ತೊಷಿಬಾ ಸ್ಯಾಟಲೈಟ್ ಪಿ750: ಶಕ್ತಿಮಾನ್ ಲ್ಯಾಪ್ ಟಾಪ್

Posted By: Staff

ತೊಷಿಬಾ ಸ್ಯಾಟಲೈಟ್ ಪಿ750: ಶಕ್ತಿಮಾನ್ ಲ್ಯಾಪ್ ಟಾಪ್
ನೀವು ಎಚ್ ಡಿ ಮತ್ತು 3ಡಿ ಎರಡೂ ಇರುವ ಗುಣಮಟ್ಟದ ಲ್ಯಾಪ್ ಟಾಪ್ ಹುಡುಕುತ್ತಿದ್ದೀರಾ. ಹಾಗಾದರೆ ತೊಷಿಬಾ ಸ್ಯಾಟಲೈಟ್ ಪಿ750 ಲ್ಯಾಪಿ ಖರೀದಿಸಬಹುದು. ಉತ್ಪ್ರಕ್ಷೆಯಲ್ಲ. ಈ ಲ್ಯಾಪ್ ಟಾಪ್ ನಲ್ಲಿ ಮಲ್ಟಿಟಾಸ್ಕಿನಿಂದ ಮಲ್ಟಿಮೀಡಿಯಾದವರೆಗೆ, ಮಲ್ಟಿಮೀಡಿಯಾದಿಂದ ಬ್ಯಾಟರಿ ಬ್ಯಾಕಪ್ ವರೆಗೂ ಸಾಕಷ್ಟು ಆಕರ್ಷಕ ಪ್ಯಾಕಪ್ ಇದೆ.

ಈ ಗ್ಯಾಡ್ಜೆಟ್ ಇಂಟೆಲ್ ಕಂಪನಿಯ ಉತ್ಕೃಷ್ಟ ಹೈಎಂಡ್ ಪ್ರೊಸೆಸರ್ ಹೊಂದಿದೆ. ಇದು ಎರಡನೇ ತಲೆಮಾರಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ಹೊಂದಿದೆ. ಜೊತೆಗಿದು NVIDIA ಜಿಫೋರ್ಸ್ ಜಿಟಿ540ಎಂ ಪವರ್ ಕೂಡ ಹೊಂದಿದೆ.

ಎನ್ ವಿಡಿಯಾ ಗ್ರಾಫಿಕ್ಸ್ ಕಾರ್ಡ್ ಇದ್ದರೆ ಅತ್ಯಧಿಕ ಕಾರ್ಯಕ್ಷಮತೆ ಸಿಗುತ್ತೆ ಅಂತ ಎಲ್ಲಾ ಲ್ಯಾಪ್ ಟಾಪ್ ಕಂಪನಿಗಳು ಹೇಳುತ್ತವೆ. ಜೊತೆಗೆ ಸ್ಕ್ರೀನ್ ರೆಸಲ್ಯೂಷನ್ ಕೂಡ ಜಾಸ್ತಿ ಇರಲಿದೆ. ಹೀಗಾಗಿ ಈ ಸ್ಯಾಟಲೈಟ್ ಲ್ಯಾಪ್ ಟಾಪ್ ಬೆಸ್ಟ್. ಇದು 15.6 ಇಂಚಿನ ಡಯಾಗ್ನಲ್ ಡಿಸ್ ಪ್ಲೇ ಹೊಂದಿದೆ. ಇದರಲ್ಲಿ ಹೈಡೆಫಿನೆಷನ್ ಚಿತ್ರಗಳನ್ನು ಸ್ಪಷ್ಟವಾಗಿ ನೋಡಬಹುದು.

ಡಿಸ್ ಪ್ಲೇ 3ಡಿ ಫೀಚರ್ಸ್ ಹೊಂದಿದೆ. ಈ ಲ್ಯಾಪ್ ಟಾಪ್ ನಲ್ಲಿ ಸಿನಿಮಾ, ಗೇಮ್ಸ್ ಮತ್ತು ಚಿತ್ರಗಳನ್ನು 3ಡಿ ಅನುಭವದ ಮನರಂಜನೆ ಪಡೆಯಬಹುದು. NVIDIA 3D ವಿಷನ್ ತಂತ್ರಜ್ಞಾನದಿಂದಾಗಿ ಈ ಲ್ಯಾಪ್ ಟಾಪ್ ಉಳಿದ ಲ್ಯಾಪ್ ಟಾಪ್ ಗಳಿಗಿಂತ ಭಿನ್ನವಾಗಿ ಇಷ್ಟವಾಗುತ್ತದೆ.

ಇನ್ನಷ್ಟು ಫೀಚರುಗಳ ಟಿಪ್ಪಣಿ
* 750 ಜಿಬಿ ಹಾರ್ಡ್ ಡಿಸ್ಕ್ಗ
* ಸ್ಲೀಪ್ ಆಂಡ್ ಮ್ಯೂಸಿಕ್ ಆಯ್ಕೆ(ಸಿಸ್ಟಮ್ ಆಫ್ ಆಗಿದ್ದರೂ ಎಂಪಿ3 ಪ್ಲೇ ಮಾಡಬಹುದು)
* ಗುಣಮಟ್ಟದ ಸೌಂಡ್ ನೀಡುವ ಸ್ಪೀಕರ್
* 6 ಸೆಲ್ ಬ್ಯಾಟರಿ, ಅತ್ಯುತ್ತಮ ಇಂಧನ ಕ್ಷಮತೆ
* ತೂಕ: 2.6 ಕೆಜಿ.
* 8 ಎಕ್ಸ್ ಡಿವಿಡಿ ಸೂಪರ್ ಮಲ್ಟಿ ರೈಟರ್
* 1.3 ಮೆಗಾಫಿಕ್ಸೆಲ್ ಕ್ಯಾಮರಾ
* ವೈಫೈ, ಒಂದು ವರ್ಷದ ವ್ಯಾರೆಂಟಿ
* ದರ ಕೇವಲ 40 ಸಾವಿರ ರುಪಾಯಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot