ಮೊಟೊರೊಲಾ ಹೊಸ ಕ್ಷೋಮ್ ಟ್ಯಾಬ್ಲೆಟ್ ಹೀಗಿದೆ..

ಮೊಟೊರೊಲಾ ಕ್ಷೋಮ್ 2 ಮೀಡಿಯಾ ಅಡಿಷನ್ ಟ್ಯಾಬ್ಲೆಟ್ ಕಂಪ್ಯೂಟರ್ ಆಂಡ್ರಾಯ್ಡ್ ಹನಿಕಾಂಬ್ ವರ್ಷನ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಈ ಟ್ಯಾಬ್ಲೆಟ್ ಕೊಂಚ ಹಗುರ ಮತ್ತು ಸಣ್ಣದಾಗಿ ಬಂದಿದೆ. ಅಂದರೆ ಹಳೆಯ ಕ್ಷೋಮ್ ಡಿಸ್ ಪ್ಲೇ 10.1 ಇಂಚು ವಿಶಾಲವಾಗಿತ್ತು. ಆದರೆ ಇದರ ಡಿಸ್ ಪ್ಲೇ ಗಾತ್ರ ಕೇವಲ 8.2 ಇಂಚು.
ನೂತನ ಮೊಟೊರೊಲಾ ಕ್ಷೋಮ್ 2 ಮೀಡಿಯಾ ಅಡಿಷನ್ ಡಿಸ್ ಪ್ಲೇಯಲ್ಲಿ ಇನ್ನಷ್ಟು ಹೊಸ ಆಕರ್ಷಣೆಗಳಿವೆ. ಅಂದರೆ ಐಪಿಎಸ್ ಡಿಸ್ ಪ್ಲೇ ಮತ್ತು ಆಂಡಿ ಗ್ಲೇರ್ ಕೋಟಿಂಗ್ ಇದರಲ್ಲಿ ಪ್ರಮುಖವಾದ ಫೀಚರುಗಳು. ಆಂಟಿ ಗ್ಲೇರ್ ಇರೋದ್ರಿಂದ ಬಿಸಿಲಿಗೂ ಈ ಲ್ಯಾಪ್ ಟಾಪ್ ಬಳಸುವುದು ಕಷ್ಟವಾಗೋಲ್ಲ. ಕೆಲವು ಟ್ಯಾಬ್ಲೆಟ್ ಗಳ ಡಿಸ್ ಪ್ಲೇ ಬೆಳಕಿನಲ್ಲಿ ಸ್ಪಷ್ಟವಾಗಿರೋದಿಲ್ಲ. ಈ ಸಮಸ್ಯೆ ಇದರಲ್ಲಿ ಇಲ್ಲ.
ಈ ಟ್ಯಾಬ್ಲೆಟ್ ಆಂಡ್ರಾಯ್ಡ್ ವರ್ಷನ್ 3.2ನ ಡ್ಯೂಯಲ್ ಕೋರ್ 1,200 ಮೆಗಾಹರ್ಟ್ಸ್ ಪ್ರೊಸೆಸರ್ ಹೊಂದಿದೆ. 5 ಮೆಗಾ ಫಿಕ್ಸೆಲ್ ಕ್ಯಾಮರಾವಿದೆ. ಕ್ಯಾಮರಾಕ್ಕೆ ಎಲ್ ಇಡಿ ಫ್ಲಾಷ್ ಇರೋದ್ರಿಂದ ಹೆಚ್ಚು ಆಕರ್ಷಕವಾಗಿ ಫೋಟೊ ಪಡೆಯಬಹುದು.
ಅಂದಹಾಗೆ ಈ ಟ್ಯಾಬ್ಲೆಟ್ ಗೆ ಮೀಡಿಯಾ ಅಡಿಷನ್ ಅಂತ ಹೆಸರೇಕೆ ಬಂತು? ಯಾಕೆಂದರೆ ಇದರಲ್ಲಿ ಮೀಡಿಯಾ ಕುರಿತಾದ ನಿಮ್ಮ ನಿರೀಕ್ಷೆಗಳನ್ನೆಲ್ಲ ಪೂರೈಸಲಾಗಿದೆ ಎಂದು ಕಂಪನಿ ಕೊಚ್ಚಿಕೊಂಡಿದೆ. ಅಂದರೆ ಇನ್ ಬುಲ್ಟ್ ಮ್ಯೂಸಿಕ್ ಪ್ಲೇಯರ್, ವಿಡಿಯೊ ಪ್ಲೇಯರ್, ಯುಟ್ಯೂಬ್ ಪ್ಲೇಯರ್ ಇತ್ಯಾದಿಗಳು ನಿಮಗೆ ಇಷ್ಟವಾಗಬಹುದು ಅಂತ ಕಂಪನಿ ಹೇಳಿದೆ.
ಬ್ಲೂಟೂಥ್ ಮತ್ತು ಇಂಟರ್ ನೆಟ್ ಬ್ರೌಸಿಂಗ್ ಅನುಭವ ಕೂಡ ಅತ್ಯುತ್ತಮವಾಗಿದೆ. ಇಂಟರ್ ನೆಟ್ ಬ್ರೌಸಿಂಗ್ ಎಚ್ ಟಿಎಂಎಲ್ ಮತ್ತು ಪ್ಲಾಷ್ ಸಪೋರ್ಟ್ ಹೊಂದಿದೆ.
ಪರವೂರಿಗೆ ಹೋಗುವಾಗ ಇದರಲ್ಲಿರುವ ಜಿಪಿಎಸ್ ಸಿಸ್ಟಮ್ ನಿಮಗೆ ಸಮರ್ಥವಾಗಿ ದಾರಿತೋರಿಸಲು ನೆರವಾಗಬಹುದು. ಹೀಗೆ ಹತ್ತುಹಲವು ಫೀಚರುಗಳಿರುವ ಇದರ ದರ ಭಾರತದಲ್ಲಿ ಸುಮಾರು 45 ಸಾವಿರ ರು. ಇರುವ ನಿರೀಕ್ಷೆಯಿದೆ.


Click it and Unblock the Notifications








