ಈ 6 ಮಾದರಿಯ ಪೋರ್ಟ್ ಗಳ ಬಗ್ಗೆ ನೀವು ತಿಳಿಯಲೇಬೇಕು...!!

By: Precilla Dias

ಪೋರ್ಟ್ ಎಂಬುದುವುದು ಕಂಪ್ಯೂಟರ್ ಮತ್ತು ಏಕ್ಸಟ್ರನಲ್ ಡಿವೈಸ್ ನೊಂದಿಗೆ ಸಂಪರ್ಕ ಸಾಧಿಸಲು ಸಹಾಯಕವಾಗಿದೆ. ಈ ಪೋರ್ಟ್ ಗಳಲ್ಲಿ ಫಿಮೇಲ್ ಕನೆಕ್ಟರ್ ಗಳು ಮದರ್ ಬೋರ್ಟ್ ಗೆ ಕನೆಕ್ಟ್ ಆಗಲಿದೆ.

ಈ 6 ಮಾದರಿಯ ಪೋರ್ಟ್ ಗಳ ಬಗ್ಗೆ ನೀವು ತಿಳಿಯಲೇಬೇಕು...!!

ಈ ಪೋರ್ಟ್ ಗಳ ಮೂಲಕವೇ ಸಿಗ್ನಲ್ ಗಳು ಸಿಸ್ಟಮ್ ನಿಂದ ಏಕ್ಸಟ್ರನಲ್ ಡಿವೈಸ್ ಗೆ ತಲುಪಿಸಿ ಅವು ಕಾರ್ಯನಿರ್ವಹಿಸುವಂತೆ ಮಾಡಲಿದೆ. ಇಂದು ನಾವು ಹಲವು ಮಾದರಿಯ ಪೋರ್ಟ್ ಗಳನ್ನು ಕಾಣಬಹುದಾಗಿದೆ. ಪೋರ್ಟ್ ಗಳಲ್ಲಿ ಎರಡು ತುದಿಗಳಿದ್ದು, ಅದನ್ನು ಮೇಲ್ ಮತ್ತು ಫೀಮೇಲ್ ಪೋರ್ಟ್ ಗಳೆಂದು ಕರೆಯುತ್ತಾರೆ. ಸದ್ಯ ಹೆಚ್ಚು ಬಳಕೆಯಾಗುವ ಪೋರ್ಟ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
USB

USB

ಫೋರ್ಟ್ ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವ ಫೋರ್ಟ್ ಎಂದರೆ ಅದು USB. ಇದನ್ನು ನಾವು ಕಂಪ್ಯೂಟರ್, ಸ್ಮಾರ್ಟ್ ಫೋನ್ ಮತ್ತು ಟಿವಿಗಳಲ್ಲಿ ಕಾಣಬಹುದಾಗಿದೆ. ಇದು ಏಕ್ಸಟ್ರನಲ್ ಡಿವೈಸ್ ನೊಂದಿಗೆ ಕನೆಕ್ಟ್ ಮಾಡಲು ಬಳಕೆ ಮಾಡಲಾಗುತ್ತಿದೆ. ಈ ಫೋರ್ಟ್ ಕಂಪ್ಯೂಟರ್ ನ ಹಿಂಭಾಗ ಮತ್ತು ಮುಂಭಾಗ ಎರಡು ಕಡೆಗಳಲ್ಲಿ ಕಾಣಬಹುದಾಗಿದೆ.

ಇದು ಒಂದು ಪಾಯಿಂಟ್ ನಿಂದ ಮತ್ತೊಂದು ಪಾಯಿಂಟ್ ಗೆ ವೇಗವಾಗಿ ಡೇಟಾವನ್ನು ಸಾಗಿಸಲಿದೆ. ಇಂದು ಹಲವು ಮಾದರಿಯ USB ಫೋರ್ಟ್ ಗಳನ್ನು ನಾವು ಕಾಣಬಹುದಾಗಿದೆ. ಓರ್ಜಿನಲ್ USB, USB ಟ್ರೈಡೆಂಟ್, ಸೂಪರ್ ಸ್ಪೀಡ್ USB, USB 3.0. ಇವುಗಳಲ್ಲಿ USB 3.0 ನೂತನ ಮತ್ತು ಅತೀ ವೇಗದ USB ಆಗಿದೆ.

HDMI

HDMI

HDMI ಎಂದರೆ ಹೈ ಡಿಫಿನೇಷನ್ ಮಲ್ಟಿ ಮೀಡಿಯಾ ಇಂಟರ್ ಫೇಸ್. ಇದು ಇಂದಿನ ಹೊಸ ಮಾದರಿಯ ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಟಿವಿಯಲ್ಲಿ ಕಾಣಬಹುದಾಗಿದೆ. ಇದು ಹೈ ಡಿಫೆನೇಷನ್ ಮತ್ತು ಆಲ್ಟ್ರಾ ಹೈ ಡಿಫಿನೇಷನ್ ಡಿವೈಸ್ ಗಳಲ್ಲಿ ಎಂದರೆ ಗೇಮಿಂಗ್ ಕನ್ಸೋಲ್ ಗಳು, ಬ್ಲೂ ರೇ ಪ್ಲೇಯರ್ ಗಳು ಮುಂತಾದವುಗಳನ್ನು ಕನೆಕ್ಟ್ ಮಾಡಲು ಸಹಾಯಕಾರಿಯಾಗಿದೆ. ಇದು ಅನ್ ಕಂಪ್ರೆಸೆಡ್ ವಿಡಿಯೋ ಮತ್ತು ಆಡಿಯೋ ಸಿಗ್ನಲ್ ಗಳನ್ನು ಸಾಗಿಸಲಿದೆ.

ಆಡಿಯೋ:

ಆಡಿಯೋ:

ಇದು ಕಂಪ್ಯೂಟರ್ ಗೆ ಆಡಿಯೋ ಔಟ್ ಪುಟ್ ಡಿವೈಸ್ ಗಳನ್ನು ಕನೆಕ್ಟ್ ಮಾಡಲು ಸಹಾಯಕವಾಗಿದೆ. 3.5 ಎಂಎಂ ಫೋರ್ಟ್ ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತಿದ್ದು, ಇದು ಹೆಡ್ ಫೋನ್ ಮತ್ತು ಸರೌಂಡ್ ಸೌಂಡ್ ಚಾನಲ್ ಗಳನ್ನು ಕನೆಕ್ಟ್ ಮಾಡಬಹುದಾಗಿದೆ. ಒಟ್ಟು 6 ಮಾದರಿಯ ಕನೆಕ್ಟಿವ್ ಪೋರ್ಟ್ ಗಳನ್ನು ಕಂಪ್ಯೂಟರ್ ನಿಂದ ಆಡಿಯೋ ಡಿವೈಸ್ ಗಳನ್ನು ಸಂಪರ್ಕಿಸಬಹುದಾಗಿದೆ. ಇದರಲ್ಲಿ ಮೈಕ್ರೋ ಫೋನ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ವಿಡಿಯೋ ಪೋರ್ಟ್:

ವಿಡಿಯೋ ಪೋರ್ಟ್:

VGA ಪೋರ್ಟ್ ಗಳು ಸಿಸ್ಟಮ್ ಗಳನ್ನು ಕಂಪ್ಯೂಟರ್ ನೊಂದಿಗೆ ಕನೆಕ್ಟ್ ಮಾಡಲು ಬಳಕೆ ಮಾಡಲಾಗುತ್ತದೆ. ಪ್ರೋಜೆಕ್ಟರ್, ವಿಡಿಯೋ ಕಾರ್ಡ್ ಗಳು ಮತ್ತು ಹೈ ಡಿನಿಫೇಷನ್ ಟಿವಿ ಗಳನ್ನು ಕನೆಕ್ಟ್ ಮಾಡಲು ಇದು ಸಹಾಯಕವಾಗಲಿದೆ. ಇದು ವಿಡಿಯೋ ಸಿಗ್ನಲ್ ಗಳನ್ನು ಸಾಗಿಸಲು ಸಹಾಯಕಾರಿಯಾಗಿದೆ.

USB ಟೈಪ್ C

USB ಟೈಪ್ C

ಇದು ಹೊಸ ಮಾದರಿಯ USB ಟೈಪ್ ಇದಾಗಿದೆ. ಇದು ಟೈಪ್ A ಮತ್ತು B ಬದಲಾಗಿ ಇದು ಕಾರ್ಯನಿರ್ವಹಿಸುತ್ತಿದೆ. ಇದು ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್, ಸ್ಮಾರ್ಟ್ ಫೋನ್ ಮತ್ತು ಇನ್ನಿತರ ಡಿವೈಸ್ ಗಳಲ್ಲಿ ಬಳಕೆ ಮಾಡಬಹುದಾಗಿದೆ. ಇದು ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿದ್ದು, ಇದು ಫೋನ್ ಗಳನ್ನು ಚಾರ್ಜ್ ಮಾಡಲು ಸಹಾಯ ಮಾಡಲಿದೆ.

ಇಂಟರ್ನೆಟ್ ಫೋರ್ಟ್:

ಇಂಟರ್ನೆಟ್ ಫೋರ್ಟ್:

ಇದು ಬಳಕೆದಾರರನ್ನು ಇಂಟರ್ ನೆಟ್ ಮೂಲಕ ಕನೆಕ್ಟ್ ಮಾಡಲು ಸಹಾಯಕಾರಿಯಾಗಿದೆ. ಇದು ಟೆಲಿಫೋನ್ ಜಾಕ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಸಿಸ್ಟಮ್ ಗೆ ಇಂಟರ್ ನೆಟ್ ಸೇವೆಯನ್ನು ನೀಡಲಿದೆ. ಇದು 10 GBPS ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸಲ ಶಕ್ತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A port is a point where the communication between the computer and external devices happens. The female end of the connector is the port that usually sits on the motherboard.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot