೀಚರ್ಸ್
* ಬ್ಯಾಟರಿ ಬಾಳಿಕೆ ನಾಲ್ಕು ಗಂಟೆ
* ದರ: ಸುಮಾರು 90 ಸಾವಿರ ರು. (ಕಟ್ಟಿಂಗ್ ಎಡ್ಜ್, ಭದ್ರತಾ ತಂತ್ರಜ್ಞಾನ ಹಿನ್ನಲೆಯಲ್ಲಿ ಕೊಂಚ ದುಬಾರಿ).

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot