ಸೋನಿ ತಂದಿದೆ ಸಖತ್ ವೆಯೊ ಲ್ಯಾಪ್ ಟಾಪ್

By Super
|
ಸೋನಿ ತಂದಿದೆ ಸಖತ್ ವೆಯೊ ಲ್ಯಾಪ್ ಟಾಪ್
ಗ್ರಾಹಕರಿಗೆ ಗುಣಮಟ್ಟದ ಎಲೆಕ್ಟ್ರಾನಿಕ್ ಸಾಧನ ನೀಡುವಲ್ಲಿ ಮುಂದಿರುವ ಸೋನಿ, ನೂತನ ಶೈಲಿಯ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸೋನಿ ವೆಯೊ ಸಿರೀಸ್ ಲ್ಯಾಪ್ ಟಾಪ್ ಬಿಡುಗಡೆ ಮಾಡಿದೆ.

ಈ ಲ್ಯಾಪ್ ಟಾಪ್ ಅತ್ಯಾಧುನಿಕವೆನಿಸಿದ ಇಂಟೆಲ್ ಕೋರ್ i5-241 OM ಪ್ರೊಸೆಸರ್ ಮತ್ತು ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿದ್ದು, ಇದರ ವೇಗ 2.30 GHz ಆಗಿದೆ. ಜೊತೆಗೆ ಇಂಟೆಲ್ ಟರ್ಬೊ ಬೂಸ್ಟ್ ತಂತ್ರಜ್ಞಾನವನ್ನೂ ಒಳಗೊಂಡಿದ. ಇದರಲ್ಲಿರುವ ಇಂಟೆಲ್ HD ಗ್ರಾಫಿಕ್ಸ್ 3000 ಗೇಮಿಂಗ್ ಮತ್ತು ಸಿನಿಮಾ ವೀಕ್ಷಣೆಗೆ ಉತ್ತಮವಾಗಿದೆ.

ವೆಯೊ ಇ ಎಚ್ ಸಿರೀಸ್ ಲ್ಯಾಪ್ ಟಾಪ್ ವಿಶೇಷತೆ:
* 14.56 x 1.24 x 9.78 ಇಂಚು ಸುತ್ತಳತೆ
* 15.5 ಇಂಚಿನ ಸ್ಕ್ರೀನ್, 1366 x 768 ರೆಸೊಲ್ಯೂಷನ್
* LED ಬ್ಯಾಕ್ ಲೈಟ್ ತಂತ್ರಜ್ಞಾನ
* ಮೆಮೊರಿ ಸಾಮರ್ಥ್ಯ: HDD ಜೊತೆ 640ಜಿಬಿ ಸಾಮರ್ಥ್ಯ
* ಚಾಟಿಂಗ್ ಮತ್ತು ಕಾನ್ಫೆರೆನ್ಸ್ ಗೆ ಇನ್ ಬಿಲ್ಟ್ ಕ್ಯಾಮೆರಾ ಜೊತೆ ಮೋಶನ್ ಐ ಮತ್ತು ಮೈಕ್ರೊ ಫೋನ್
* 3.0 ಪ್ಲಸ್ HS ಬ್ಲೂಟೂಥ್ ತಂತ್ರಜ್ಞಾನ, ವೈ-ಫೈ

4000 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಲ್ಯಾಪ್ ಟಾಪ್, ಡಿವಿಡಿ ಪ್ಲೇ ಬ್ಯಾಕ್ 3.5 ಗಂಟೆ, ಡಿಫಾಲ್ಟ್ ಬ್ರೈಟ್ ನೆಸ್ 5 ಗಂಟೆ ನೀಡಲಿದೆ. ಇದರೊಂದಿಗೆ ಬ್ಲೂ-ರೆ ಡಿಸ್ಕ್ ಪ್ಲೇಯರ್ ಇರುವುದು ವಿಶೇಷವೆನಿಸಿದೆ.

ಅನೇಕ ಬಣ್ಣಗಳಲ್ಲಿ ಲಭ್ಯವಿರುವ ಈ ಲ್ಯಾಪ್ ಟಾಪ್ ಜಿಯೋಮೆಟ್ರಿಕ್ ರೀತಿಯಲ್ಲಿದೆ ಅತ್ಯಾಕರ್ಷಕವಾಗಿರುವ ಇದರ ಬೆಲೆಯೂ ಹೆಚ್ಚೇನಿಲ್ಲ. ಈ ಸೋನಿ ವೆಯೋ ಇ ಎಚ್ ಸಿರೀಸ್ ಬೆಲೆ 30,000ರು ನಲ್ಲಿ ನಿಮಗೆ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X