ವಿಂಡೋಸ್ 8 ಕೊಳ್ಳಲು 7 ಪ್ರಮುಖ ಕಾರಣಗಳು

By Varun
|
ವಿಂಡೋಸ್ 8 ಕೊಳ್ಳಲು 7 ಪ್ರಮುಖ ಕಾರಣಗಳು

ಅಕ್ಟೋಬರ್ 26 ಕ್ಕೆ ವಿಂಡೋಸ್ 8 ತಂತ್ರಾಂಶ ಬಿಡುಗಡೆಯಾಗುವ ಮಹೂರ್ತ ಫಿಕ್ಸ್ ಆಗಿದೆ. ಮೈಕ್ರೋಸಾಫ್ಟ್ ನ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಎಂದೂ ಕಾಣದಂಥ ಬದಲಾವಣೆಗಳನ್ನು ಮಾಡಲಾಗಿದೆ.

ಉದಾಹರಣೆಗೆ ಟ್ಯಾಬ್ಲೆಟ್ ಗಳಿಗೆ ಉಪಯೋಗಿಸಲ್ಪಡುವ ARM ಪ್ರೋಸೆಸರ್ ಹಾಗು X86 ಪ್ರೋಸೆಸರ್ ಗಳಿಗೆ ಹೊಂದುವಂತೆ ವಿಂಡೋಸ್ 8 ಆವೃತ್ತಿಯನ್ನು ಸಿದ್ದಪಡಿಸಲಾಗಿದ್ದು, ಸ್ಟಾರ್ಟ್ ಮೆನು ಬದಲಿಗೆ ಸ್ಟಾರ್ಟ್ ಮೆನು, ಮೈಕ್ರೋಸಾಫ್ಟ್ ಆಫೀಸ್ 2007 ನಲ್ಲಿ ಇರುವಂತೆ ರಿಬ್ಬನ್ ಇಂಟರ್ಫೇಸ್, ಈ ರೀತಿ ಮಾರ್ಪಾಡುಗಳನ್ನು ಮಾಡಲಾಗಿದೆ. ಇದಷ್ಟೇ ಅಲ್ಲದೆ ಇನ್ನೂ 7 ಇಂಟರೆಸ್ಟಿಂಗ್ ಫೀಚರುಗಳು ನಿಮ್ಮನ್ನು ವಿಂಡೋಸ್ 8 ಕೊಳ್ಳುವಂತೆ ಮಾಡುತ್ತವೆ. ಅವುಗಳು ಯಾವುವು ಗೊತ್ತಾ:

1) ಪಿಚ್ಚರ್ ಪಾಸ್ವರ್ಡ್:

ಅಕ್ಷರ, ಅಂಕಿ, ಚಿನ್ಹೆ, ಈ ಮೂರೂ ಕಾಂಬಿನೇಶನ್ ಗಳ ಮೂಲಕ ನಿಮ್ಮ ಕಂಪ್ಯೂಟರ್ ಗೆ ಪಾಸ್ವರ್ಡ್ ಕೊಡುವ ಕಾಲ ಮುಗಿಯಿತು. ವಿಂಡೋಸ್ 8 ಚಿತ್ರಗಳ ಮೂಲಕ ಪಾಸ್ವರ್ಡ್ ಕೊಡುವ ವ್ಯವಸ್ಥೆ ತಂದಿದೆ.

ಇದು ಹೀಗೆ ಕೆಲಸ ಮಾಡುತ್ತದೆ- ಒಂದು ಚಿತ್ರ ಸೆಲೆಕ್ಟ್ ಮಾಡಿ ನಂತರ ಆ ಚಿತ್ರದ ಮೇಲೆ ನಿಮ್ಮದೇ ಆದ ರೇಖೆ ಎಳೆಯಬೇಕು. ಅದು ನಿಮ್ಮ ಪಾಸ್ವರ್ಡ್ ಆಗುತ್ತದೆ. ಉದಾ: ನಿಮ್ಮದೇ ಆದ ಚಿತ್ರವನ್ನು ಪಾಸ್ವರ್ಡ್ ಗೆ ಆಯ್ಕೆ ಮಾಡಿಕೊಂಡರೆ ಮೊದಲು ಅದನ್ನು ಸೆಲೆಕ್ಟ್ ಮಾಡಿ ಆ ಚಿತ್ರದಲ್ಲಿರುವ ಮೂಗನ್ನು ಮುಟ್ಟಿ ಅದೇ ನಿಮ್ಮ ಪಾಸ್ವರ್ಡ್ ಮಾಡಿಕೊಳ್ಳಬಹುದು ಇಲ್ಲವೆ ಕಿವಿಯಿಂದ ಮೂಗಿಗೆ ಒಂದು ಗೆರೆ ಎಳೆಯಬಹುದು. ಈ ರೀತಿ ನಿಮಗೆ ಬೇಕಾದ ಹಾಗೆ ಪಾಸ್ವರ್ಡ್ ಸೆಟ್ ಮಾಡಿಕೊಳ್ಳುವ ಫೀಚರ್ ಇಡಲಾಗಿದೆ.

2) ವಿಂಡೋಸ್ ಗೋ:

ಈಗ ಬಹುತೇಕ ತಂತ್ರಾಂಶಗಳನ್ನು ಪೆನ್ ಡ್ರೈವ್ ನಲ್ಲಿ ಕೊಂಡೊಯ್ಯುವ ಆವೃತ್ತಿಗಳು ಬಂದಿವೆ. ಅದೇ ರೀತಿ ನೀವು ವಿಂಡೋಸ್ 8 ಆಪರೇಟಿಂಗ್ ಸಿಸ್ಟಮ್ ಅನ್ನು ಕೂಡ ನೀವು ಪೆನ್ ಡ್ರೈವ್ ಇಲ್ಲವೆ ಪೋರ್ಟಬಲ್ ಹಾರ್ಡ್ ಡ್ರೈವ್ ಮೂಲಕ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು

3) ರಿಫ್ರೆಶ್ ಹಾಗು ರಿಸೆಟ್ ಆಪ್ಶನ್

ಹಳೆಯ ವಿಂಡೋಸ್ ಆವೃತ್ತಿಗಳನ್ನು ಉಪಯೋಗಿಸುತ್ತಾ ಬಂದಂತೆ ಅದರ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹೊಸ ಆಪ್ಸ್ ಗಳನ್ನ install ಮಾಡಿ uninstall ಮಾಡಿದರೆ ಆ ಆಪ್ಸ್ ಗಳ ಭಾಗದ ಕೆಲವು ಪ್ರೋಗ್ರಾಮ್ ಗಳು ಉಳಿದುಕೊಂಡು ವಿಂಡೋಸ್ ಕಾರ್ಯಕ್ಷಮತೆಗೆ ಅಡ್ಡಿ ಪಡಿಸುತ್ತಿದ್ದವು. ವಿಂಡೋಸ್ 8 ನಲ್ಲಿ ಅದನ್ನು ರೆಫ್ರೆಶ್ ಹಾಗು ರಿಸೆಟ್ ಮೂಲಕ ಈ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ.

4) ಇನ್ನೂ ಉತ್ತಮ ಆಟೋಮ್ಯಾಟಿಕ್ ಅಪ್ಡೇಟ್

ಹೊಸ ಅಪ್ಡೇಟ್ ಫೈಲ್ ಬಂದೊಡನೆ ನಿಮ್ಮ ಹಳೆ ವಿಂಡೋಸ್, ಅಪ್ಡೇಟ್ ಮಾಡಿ ಎಂದು ಮೆಸೇಜ್ ತೋರಿಸಿ ತಲೆ ತಿನ್ನುತ್ತಿತ್ತು. ಈಗ ತಿಂಗಳಿಗೆ ಒಂದು ಸಾರಿ ಎಲ್ಲಾ ಅಪ್ಡೇಟ್ ಮಾಡುವ ಸೌಲಭ್ಯವನ್ನು ವಿಂಡೋಸ್ 8 ನಲ್ಲಿ ಅಳವಡಿಸಲಾಗಿದೆ.

5) ಮಾಲ್ವೆರ್ ನಿಂದ ರಕ್ಷಣೆ

ಸೆಕ್ಯೂರ್ ಬೂಟ್ ಎಂಬ ಹೊಸ ವಿಧಾನದಿಂದ, ವಿಂಡೋಸ್ ಬೂಟ್ ಆದಾಗ ಮ್ಯಾಲ್ವೆರ್ ದಾಳಿ ಮಾಡಲು ಸಾಧ್ಯವಿಲ್ಲದಂತೆ ಮಾಡಲಾಗಿದೆ. ಹಾಗು ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಇರುವ ಸ್ಮಾರ್ಟ್ ಸ್ಕ್ರೀನ್ ( ಮ್ಯಾಲ್ವೆರ್ ಇರುವ ವೆಬ್ಸೈಟ್ ಅನ್ನು ನೀವು ಟೈಪ್ ಮಾಡಿದರೆ ಅದು ಚೆಕ್ ಮಾಡಿ ಫಿಲ್ಟರ್ ಮಾಡುತ್ತದೆ) ಕೂಡ ಇದೆ.

6) ಫೈಲುಗಳ ನಿರ್ವಹಣೆಯಲ್ಲಿ ಸುಧಾರಣೆ:

ಫೈಲುಗಳನ್ನು ಕಾಪಿ ಮಾಡಲು ಟೈಮ್ ತೆಗೆಯುತ್ತಿದ್ದ ಹಿಂದಿನ ಆವೃತ್ತಿಗಳು ಬಳಕೆದಾರನಿಗೆ ಬೇಸರ ತರಿಸುತ್ತಿದ್ದವು. ಇದನ್ನು ಸರಿಪಡಿಸಲಾಗಿದ್ದು, ISO ಫೈಲ್ ಅನ್ನು ಡಿಸ್ಕ್ ಗೆ ಬರ್ನ್ ಮಾಡದೆಯೇ access ಮಾಡುವಂತೆ ಮಾಡಲಾಗಿದೆ.

7)ವಿಂಡೋಸ್ ಲೈವ್ ID ಮೂಲಕ ನಿಮ್ಮ ಕಂಪ್ಯೂಟರ್ ಲಾಗಿನ್

ವಿಂಡೋಸ್ ಲೈವ್ ID ಮೂಲಕ ನೀವು ಮೈಕ್ರೋಸಾಫ್ಟ್ ಕ್ಲೌಡ್, ಹಾಟ್ ಮೇಲ್, ಆಫೀಸ್ ವೆಬ್, ಸ್ಕೈ ಡ್ರೈವ್, ಮೆಸೆಂಜರ್ ಚಾಟ್ ಮಾಡಬಹುದಾಗಿದೆ. ಇದೆಲ್ಲದರ ಜೊತೆ ನೀವು ನಿಮ್ಮ ಕಂಪ್ಯೂಟರ್ ಅನ್ನು ಕೂಡ ಎಲ್ಲಿ ಬೇಕಾದರೂ ಕೂತು ವಿಂಡೋಸ್ ಲೈವ್ ಖಾತೆಯ ಮೂಲಕ ಲಾಗಿನ್ ಮಾಡಿ access ಮಾಡಬಹುದು.

ಇಷ್ಟೆಲ್ಲಾ ಫೀಚರುಗಳು ಇರುವ ವಿಂಡೋಸ್ 8 ಬಗ್ಗೆ ತಿಳಿದುಕೊಂಡ ಮೇಲೆ ಅದನ್ನು ಖರೀದಿಸಬೇಕು ಅನ್ಸುತ್ತೆ. ಆದರೆ ಅಕ್ಟೋಬರ್ ವರೆಗೂ ಕಾಯಬೇಕು ಎನ್ನುವುದೇ ಬೇಜಾರಿನ ವಿಷಯ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X