ಲ್ಯಾಪ್ಟಾಪ್ ಗೆ ಬೆಂಕಿ ಬೀಳದಿರಲು 5 ಟಿಪ್ಸ್

Posted By: Varun
ಲ್ಯಾಪ್ಟಾಪ್ ಗೆ ಬೆಂಕಿ ಬೀಳದಿರಲು 5 ಟಿಪ್ಸ್

ಇತ್ತೀಚಿಗೆತಾನೇ ದೆಹಲಿಯ ಬಿ.ಪಿ.ಓ ನೌಕರನೊಬ್ಬ ಲ್ಯಾಪ್ಟಾಪ್ ನಿಂದ ಬೆಂಕಿ ಹತ್ತಿಕೊಂಡ ಪರಿಣಾಮಸಾವನ್ನಪ್ಪಿದ್ದ. ಈ ಥರದ ಘಟನೆಗಳು ಅಪರೂಪವೆನಿಸಿದರೂ ನಮ್ಮ ಹುಷಾರಿನಲ್ಲಿ ನಾವಿದ್ದರೆ ಅಂತಹಅಪಘಾತಗಳನ್ನ ತಡೆಗಟ್ಟಬಹುದು. ಬೆಂಕಿಯ ಅಪಘಾತವಾಗದಂತೆ ಲ್ಯಾಪ್ ಟಾಪ್ ಅನ್ನುರಕ್ಷಿಸಿಕೊಳ್ಳಲೆಂದೇಈ 5ಸಲಹೆಗಳು ನಿಮಗಾಗಿ.

1. ಅಸಲಿ ಬ್ಯಾಟರಿ ಮತ್ತು ಚಾರ್ಜರ್ ಗಳನ್ನೇ ಬಳಸಿ- ಮಾರುಕಟ್ಟೆ ಯಲ್ಲಿ ಸಿಗುವ ಅಗ್ಗದ ಬ್ಯಾಟರಿಮತ್ತು ಚಾರ್ಜರ್ ಕೊಳ್ಳಬೇಡಿ. ಕಡಿಮೆ ಬೆಲೆಯ ವಸ್ತುಗಳು ಮೂಲ ವಸ್ತುವಷ್ಟೇ ಸಮರ್ಪಕವಾಗಿ ಕೆಲಸಮಾಡದು.

2. ಹಾಸಿಗೆಯ ಮೇಲೆ ಲ್ಯಾಪ್ಟಾಪ್ ಅನ್ನ ಎಂದೂ ಇಡಬೇಡಿ- ಅನುಕೂಲಕ್ಕೆಂದು ನಾವು ಮಲಗಿಕೊಂಡೂಲ್ಯಾಪ್ಟಾಪ್ ಉಪಯೋಸುತ್ತೇವೆ. ಮರೆತು ನಿದ್ದೆ ಮಾಡಿ ಹಾಗೆ ಬಿಟ್ಟರೆ ಲ್ಯಾಪ್ಟಾಪ್ ಕೆಳಗಿನ ಭಾಗದಕೂಲಿಂಗ್ ವ್ಯವಸ್ಥೆಗೆ ಸರಿಯಾಗಿ ಗಾಳಿ ಬರದೆ ಅಸಮರ್ಪಕವಾಗಿ ಕೆಲಸ ಮಾಡುವ ಸಾಧ್ಯತೆಗಳಿವೆ.ಅದರಿಂದ ಲ್ಯಾಪ್ಟಾಪ್ ಬಿಸಿಯಾಗಬಹುದು. ಹಾಸಿಗೆಯ ಧೂಳು ಕೂಡ ಲ್ಯಾಪ್ಟಾಪ್ ಗೆ ಹಾನಿಕರ.

3. ಕೂಲಿಂಗ್ ಪ್ಯಾಡ್ ಉಪಯೋಗಿಸಿ- ಲ್ಯಾಪ್ಟಾಪ್ ನ ತಾಪಮಾನ ಹೆಚ್ಚದಂತೆ ತಡೆಗಟ್ಟಬಹುದು.

4. ಸಿಗರೇಟ್ ಸೇದಬೇಡಿ- ಸಿಗರೇಟ್ ನ ಬೂದಿ ಲ್ಯಾಪ್ಟಾಪ್ ಅನ್ನು ಹಾನಿ ಮಾಡಬಹುದು.

5. ಹೆಚ್ಚು ಕ್ಷಮತೆಯ ಸ್ಟೆಬಲೈಜರ್ ಉಪಯೋಗಿಸಿ - ಶಾಕ್ ಹಾಗು ವೋಲ್ಟೇಜ್ ನಲ್ಲಿ ಏರುಪೇರು ಆದರೆಬೆಂಕಿ ಹಚ್ಚಿಕೊಳ್ಳುವ ಸಾಧ್ಯತೆ ಹೆಚ್ಚು. ಅದರಿಂದ ಕ್ಷಮತೆಯಿಂದ ಕೆಲಸ ಮಾಡುವ ಸ್ಟೆಬಲೈಜರ್ಉಪಯೋಗಿಸಿ.

ಇದಲ್ಲದೆ ಕೆಲವು ತಂತ್ರಾಂಶಗಳೂ ಲ್ಯಾಪ್ಟಾಪ್ ನ ತಾಪಮಾನ ಹೆಚ್ಚದಂತೆ ನೋಡಿಕೊಳ್ಳುತ್ತವೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot