ಎಕ್ಸ್‌ಟ್ರನಲ್ GPU ಏಕೆ ಬೆಸ್ಟ್..? ನಿಮಗೆ ಗೊತ್ತಿಲ್ಲ ಈ ಅಂಶಗಳು..!
ಇಂದು ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಪ್ರಮಾಣದ ಗೇಮ್ ಗಳು ಕಾಣಿಸಿಕೊಳ್ಳುತ್ತಿದ್ದು ಇವು ದೊಡ್ಡ ಪ್ರಮಾಣದ ಗ್ರಾಫಿಕ್ಸ್ ಗಳನ್ನು ಹೊಂದಿರುತ್ತವೆ, ಹೀಗಾಗಿ ಇವುಗಳನ್ನು ಆಡುವ ಸಲುವಾಗಿ ದೊಡ್ಡ ಮಟ್ಟದ ಗ್ರಾಫಿಕ್ಸ್ ಕಾರ್ಡ್ ಇರುವಂತಹ ಕಂಪ್ಯೂಟರ್ ಗಳು ಇಲ್ಲವೇ ಗೇಮಿಂಗ್ ಕನ್ ಸೋಲ್ ಗಳು ಬೇಕಾಗುತ್ತದೆ. ಅಲ್ಲದೇ ಇದಕ್ಕಾಗಿಯೇ ಇಂದು ಮಾರುಕಟ್ಟೆಯಲ್ಲಿ ಗೇಮಿಂಗ್ ಲ್ಯಾಪ್ಟಾಪ್ಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಹಲವು ಮಂದಿ ತಮ್ಮಲ್ಲಿರುವ ಲ್ಯಾಪ್ಟಾಪ್ ಗಳಿಗೆ ಎಕ್ಸ್ ಟ್ರನಲ್ GPU ಅಳವಡಿಸಿಕೊಂಡು ಗೇಮ್ ಗಳನ್ನು ಆಡುತ್ತಿದ್ದಾರೆ.

ಈಹಿನ್ನಲೆಯಲ್ಲಿ ಎಕ್ಸ್ ಟ್ರನಲ್ GPU ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇದರ ಲಾಭಗಳೇನು, ಇವುಗಳಿಂದ ನಿಮ್ಮ ಲ್ಯಾಪ್ ಟಾಪ್ ಅನ್ನು ಹೇಗೆ ನೀವು ಗೇಮಿಂಗ್ ಲ್ಯಾಪ್ಟಾಪ್ ಮಾಡಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿಯು ಮುಂದಿದೆ. ಇವುಗಳ ಸಹಾಯದಿಂದ ನೀವು ಗೇಮ್ ಗಳನ್ನು ಸುಲಭವಾಗಿ ಆಡಬಹುದಾಗಿದೆ.

ಎಕ್ಸ್ ಟ್ರನಲ್ GPU ಹೇಗೆ ಕಾರ್ಯನಿರ್ವಹಿಸುತ್ತದೆ
ನಿಮ್ಮ ಲ್ಯಾಪ್ ಟಾಪ್ ನಿಂದ ಯೂಎಸ್ಬಿ ಕೇಬಲ್ ಮೂಲಕ ಎಕ್ಸ್ ಟ್ರನಲ್ GPU ವನ್ನು ನೀವು ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಇದು ನೋಡಲು ಸಾಮಾನ್ಯ ಎಕ್ಸ್ ಟ್ರನಲ್ ಹಾರ್ಡ್ ಡಿಸ್ಕ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದ್ದು ಇದು ನಿಮ್ಮ ಲ್ಯಾಪ್ ಟಾಪ್ ಗ್ರಾಫಿಕ್ಸ್ ಅನ್ನು ಉತ್ತಮ ಪಡಿಸಲಿದೆ.

ಹೆಚ್ಚಿನ ವೇಗ:
ಎಕ್ಸ್ ಟ್ರನಲ್ GPU ನಿಮ್ಮ ಲ್ಯಾಪ್ಟಾಪ್ ನೊಂದಿಗೆ ಸೇರಿಕೊಂಡು ಹೆಚ್ಚಿನ ವೇಗದಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ ಈ ಸಂದರ್ಭದಲ್ಲಿ ನಿಮ್ಮ laptop ನಲ್ಲಿ ಅತಿ ವೇಗದ ಮತ್ತು ಹೆಚ್ಚಿನ ಗ್ರಾಫಿಕ್ಸ್ ಹೊಂದಿರುವ ಗೇಮ್ ಗಳನ್ನು ಸಲುಭವಾಗಿ ಆಡಬಹುದಾಗಿದೆ.

ಆದರೆ ಬೆಲೆ ಹೆಚ್ಚು
ನೀವು ಮದರ್ ಬೋರ್ಡ್ ನೊಂದಿಗೆ ದೊರೆಯುವ ಎಕ್ಸ್ GPU ಕಡಿಮೆ ಬೆಲೆ ಹೊಂದಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಎಕ್ಸ್ ಟ್ರನಲ್ GPU ಗಳು ಬೋರ್ಡ್ ನಲ್ಲಿ ಇರುವಂತಹ ಜಿ ಪಿ ಯು ಗಳಿಗಿಂತ ಹೆಚ್ಚಿನ ಬೇಗ ಮತ್ತು ಕಾರ್ಯಕ್ಷಮತೆಯನ್ನು ಪಡೆದುಕೊಂಡಿರುತ್ತವೆ. ಹಾಗಾಗಿ ಬೆಲೆಯೂ ಅಧಿಕವಾಗಿರುತ್ತದೆ. ಆಯ್ಕೆ ಇಂದು ಮಾರುಕಟ್ಟೆಯಲ್ಲಿ ಹಲವು ಮಾದರಿಯ ಎಕ್ಸ್ ಟ್ರನಲ್ GPU ನೀವು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ನೀವು ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳಬೇಕಾಗಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಗ್ರಾಫಿಕ್ಸ್ ಎಕ್ಸ್ ಟ್ರನಲ್ GPU ದೊರೆಯುತ್ತದೆ.

ಉತ್ತಮ ಗ್ರಾಫಿಕ್ಸ್
ನಿಮ್ಮ ಎಕ್ಸ್ ಟ್ರನಲ್ GPU ಗಳನ್ನು connect ಮಾಡಿಕೊಳ್ಳುವ ಸಂದರ್ಭದಲ್ಲಿ ನೀವು ಹೆಚ್ಚಿನ ಪ್ರಮಾಣ ಗ್ರಾಫಿಕ್ಸ್ ಅನ್ನು ಪಡೆದುಕೊಳ್ಳಬಹುದಾಗಿದೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ರೀತಿಯಲ್ಲಿ ಬಳಸಿಕೊಂಡು ಹೆಚ್ಚಿನ ಲಾಪ್ ಟಾಪ್ ಗಳು ಕಾರ್ಯ ನಿರ್ವಹಿಸುತ್ತಿವೆ.

ಉತ್ತಮ
ಎಕ್ಸ್ ಟ್ರನಲ್ GPU ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಕಾರಣ ಇವು ಬೇಕೆಂದ ಸಂದರ್ಭದಲ್ಲಿ ಮಾತ್ರ ಕನೆಕ್ಟ್ ಮಾಡಿಕೊಂಡು ಆಡಬಹುದಾಗಿದೆ. ಇದರಿಂದಾಗಿ ನಿನ್ನ ಲ್ಯಾಪ್ಟಾಪ್ ತೂಕವು ಕಡಿಮೆಯಾಗಲಿದ್ದು ಆರಾಮಾಗಿ ಬಳಕೆ ಮಾಡಬಹುದಾಗಿದೆ.


Click it and Unblock the Notifications