ಬ್ಯಾಂಡ್ವಿಡ್ತ್ ಮಾನಿಟರ್ ಮಾಡಲು 5 ಉತ್ತಮ ವಿಂಡೋಸ್ 10 ಸಾಧನಗಳು

By Tejaswini P G
|

ನೀವು ಯಾವುದೋ ಫೈಲ್ಗಳನ್ನು ಇಂಟರ್ನೆಟ್ ನಿಂದ ಇನ್ನೇನು ಡೌನ್ಲೋಡ್ ಮಾಡಬೇಕೆಂದಿರುವಾಗ ನಿಮ್ಮ ಬ್ಯಾಂಡ್ವಿಡ್ತ್ ನ ಕೋಟಾ ಖಾಲಿಯಾದರೆ ಸಿಟ್ಟುಬರದಿರುತ್ತದೆಯೇ? ಅಲ್ಲದೆ ನಿಮ್ಮ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ ಸಾಮಾನ್ಯವಾಗಿ ನಿಮಗೆ ಇಂತಿಷ್ಟು ನಿಯಮಿತ ಅಪ್ಲೋಡ್ ಮತ್ತು ಡೌನ್ಲೋಡ್ ಕೋಟಾ ಎಂದು ನಿಗದಿಪಡಿಸಿರುತ್ತಾರೆ. ಅದಕ್ಕಿಂತ ಹೆಚ್ಚಿನ ಬ್ಯಾಂಡ್ವಿಡ್ತ್ ಬಳಸಿದಲ್ಲಿ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

ಬ್ಯಾಂಡ್ವಿಡ್ತ್ ಮಾನಿಟರ್ ಮಾಡಲು 5 ಉತ್ತಮ ವಿಂಡೋಸ್ 10 ಸಾಧನಗಳು

ಇಂತಹ ಸಂದರ್ಭಗಳಲ್ಲಿ ಎಷ್ಟು ಬ್ಯಾಂಡ್ವಿಡ್ತ್ ಬಳಸಿದ್ದೇವೆ ಎಂದು ಸದಾ ಗಮನದಲ್ಲಿರಿಸಿಕೊಳ್ಳುವುದು ಉತ್ತಮ. ಅಲ್ಲದೆ ನೆಟ್ವರ್ಕ್ ಕಂಜೆಶನ್, ಇಂಟರ್ನೆಟ್ ಕನೆಕ್ಶನ್ ನ ನಿಜವಾದ ವೇಗ ಇತ್ಯಾದಿಗಳ ಕುರಿತು ಗಮನಹರಿಸುವುದು ಒಳಿತು. ಈ ಲೇಖನದಲ್ಲಿ ನಾವು ಇಂಟರ್ನೆಟ್ ಬಳಕೆಯನ್ನು ಮಾನಿಟರ್ ಮಾಡುವ ಸಲುವಾಗಿ ಲಭ್ಯವಿರುವ ಉಚಿತ ಮತ್ತು ಉತ್ತಮ 5 ಬ್ಯಾಂಡ್ವಿಡ್ತ್ ಮಾನಿಟರಿಂಗ್ ಟೂಲ್ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ.

ಬಿಟ್ಮೀಟರ್ ಓಎಸ್

ಬಿಟ್ಮೀಟರ್ ಓಎಸ್

ಇದೊಂದು ಉಚಿತ ಮತ್ತು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದ್ದು ಮ್ಯಾಕ್ ಓಎಸ್, ವಿಂಡೋಸ್ ಮತ್ತು ಲಿನಕ್ಸ್ ನಲ್ಲಿ ಇಂಟರ್ನೆಟ್ ವೇಗವನ್ನು ಮಾನಿಟರ್ ಮಾಡಲು ಬಳಸಬಹುದಾಗಿದೆ. ಈ ಟೂಲ್ ಮೂಲಕ ನೀವು ನಿಮ್ಮ ಇಂಟರ್ನೆಟ್ ಬಳಕೆಯನ್ನು ವಿವಿಧ ಗ್ರಾಫ್ ಮತ್ತು ಚಾರ್ಟ್ಗಳ ಮೂಲಕ ವೆಬ್ ನಲ್ಲಿ ಕಾಣಬಹುದು.

ಇಲ್ಲಿ ಮಾನಿಟರ್ ಮೇಲೆ ಗ್ರಾಫ್ಗಳು ಪ್ರತಿ ಸೆಕೆಂಡ್ ಗೆ ಅಪ್ಡೇಟ್ ಆಗುತ್ತಿರುತ್ತದೆ. ಅಲ್ಲದೆ ನಿಮ್ಮ ಬ್ಯಾಂಡ್ವಿಡ್ತ್ ಬಳಕೆ ಅದರ ಮಿತಿಯನ್ನು ದಾಟಿದಾಗ ನೋಟಿಫೀಕೇಶನ್ ಮತ್ತು ಎಲರ್ಟ್ಗಳನ್ನು ನೀಡುವಂತೆ ಸೆಟ್ ಮಾಡಬಹುದು.

ಫ್ರೀಮೀಟರ್ ಬ್ಯಾಂಡ್ವಿಡ್ತ್ ಮಾನಿಟರ್

ಫ್ರೀಮೀಟರ್ ಬ್ಯಾಂಡ್ವಿಡ್ತ್ ಮಾನಿಟರ್

ಈ ಟೂಲ್ ಒಂದು ಲೈಟ್-ವೇಯ್ಟ್ ಟೂಲ್ ಆಗಿದ್ದು ಬಳಸಲು ಸರಳವಾಗಿದೆ. ನಿಮ್ಮ ನೆಟ್ವರ್ಕ್ ನ ವೇಗವನ್ನು ಮಾನಿಟರ್ ಮಾಡುವುದಲ್ಲದೆ ವಿಶ್ಲೇಷಣೆಯನ್ನೂ ಮಾಡಬಹುದು. ಅಲ್ಲದೆ ಯಾವುದೇ ಡೇಟಾ ಅನ್ನು ರಿಯಲ್ ಟೈಮ್ ನಲ್ಲಿ ದೃಶ್ಯಗಳ ಮೂಲಕ ನಿರೂಪಿಸುವ ಸಾಮರ್ಥ್ಯ ಹೊಂದಿದೆ. ಈ ಟೂಲ್ನೊಂದಿಗೆ ಚಿಕ್ಕದೊಂದು ಡಿಸ್ಪ್ಲೇ ಇದ್ದು, ಈ ಡಿಸ್ಪ್ಲೇ ಅನ್ನು ನಿಮ್ಮ ಮಾನಿಟರ್ ನ ಯಾವ ಭಾಗದಲ್ಲಾದರೂ ಇರಿಸಬಹುದು. ಈ ಡಿಸ್ಪ್ಲೇ ಯ ಬಣ್ಣ, ಡಾರ್ಕ್ನೆಸ್ ಲೆವೆಲ್, ಡೀಫಾಲ್ಟ್ ಫ್ರೇಮ್ ಮೊದಲಾದವುಗಳನ್ನು ಬೇಕಾದಂತೆ ಬದಲಾಯಿಸಬಹುದು.

ಶಾಪ್ಲಸ್ ಬ್ಯಾಂಡ್ವಿಡ್ತ್ ಮೀಟರ್

ಶಾಪ್ಲಸ್ ಬ್ಯಾಂಡ್ವಿಡ್ತ್ ಮೀಟರ್

ಚಿಕ್ಕದೊಂದು ವಿಂಡೋ ಪೇನ್ ನೊಂದಿಗೆ ಬರುವ ಈ ಟೂಲ್ ಒಂದು ದಿನದ ಅಥವ ಪೂರ್ತಿ ತಿಂಗಳಿನ ನೆಟ್ವರ್ಕ್ ಟ್ರ್ಯಾಫಿಕ್ ಸ್ಟೇಟಸ್ ನೀಡುತ್ತದೆ. ಇದು ನಿಮ್ಮ ಸಿಸ್ಟಮ್ ಗೆ ಹೆಚ್ಚಿನ ಒತ್ತಡವನ್ನು ಹಾಕದೆ ಲಭ್ಯವಿರುವ ಹಾರ್ಡ್ವೇರ್ ಬಳಸುತ್ತಲೇ ತನ್ನ ಕಾರ್ಯ ನಿರ್ವಹಿಸುತ್ತದೆ.

ಮಾರುಕಟ್ಟೆಯನ್ನೇ ದಂಗಾಗಿಸಿದ ಹಾಂಕಾಂಗ್ ಮೂಲದ ಹೊಸ ಸ್ಮಾರ್ಟ್‌ಫೋನ್!..ರೆಡ್‌ಮಿ ನೋಟ್ 4 ವೇಸ್ಟ್!!ಮಾರುಕಟ್ಟೆಯನ್ನೇ ದಂಗಾಗಿಸಿದ ಹಾಂಕಾಂಗ್ ಮೂಲದ ಹೊಸ ಸ್ಮಾರ್ಟ್‌ಫೋನ್!..ರೆಡ್‌ಮಿ ನೋಟ್ 4 ವೇಸ್ಟ್!!

ಬ್ಯಾಂಡ್ವಿಡ್ತ್ ಡಿ

ಬ್ಯಾಂಡ್ವಿಡ್ತ್ ಡಿ

ಇದು ಕೂಡ ಒಂದು ಉಚಿತ ಟೂಲ್ ಆಗಿದ್ದು, ಬ್ಯಾಕ್ಗ್ರೌಂಡ್ ನಲ್ಲಿ ಕಾರ್ಯನಿರ್ವಹಿಸುತ್ತಾ ನಿಮ್ಮ ಇಂಟರ್ನೆಟ್ ಬಳಕೆಯನ್ನು ಮಾನಿಟರ್ ಮಾಡುತ್ತದೆ.ಪ್ರತೀ ಐಪಿ ಆಡ್ರೆಸ್ ನ ಇಂಟರ್ನೆಟ್ ಬಳಕೆಯನ್ನು ಪ್ರತೀ 3.3 ನಿಮಿಷ, 10 ನಿಮಿಷ , 1 ಘಂಟೆ ಅಥವಾ 12 ಘಂಟೆಗಳಿಗೆ ಲಾಗ್ ಮಾಡಬಹುದು.ಹೀಗೆ ರೆಕಾರ್ಡ್ ಮಾಡಿದ ಲಾಗ್ ಗಳು ಸಿಡಿಎಫ್ ಫಾರ್ಮ್ಯಾಟ್ನಲ್ಲಿ ಲಭ್ಯವಿರುತ್ತದೆ ಅಥವಾ ನೇರವಾಗಿ ಬ್ಯಾಕೆಂಡ್ ಸರ್ವರ್ನಿಂದ ಎಕ್ಸ್ಪೋರ್ಟ್ ಮಾಡಬಹುದು.

ಮಾನಿಟರ್ ಬ್ಯಾಂಡ್ವಿಡ್ತ್ ಯೂಸೇಜ್ ಸಾಫ್ಟ್ವೇರ್

ಮಾನಿಟರ್ ಬ್ಯಾಂಡ್ವಿಡ್ತ್ ಯೂಸೇಜ್ ಸಾಫ್ಟ್ವೇರ್

ಈ ಟೂಲ್ನಲ್ಲಿದೆ ಅತ್ಯಂತ ಸರಳ ಮತ್ತು ರೆಸ್ಪಾನ್ಸಿವ್ ಇಂಟರ್ಫೇಸ್. ಇದರಲ್ಲಿ ಇಂಟರ್ನೆಟ್ ಬಳಕೆಗೆ ಸಂಬಂಧಿಸಿದ ಹೆಚ್ಚಿನ ಚಟುವಟಿಕೆಗಳನ್ನು ನೋಡಬಹುದು. ಈ ಟೂಲ್ ತುಂಬ ವೇಗವಾಗಿ ಮತ್ತು ಕ್ಷಮತೆಯಿಂದ ತನ್ನ ಕಾರ್ಯನಿರ್ವಹಿಸುತ್ತದೆ. ಒಂದು ಸೆಕೆಂಡ್ ನಿಂದ ಹಿಡಿದು 24 ಘಂಟೆಗಳ ಕಾಲ ಮಾನಿಟರಿಂಗ್ ಫಂಕ್ಷನ್ ಅನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಇದಕ್ಕಿದೆ.

Best Mobiles in India

English summary
At times, it gets really annoying when you are about to download a file from the Internet and all of a sudden, your bandwidth quota is over. In this article, today, we have listed out 5 top free bandwidth monitoring tools that will help you monitor internet consumption.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X