ಐದು ಇಂಚಿನ ಟ್ಯಾಬ್ಲೆಟ್, ಇದು ಲೆನೊವೊ ವಿಶೇಷ

Posted By: Staff
ಐದು ಇಂಚಿನ ಟ್ಯಾಬ್ಲೆಟ್, ಇದು ಲೆನೊವೊ ವಿಶೇಷ
ಇದೀಗ ಡಿಜಿಟಲ್ ಲೋಕದಲ್ಲಿ ಟ್ಯಾಬ್ಲೆಟ್ ಕಂಪ್ಯೂಟರ್ ವಿಶಾಲ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಜಾಗತಿಕವಾಗಿ ವ್ಯಾಪಿಸಿರುವ ಗ್ರಾಹಕರು ಟ್ಯಾಬ್ಲೆಟ್ ಇಷ್ಟಪಡುತ್ತಿದ್ದಾರೆ. ನನ್ನಲೂ ಒಂದು ಟ್ಯಾಬ್ಲೆಟ್ ಇರಲಿ ಎನ್ನುತ್ತ ಟ್ಯಾಬ್ಲೆಟ್ ಕಂಪ್ಯೂಟರ್ ಖರೀದಿಸುತ್ತಿದ್ದಾರೆ.

ಟ್ಯಾಬ್ಲೆಟ್ ತಯಾರಿಸುವಲ್ಲಿ ಜಾಗತಿಕ ಕಂಪನಿಗಳು ಮಾತ್ರವಲ್ಲದೇ ಸ್ಥಳೀಯ ಕಂಪನಿಗಳೂ ಹಿಂದೆ ಬಿದ್ದಿಲ್ಲ. ಆಕಾಶ್ ನಂತಹ ಅಗ್ಗದ ಟ್ಯಾಬ್ಲೆಟ್ ನೀಡಿರುವರು ನಾವು. ಆದರೆ ಹೆಚ್ಚಿನ ಟ್ಯಾಬ್ಲೆಟ್ ಗಳು ಏಕೀಕೃತ ಫೀಚರುಗಳಿಂದ ಕೊಂಚ ಬೋರ್ ಹೊಡೆಸುತ್ತಿರುವುದು ನಿಜವೆಂದು ಎಲ್ಲರೂ ಒಪ್ಪಿಕೊಳ್ಳಬಹುದು.

ಕಂಪನಿಯ ಹೆಸರು ಯಾವುದೇ ಇರಲಿ. ಎಲ್ಲದರಲ್ಲೂ ಒಂದೇ ರೀತಿಯ ಫೀಚರುಗಳು, ಅಪ್ಲಿಕೇಷನ್ ಗಳು, ವಿಶೇಷತೆಗಳು ಕಾಣಸಿಗುತ್ತವೆ. ಆದರೆ ಇಂತಹ ವಾತವರಣದಲ್ಲಿ ಶುಭಸುದ್ದಿ ಲೆನೊವೊ ಕಂಪನಿಯ ಕಡೆಯಿಂದ ಬಂದಿದೆ. ಕಂಪನಿಯು ಟ್ಯಾಬ್ಲೆಟ್ ಕಂಪ್ಯೂಟರಿನ ವ್ಯಾಖೆಯನ್ನೇ ಬದಲಾಯಿಸಲು ಹೊರಟಿದೆ.

ಕೇವಲ 5 ಇಂಚು ವಿಶಾಲವಾದ ಡಿಸ್ ಪ್ಲೇ ಇರುವ ಟ್ಯಾಬ್ಲೆಟನ್ನು ಮಾಡಲು ಲೆನೊವೊ ಮುಂದಾಗಿದೆ. ಕಂಪನಿಯು ಇದನ್ನು ಶೀಘ್ರದಲ್ಲಿ ಮಾರುಕಟ್ಟೆಗೆ ಹೊರತರಲಿದೆ ಎಂದು ವರದಿಗಳು ಹೇಳಿವೆ. ಆದರೆ ಒಂದು ಬೇಜಾರಿನ ವಿಷಯ ಏನಪ್ಪ ಅಂದ್ರೆ ಈ ಟ್ಯಾಬ್ಲೆಟ್ ವಿಶೇಷತೆ ಕುರಿತು ಇನ್ನೂ ಕಂಪನಿ ಬಾಯಿ ಬಿಟ್ಟಿಲ್ಲ.

ಅಸಲಿಗೆ ಐದು ಇಂಚಿನ ಟ್ಯಾಬ್ಲೆಟಿಗೆ ಇನ್ನೂ ನಾಮಕರಣವೇ ಆಗಿಲ್ಲ. ಆದರೆ ಲೆನೊವೊ ಟ್ಯಾಬ್ಲೆಟ್ ಚಿತ್ರ ಈಗಾಗಲೇ ಲೀಕ್ ಆಗಿದೆ. ಅದನ್ನು ನೋಡಿ ಅದರ ಜಾತಕ ಬರೆಯಬಹುದು. ಅದರ ಚಿತ್ರ ನೋಡಿದಾಗ ಮುಂಭಾಗದಲ್ಲಿ ಕ್ಯಾಮರಾ ಇರುವುದು ಸ್ಪಷ್ಟವಾಗಿದೆ. ಹಿಂಭಾಗದಲ್ಲೂ ಕ್ಯಾಮರಾ ಇರಬಹುದು ಎಂದು ಚಿಕ್ಕಮಕ್ಕಳೂ ಊಹಿಸಬಹುದು!

ಮೈಕ್ರೊ ಯುಎಸ್ ಬಿ ಮತ್ತು ಎಚ್ ಡಿಎಂಐ ಪೋರ್ಟ್ ಇರಲಿದೆಯಂತೆ. ಆದರೆ ಗ್ಯಾಡ್ಜೆಟ್ ಗುರು ಪ್ರಕಾರ ಇದು ಐಸ್ ಕ್ರೀಮ್ ಸ್ಯಾಂಡ್ ವಿಚ್ ಅಪರೇಟಿಂಗ್ ಸಿಸ್ಟಮ್ ಹೊಂದರಲಿಲ್ಲವಂತೆ. ಆದರೆ ಆಕ್ಸೆಸ್ ಮಾಡುವುದು ಐಸ್ ಕ್ರೀಮ್ ನಷ್ಟೇ ಸವಿಯಾಗಿದ್ದರೆ ಸಾಕು ಅಲ್ಲವೇ?

ಅದರ ಮಾಹಿತಿ, ವಿಶೇಷತೆಗಳ ಕುರಿತು ಊಹಿಸಲು ಇನ್ನೂ ಸಮಯವಾಗಿಲ್ಲ. ಯಾಕೆಂದರೆ ಅದು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಲೆನೊವೊ ಟ್ಯಾಬ್ಲೆಟ್, ಕಂಪ್ಯೂಟರ್, ಲ್ಯಾಪ್ ಟಾಪ್ ದರಗಳು ಯಾವತ್ತಿಗೂ ಕೈಗೆಟುಕುವ ಹಂತದಲ್ಲಿರುತ್ತದೆ. ನೂತನ ಐದು ಇಂಚಿನ ಟ್ಯಾಬ್ಲೆಟ್ ದರ ಕೂಡ ಅಗ್ಗವಾಗಿರುವ ನಿರೀಕ್ಷೆಯಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot