Subscribe to Gizbot

ರಾ.ಒನ್ ಸರಣಿ ಲ್ಯಾಪ್ ಟಾಪ್ ಮಾರುಕಟ್ಟೆಗೆ

Posted By: Super

ರಾ.ಒನ್ ಸರಣಿ ಲ್ಯಾಪ್ ಟಾಪ್ ಮಾರುಕಟ್ಟೆಗೆ
ರಾ.ಒನ್ ಸಿನಿಮಾ ತೆರೆಕಾಣಲು ಕ್ಷಣಗಣನೆ ಆರಂಭವಾಗಿದೆ. ಇದರ ಜನಪ್ರಿಯತೆಯನ್ನು ಎಚ್ ಸಿಎಲ್ ತನ್ನ ಲ್ಯಾಪ್ ಟಾಪ್ ಮಾರುಕಟ್ಟೆಗೆ ಬಳಸಿಕೊಳ್ಳಲು ನಿರ್ಧರಿಸಿದೆ. ರಾ.ಒನ್ ಸಿನಿಮಾ ಅಮೆರಿಕದ ಸೂಪರ್ ಹೀರೋ ಸ್ಟೋರಿಯಿಂದ ಬಂದಿದೆ. ಈ ಸಿನಿಮಾಕ್ಕೆ ಆಕರ್ಷಕ ಗ್ರಾಫಿಕ್ಸ್ ಮತ್ತು ವಿಶೇಷ ಎಫೆಕ್ಟ್ ಗಳನ್ನು ಬಳಸಲಾಗಿದೆ.

ಹೀಗಾಗಿ ಈ ಸಿನಿಮಾ ಹೈಡೆಫಿನೆಷನ್ ಫೀಚರ್ಸ್ ಹೊಂದಿದೆ. ಇದನ್ನು ನೋಡಲು ವಿಶೇಷ ಎಚ್ ಡಿ ಕಂಪ್ಯೂಟರ್ ಅಥವಾ ಟೆಲಿವಿಷನ್ ಅಗತ್ಯವಿದೆ. ಇದೀಗ ಎಚ್ ಸಿಎಲ್ ರಾ.ಒನ್ ಸರಣಿಯ ಹೈಡೆಫಿನೇಷನ್ ಲ್ಯಾಪ್ ಟಾಪ್ ಹೊರತಂದಿದ್ದು, ದೀಪಾವಳಿ ವೇಳೆಗೆ ಸಿಡಿ ಸಿಕ್ಕರೆ ಇದರಲ್ಲಿಯೇ ರಾ.ಒನ್ ಸಿನಿಮಾ ನೋಡಬಹುದು.

ರಾ.ಒನ್ ಸರಣಿ ಲ್ಯಾಪ್ ಟಾಪ್ ಪರದೆ ರಾ.ಒನ್ ಸಿನಿಮಾದ ಬ್ಯಾನರ್ ಹೊಂದಿದೆ. ಈ ಲ್ಯಾಪ್ ಟಾಪ್ ಗೆ 2 ವರ್ಷ ವ್ಯಾರೆಂಟಿ ಇದೆ. ಇದರಲ್ಲಿರುವ McAfee ಆಂಟಿವೈರಸ್ ಲೈಸನ್ಸ್ 3 ವರ್ಷ. Xite 2025, Xite 2035 ಮತ್ತು HCL ME Icon 1034 ಎಂಬ ಮೂರು ಆವೃತ್ತಿಗಳಲ್ಲಿ ರಾ.ಒನ್ ಸರಣಿಯ ಲ್ಯಾಪ್ ಟಾಪ್ ಗಳು ದೊರಕುತ್ತಿವೆ.

ಈ ಲ್ಯಾಪ್ ಟಾಪ್ ನಲ್ಲಿ ಅತ್ಯುತ್ತಮ ಗುಣಮಟ್ಟದ ಮನರಂಜನೆ ಅನುಭವ ಪಡೆಯಬಹುದು ಎಂದು ಕಂಪನಿ ಪ್ರತಿಪಾದಿಸಿದೆ. ಹೆಚ್ಚುವರಿ ಗ್ರಾಫಿಕ್ಸ್ ಕಾರ್ಡ್, ಗುಣಮಟ್ಟದ ಸೌಂಡ್ ನೀಡುವ ಸ್ಟೀರಿಯೊ ಸಿಸ್ಟಮ್, ಸ್ಲಿಮ್ ಪ್ಯಾನೆಲ್, ಎಲ್ ಇಡಿ ಬ್ಯಾಕ್ ಲಿಟ್ ಸ್ಕ್ರೀನ್ ಇದರಲ್ಲಿ ಗಮನ ಸೆಳೆಯುವ ಅಂಶಗಳು.

ಎಚ್ ಸಿಎಲ್ ವೆಬ್ ಸೈಟ್ ಮೂಲಕ ನೀವು HCL Ra.One ಲ್ಯಾಪ್ ಟಾಪ್ ಖರೀದಿಸಬಹುದು. ಈ ತಿಂಗಳ ಅಂತ್ಯದವರೆಗೆ ಈ ಲ್ಯಾಪ್ ಟಾಪ್ ಮೇಲೆ ವಿಶೇಷ ಆಫರುಗಳು ಇವೆಯಂತೆ. ಅಂದಹಾಗೆ Ra.One ME Xite ಮತ್ತು Icon ಸರಣಿ ಲ್ಯಾಪ್ ಟಾಪ್ ದರ 32 ಸಾವಿರ ರು.ನಿಂದ 42 ಸಾವಿರ ರು.ವರೆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot