ಆಪಲ್ ಪರಿಷ್ಕೃತ ಒಎಸ್, ಅಪ್ ಗ್ರೇಡ್ ಮಾಡಿಕೊಳ್ಳಿ

Posted By: Staff

ಆಪಲ್ ಪರಿಷ್ಕೃತ ಒಎಸ್, ಅಪ್ ಗ್ರೇಡ್ ಮಾಡಿಕೊಳ್ಳಿ
ಆಪಲ್ ತನ್ನ ಅಪರೇಟಿಂಗ್ ಸಿಸ್ಟಮನ್ನು ಅಪ್ ಡೇಟ್ ಮಾಡುತ್ತಲೇ ಇರುತ್ತದೆ. ಇದೀಗ ಕಂಪನಿಯು ಬಹುನಿರೀಕ್ಷಿತ ಮೆಕ್ ಒಎಸ್ ಎಕ್ಸ್ 10.7.2 ಅಪರೇಟಿಂಗ್ ಸಿಸ್ಟಮ್ ಹೊರತಂದಿದೆ. ಇದರಿಂದಾಗಿ ಆಪಲ್ ಡೆಸ್ಕ್ ಟಾಪ್ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳಿಗಿನ್ನು ಇನ್ನಷ್ಟು ಶಕ್ತಿ ದೊರಕಲಿದೆ.

ಹೊಸ ಪರಿಷ್ಕೃತ ಅಪರೇಟಿಂಗ್ ಸಿಸ್ಟಮ್ ನಲ್ಲಿ ಹೊಸತು ಏನಿದೆ ಅನ್ನೋ ಪ್ರಶ್ನೆ ಸಾಮಾನ್ಯ. ಇದರಲ್ಲಿ ಸುರಕ್ಷತಾ ಫೀಚರುಗಳೆಲ್ಲ ಪರಿಷ್ಕೃತವಾಗಿದೆ. ಕ್ಲೌಡ್ ಸಪೋರ್ಟ್ ಅಪ್ಲಿಕೇಷನ್ ಗಳ ಸಂಖ್ಯೆಯೂ ಹೆಚ್ಚಾಗಿದೆ.

ಎಲ್ಲಾ ಗ್ರಾಹಕರು ತಕ್ಷಣ ತಮ್ಮ ಕಂಪ್ಯೂಟರ್ ಲ್ಯಾಪ್ ಟಾಪ್ ಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳುವಂತೆ ಆಪಲ್ ಪ್ರಕಟಿಸಿದೆ. ನೂತನ Mac OS X Lion 10.7.2 ಅಳವಡಿಸಿದರೆ ಮಾಲ್ ವೇರ್ ಇತ್ಯಾದಿ ಹ್ಯಾಕರ್ಸ್ ಸಮಸ್ಯೆಯಿಂದ ಸುರಕ್ಷಿತವಾಗಿರಬಹುದು.

ಇಷ್ಟೇ ಅಲ್ಲ. ನೂತನ ಆವೃತ್ತಿಯಲ್ಲಿ ಸಂಗ್ರಹ ಸಾಮರ್ಥ್ಯ ಹೆಚ್ಚಾಗಿದೆ. iCloud ಮೂಲಕ ಮೆಕ್ ಗ್ರಾಹಕರು ರಿಮೋಟ್ ಆಕ್ಸೆಸ್ ತಂತ್ರಜ್ಞಾನ ಬಳಸಿಕೊಳ್ಳಬಹುದು. ಫೈಂಡ್ ಮಿ ಮ್ಯಾಕ್, ಟಾಮ್ ಕ್ಯಾಟ್, ಕ್ವಿಕ್ ಟೈಮ್ ಇತ್ಯಾದಿ ಹೊಸ ಫೀಚರುಗಳಿವೆ. ಆಪಲ್ ಕಂಪ್ಯೂಟರ್, ಲ್ಯಾಪ್ ಟಾಪ್ ಇರುವರು ಅಪ್ ಗ್ರೇಡ್ ಮಾಡಿಕೊಳ್ಳಿರಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot