Home
ಕಂಪ್ಯೂಟರ್‌‌

ಕಂಪ್ಯೂಟರ್‌ ವೇಗಗೊಳಿಸಲು ಕೇವಲ 6 ವಿಧಾನಗಳು ಸಾಕು

By Suneel

ಕಂಪ್ಯೂಟರ್‌ಗಳು ಯಾವಾಗ, ಏಕೆ ನಿಧಾನ ಕಾರ್ಯಚರಣೆ ಹೊಂದುತ್ತವೆ ಅಂತ ತಿಳಿಯುವುದೇ ಇಲ್ಲಾ. ಕೆಲವರಿಗಂತು ಯಾವುದಾದರೂ ಮುಖ್ಯವಾದ ಕೆಲಸವನ್ನು ಕಂಪ್ಯೂಟರ್‌ನಲ್ಲಿ ನಿರ್ವಹಿಸುವಾಗ ಕಂಪ್ಯೂಟರ್‌ ಸ್ಲೋ ಆಗಿಬಿಟ್ಟರೆ ಅವರ ಕೋಪವನ್ನೊಮ್ಮೆ ನೋಡಬೇಕು. ಅಬ್ಬಬ್ಬಾ !! ಯಾರಿಗೆ ಬೇಕು ಈ ಕಂಪ್ಯೂಟರ್‌ ಸಹವಾಸ ಎನಿಸುವಷ್ಟು ತಾಳ್ಮೆ ಕಳೆದುಕೊಳ್ಳುತ್ತಾರೆ. ಹಾಗೆಯೇ ಕೋಪದಲ್ಲಿ ಕಂಪ್ಯೂಟರ್‌ ಅನ್ನು ಹೊಡೆದು ಹಾಕಿದರೂ ಅಚ್ಚರಿ ಏನಿಲ್ಲ. ಇದಕ್ಕೆಲ್ಲಾ ಉದಾಹರಣೆ ದಿನನಿತ್ಯ ಫೇಸ್‌ಬುಕ್‌ ಬಳಕೆ ಮಾಡುವವರಿಗೆ ಅಲ್ಲಲ್ಲಿ ನ್ಯೂಸ್‌ ಫೀಡ್‌ನಲ್ಲಿ ಸಿಕ್ಕಿರುತ್ತವೆ.

ಕಂಪ್ಯೂಟರ್‌ ನಿಧಾನವಾದಾಗ ಅದರ ಜೊತೆ ಜಗಳವಾಡುವ ಬದಲು ಅದನ್ನು ವೇಗಗೊಳಿಸುವ ಮಾರ್ಗ ತಿಳಿಯುವುದು ಉತ್ತಮ ಅಲ್ಲವೇ. ಆದ್ದರಿಂದ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಕೇವಲ 5 ಸರಳ ವಿಧಾನದಿಂದ ನಿಮ್ಮ ಕಂಪ್ಯೂಟರ್‌ ವೇಗಗೊಳಿಸುವ ಮಾರ್ಗಗಳನ್ನು ತಿಳಿಸುತ್ತಿದೆ. ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಬಳಕೆದಾರರು ತಪ್ಪದೇ ಈ ಮಾರ್ಗಗಳನ್ನು ಅನುಸರಿಸಿ ನಿಮ್ಮ ಕಂಪ್ಯೂಟರ್‌ ಅನ್ನು ಹ್ಯಾಂಗ್‌ ಆಗುವ, ನಿಧಾನವಾಗುವ ಸಮಸ್ಯೆಯಿಂದ ಬಚಾವು ಮಾಡಿ.

1

1

ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಡಿಸ್ಕ್‌ ಕ್ಲೀನ್‌ಅಪ್‌ ಮಾಡಲು ಡೆಸ್ಕ್‌ಟಾಪ್‌ನಲ್ಲಿ My Computer ಅಥವಾ This PC ಎಂಬಲ್ಲಿ ಕ್ಲಿಕ್‌ ಮಾಡಿ. ನಂತರ Local Disk 'C' ಮೇಲೆ ಕ್ಲಿಕ್‌ ಮಾಡಿ. ನಂತರ ಓಪನ್‌ ಆದ ಫೋಲ್ಡರ್‌ನ ಮೇಲ್ಭಾಗದಲ್ಲಿ Manage ಬಟನ್ ಮೇಲೆ ಕ್ಲಿಕ್‌ ಮಾಡಿ Clean Up ಬಟನ್‌ ಹುಡುಕಿ ಅದರ ಮೇಲೆ ಡಬಲ್‌ ಕ್ಲಿಕ್‌ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಡಿವೈಸ್‌ನಲ್ಲಿ ಅನವಶ್ಯಕ ಫೈಲ್‌ಗಳು ಡಿಲೀಟ್‌ ಆಗಿ ಡಿವೈಸ್‌ ವೇಗವಾಗುತ್ತದೆ.

2

2

ಸ್ಟಾರ್ಟ್‌ ಬಟನ್‌ ಕ್ಲಿಕ್‌ ಮಾಡುವ ಮೂಲಕ ಸರ್ಚ್ ಬಾಕ್ಸ್‌ನಲ್ಲಿ Disk Defragmenter ಎಂದು ಟೈಪಿಸಿ ಎಂಟರ್‌ ಮಾಡಿ. ನಂತರ ಓಪನ್‌ ಆದ ಫೋಲ್ಡರ್‌ನಲ್ಲಿ Disk Defragmenter ಮೇಲೆ ಕ್ಲಿಕ್‌ ಮಾಡಿ. ಅದು ಹಲವು ನಿಮಿಷಗಳು ಅಥವಾ ಗಂಟೆಗಟ್ಟಲೆ ತೆಗೆದುಕೊಳ್ಳಬಹುದು. ಆದರೆ ಆ ಸಮಯದಲ್ಲಿ ನೀವು ಡಿವೈಸ್‌ ಅನ್ನು ಬಳಸಬಹುದು. ಡಿವೈಸ್ ನ ಹಾರ್ಡ್‌ ಡ್ರೈವ್‌ ಅನ್ನು Fragmentation ಮಾಡುವುದರಿಂದಲೂ ಸಹ ನಿಮ್ಮ ಸಿಸ್ಟಮ್‌ ಅನ್ನು ವೇಗಗೊಳಿಸಬಹುದಾಗಿದೆ.

3

3

300-400 ರೂಪಾಯಿಗಳಿಗೂ ಸಹ ಲೈಸನ್ಸ್‌ ಉಳ್ಳ ಆಂಟಿವೈರಸ್‌ ದೊರೆಯುತ್ತದೆ. ಲೈಸನ್ಸ್‌ ಉಳ್ಳ ಆಂಟಿವೈರಸ್‌ ಇನ್‌ಸ್ಟಾಲ್‌ ಮಾಡುವುದರಿಂದ ಡಿವೈಸ್‌ ಅನ್ನು ಉತ್ತಮವಾಗಿ ವೈರಸ್‌ನಿಂದ ಕಾಪಾಡುತ್ತದೆ.

4

4

ಡಿವೈಸ್‌ನಲ್ಲಿ Ccleaner ಬಳಸುವುದರಿಂದ, ಅನಗತ್ಯ ಫೈಲ್‌ಗಳನ್ನು, ಕ್ಯಾಶಿ ಮತ್ತು ಇತರೆ ಡಿವೈಸ್ ವೇಗ ಕುಗ್ಗಿಸುವ ಫೈಲಗಳನ್ನು ಕ್ಲೀನ್‌ ಮಾಡುತ್ತದೆ. ಈ ಸಾಫ್ಟ್‌ವೇರ್‌ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್‌ ಮಾಡಬಹುದಾಗಿದೆ. ಇದು ಸಹ ನಿಮ್ಮ ಡಿವೈಸ್‌ ಅನ್ನು ವೇಗಗೊಳಿಸುತ್ತದೆ.

5

5

ನಿಮ್ಮ ಡಿವೈಸ್‌ನಲ್ಲಿ ಹಾಗೂ ಡೆಸ್ಕ್‌ಟಾಪ್‌ನಲ್ಲಿ ಅನಗತ್ಯವಾಗಿ ಹಲವು ಪ್ರೋಗ್ರಾಂಗಳನ್ನು ಹೊಂದುವುದರ ಬದಲಾಗಿ ಅಂತಹವುಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿರಿ.

6

6

ಮೇಲಿನ ಎಲ್ಲಾ ವಿಧಾನಗಳನ್ನು ಅನುಸರಿಸಿಯೂ ಸಹ ನಿಮ್ಮ ಡಿವೈಸ್‌ ಆಗಾಗ ನಿಧಾನವಾದರೆ ಹೀಗೆ ಮಾಡಿ.
* ಟಾಸ್ಕ್‌ಬಾರ್‌ನಲ್ಲಿ ಮೌಸ್‌ ಬಟನ್‌ ಇಟ್ಟು ಬಲ ಭಾಗದ ಬಟನ್‌ ಕ್ಲಿಕ್‌ ಮಾಡಿ. ಅಲ್ಲಿ Task manager ಮೇಲೆ ಕ್ಲಿಕ್‌ ಮಾಡಿ ಓಪನ್‌ ಆದ ಫೋಲ್ಡರ್‌ ನಲ್ಲಿ performance ಬಟನ್‌ ಕ್ಲಿಕ್‌ ಮಾಡಿ. ಅಲ್ಲಿ ಯಾವುದು ಹೆಚ್ಚು ಡೇಟಾ MB ಬ್ರೌಸರ್‌ ಚಾಲನೆಯಲ್ಲಿರುತ್ತದೋ ಅದನ್ನು Proces ಮೇಲೆ ಕ್ಲಿಕ್‌ ಮಾಡಿ ಬ್ರೌಸರ್ ಆಯ್ಕೆ ಮಾಡಿ End Task ಬಟನ್‌ ಕ್ಲಿಕ್ ಮಾಡಿ. ನಂತರ ಮತ್ತೊಮ್ಮೆ ನಿಮ್ಮ ಬ್ರೌಸರ್ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
6 Ways to Boost the Speed of your Computer! Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+