ಇದು ಕಾರಲ್ಲವೊ ಅಣ್ಣಾ... ಲಂಬೊರ್ಗಿನಿ ಲ್ಯಾಪ್ ಟಾಪ್!

Posted By: Staff

ಇದು ಕಾರಲ್ಲವೊ ಅಣ್ಣಾ... ಲಂಬೊರ್ಗಿನಿ ಲ್ಯಾಪ್ ಟಾಪ್!
ಆಸಸ್ ಲ್ಯಾಪ್ ಟಾಪ್ ಇಷ್ಟವಾಗಲು ಹಲವು ಕಾರಣವಿದೆ. ಮೊದಲನೆಯದಾಗಿ ಕೈಗೆಟುಕುವ ದರ. ಮತ್ತೆ ಅದರಲ್ಲಿರುವ ಫೀಚರುಗಳು, ವಾರೆಂಟಿ, ಕಾರ್ಯಕ್ಷಮತೆ ಇತ್ಯಾದಿಗಳಿಂದ ಆಸಸ್ ಲ್ಯಾಪ್ ಟಾಪ್ ಗಳು ಜನಪ್ರಿಯವಾಗಿದೆ.

ಲಂಬೊರ್ಗಿನಿ ಕಾರಿನ ಬಣ್ಣದ ಆಸಸ್ ಲಂಬೊರ್ಗಿನಿ ಲ್ಯಾಪ್ ಟಾಪ್ ಅಪ್ ಗ್ರೇಡ್ ಆವೃತ್ತಿ ಮಾರುಕಟ್ಟೆಗೆ ಬರಲಿದೆ.. ಈ ಲ್ಯಾಪ್ ಟಾಪ್ ಹೆಸರು Asus Automobili Eee PC VX6. ಇದು ವೇಗದ ದುಬಾರಿ ಕಾರು ಲಂಬೊರ್ಗಿನಿ ವಿನ್ಯಾಸವನ್ನು ಹೊಂದಿದೆ.

ಲಂಬೊರ್ಗಿನಿ ಕಾರಿನಂತೆ ಈ ಲ್ಯಾಪ್ ಟಾಪ್ ಹೆಚ್ಚು ಪವರ್ ಫುಲ್. ಯಾಕೆಂದರೆ ಇದು ಇಂಟೆಲ್ ಅಟಾಮ್ ಡಿ525 ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿದೆ.

ಇದರ ವಿನ್ಯಾಸ ಸೂಪರ್. ಈ ಲ್ಯಾಪ್ ಟಾಪ್ ಟಚ್ ಮಾಡಿದಾಗ ಸ್ಪೋರ್ಟ್ಸ್ ಕಾರು ಲಂಬೊರ್ಗಿನಿಯ ಬಾಡಿ ಟಚ್ ಮಾಡಿದಂತೆ ಆಗುತ್ತದೆ ಎಂದು ಗ್ಯಾಜೆಟ್ ಗುರು ಹೇಳುತ್ತಾರೆ. ಈ ಲ್ಯಾಪ್ ಟಾಪ್ ಆಕರ್ಷಕ ಇಂಟೆಲ್ ಎನ್ಎಂ ಎಕ್ಸ್ ಪ್ರೆಸ್ ಚಿಪ್ ಸೆಟ್ ವಿಶೇಷತೆಯ ಗ್ರಾಫಿಕ್ಸ್ ಕಾರ್ಡ್ ಹೊಂದಿದೆ.

ಇನ್ನಷ್ಟು ಫೀಚರುಗಳ ಟಿಪ್ಪಣಿ
* ಹೆಸರು: ಆಸಸ್ ಆಟೊಮೊಬಿಲಿ ಲಂಬೊರ್ಗಿನಿ ಇ ಪಿಸಿ ವಿಎಕ್ಸ್6
* 12.1 ಇಂಚಿನ ಎಲ್ ಇಡಿ ಡಿಸ್ ಪ್ಲೇ, 1366 x 768 ಪಿಕ್ಸೆಲ್ ರೆಸಲ್ಯೂಷನ್
* 1.3 ಮೆಗಾ ಫಿಕ್ಸೆಲ್ ನ ಇನ್ ಬುಲ್ಟ್ ಕ್ಯಾಮರಾ
* ಕ್ಯಾಮರಾಕ್ಕೆ ಎಎಂಡಿ ರೇಡಿಯನ್ 6470 ಎಂ ಗ್ರಾಫಿಕ್ಸ್ ಕಾರ್ಡ್ ಬೆಂಬಲ
* 4 ಜಿಬಿ ಡಿಡಿಆರ್3 RAM
* 320 ಜಿಬಿ ಹಾರ್ಡ್ ಡ್ರೈವ್( ಒಂದು ವರ್ಷ ಟ್ರಯಲ್ ವರ್ಷನ್)
* ಬ್ಲೂಟೂಥ್ ವಿ3.0 ಕನೆಕ್ಟಿವಿಟಿ, ವೈಫೈ
* ಮಲ್ಟಿ ಕಾರ್ಡ್ ರೀಡರ್, ಎಚ್ ಡಿಎಂಐ ಪೋರ್ಟ್
* ತೂಕ: 1.5 ಕೆಜಿ.
* ಲಿಥಿಯಂ ಐಯಾನ್ 6 ಸೆಲ್ ಬ್ಯಾಟರಿ

ಅತ್ಯಧಿಕ ಕಾರ್ಯಕ್ಷಮತೆಯ ಈ ಲ್ಯಾಪ್ ಟಾಪ್ ಬ್ಯಾಟರಿ ಬಾಳಿಕೆ ಅತ್ಯುತ್ತಮವಾಗಿದೆ ಎಂದು ಹೇಳಲಾಗಿದೆ. ಆದರೆ ಎಷ್ಟು ಗಂಟೆ ಬ್ಯಾಟರಿ ಬ್ಯಾಕಪ್ ಇದೆ ಎಂಬುದು ಸ್ಪಷ್ಟವಾಗಿಲ್ಲ. ಜೊತೆಗೆ ಇದರ ದರವೂ ಬಹಿರಂಗವಾಗಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot