ಎಚ್ ಪಿ ಪೆವಿಲಿಯನ್ ಹೊಸ ಲ್ಯಾಪ್ ಟಾಪ್ ಬೇಕೆ?

Posted By: Staff

ಎಚ್ ಪಿ ಪೆವಿಲಿಯನ್ ಹೊಸ ಲ್ಯಾಪ್ ಟಾಪ್ ಬೇಕೆ?
ದೇಶದ ಮಾರುಕಟ್ಟೆಯಲ್ಲಿ ಮನರಂಜನಾ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರುಗಳು ಜನಪ್ರಿಯವಾಗುತ್ತಿವೆ. ಸಾಕಷ್ಟು ಎಫೆಕ್ಟ್ಸ್ ಮತ್ತು ಹೈ ಡೆಫಿನೇಷನ್ ವಿಡಿಯೋ ಮೂಲಕ ಸಿನಿಮಾವನ್ನು ಲ್ಯಾಪ್ ಟಾಪ್ ಗಳಲ್ಲಿ ನೋಡಲು ಜನರು ಬಯಸುತ್ತಾರೆ.

ಗ್ರಾಹಕರಿಗೆ ಅನನ್ಯ ವೀಕ್ಷಣೆ ಅನುಭವ, ಅತ್ಯುತ್ತಮ ಸೌಂಡ್ ಗುಣಮಟ್ಟ ಮತ್ತು ಹೆಚ್ಚು ರೆಸಲ್ಯೂಷನ್ ನೀಡುವಂತೆ ಮಾಡಲು ಕಂಪನಿಗಳು ಪ್ರಯತ್ನಿಸುತ್ತಿವೆ. ಇದು ಹೆಚ್ಚಿನ ಲ್ಯಾಪ್ ಟಾಪ್ ಕಂಪನಿಗಳಿಗೆ ಒಂದು ಸವಾಲು. ಇಂತಹ ಫೀಚರುಗಳನ್ನು ಹೊಂದಿರುವ ಲ್ಯಾಪ್ ಟಾಪ್ ಗಳನ್ನು ಕಡಿಮೆ ದರಕ್ಕೆ ನೀಡುವುದು ಮತ್ತೊಂದು ರೀತಿಯಲ್ಲಿ ಸವಾಲು ಆಗಿದೆ.

ಇದೀಗ ಎಚ್ ಪಿ ಇಂತಹ ಒಂದು ಉತ್ಪನ್ನವನ್ನು ಪೆವಿಲಿಯನ್ ಸರಣಿಯಲ್ಲಿ ಪರಿಚಯಿಸಿದೆ. ಅದರ ಹೆಸರು HP Pavilion dv6-6165tx. ಈ ಎಂಟರ್ಟೈನ್ ಮೆಂಟ್ ಲ್ಯಾಪ್ ಟಾಪ್ ಕೈಗೆಟಕುವ ದರ ಮತ್ತು ಅತ್ಯುತ್ತಮ ಫೀಚರುಗಳೊಂದಿಗೆ ಬಂದಿದೆ. ಈ ಲ್ಯಾಪ್ ಟಾಪ್ ದರ 55 ಸಾವಿರ ರು.ನಿಂದ 65 ಸಾವಿರ ರು.ವರೆಗಿದೆ.

ವಿಶೇಷತೆಗಳು
* ಇಂಟೆಲ್ ಕೋರ್ ಐ7-2670 ಕ್ಯೂಎಂ ಪ್ರೊಸೆಸರ್
* ಎಎಂಡಿ ಗ್ರಾಫಿಕ್ಸ್ ಕಾರ್ಡ್ ಬೆಂಬಲ
* ರೆಡಿಯನ್ ಎಚ್ ಡಿ 6770ಎಂ
* 4 ಜಿಬಿ ಮೆಮೊರಿ
* 16 ಜಿಬಿ ಡಿಡಿಆರ್3
* ಎಚ್ಎಂ65 ಎಕ್ಸ್ ಪ್ರೆಸ್ ಚಿಪ್ ಸೆಟ್
* 6 ಎಂಬಿ ಮೈಕ್ರೊಪ್ರೊಸೆಸರ್ ಕಾಚ್(cache)
* 16.6 ಇಂಚಿನ ಹೈಡೆಫಿನೆಷನ್ ಎಲ್ಇಡಿ ಡಿಸ್ ಪ್ಲೇ
* 750 ಜಿಬಿಯ SATA ಹಾರ್ಡ್ ಡಿಸ್ಕ್
* ವಿಂಡೋಸ್ 7 ಹೋಮ್ ಪ್ರೀಮಿಯಂ ಅಪರೇಟಿಂಗ್ ಸಿಸ್ಟಮ್
* ವೆಬ್ ಕ್ಯಾಮ್, ಫಿಂಗರ್ ಪ್ರಿಂಟ್ ರೀಡರ್, ಬ್ಲೂಟೂಥ್, ವೈಫೈ
* ಗಿಗಾಬಿಟ್ ಎಥರ್ನೆಟ್ LAN
* 2 ಯುಎಸ್ ಬಿ 2.0 ಮತ್ತು ಯುಎಸ್ ಬಿ 3.0 ಪೋರ್ಟ್
* ಡಿಜಿಟಲ್ ಮೀಡಿಯಾ ಕಾರ್ಡ್ ಮಲ್ಟಿ ಫಾರ್ಮೆಟ್ ರೀಡರ್
* ದರ: 55 ಸಾವಿರ ರು.ನಿಂದ 60 ಸಾವಿರ ರು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot