ಈ ಎಂಟು ಗ್ಯಾಜೆಟ್‌ಗಳಲ್ಲಿರುವ ವಿಶೇಷತೆಯಾದರೂ ಏನು?

Written By:

ಎಂಟು ಕೂಲ್ ಗ್ಯಾಜೆಟ್‌ಗಳು ಕಂಪ್ಯೂಟೆಕ್ಸ್‌ನಲ್ಲಿ ಕಂಡುಬಂದಿದ್ದು ಇವು ನವೀನ ವಿನ್ಯಾಸಗಳಲ್ಲಿ ನಿಮ್ಮ ಮನತಣಿಸುವುದು ಖಂಡಿತ. ಈ ಎಲ್ಲಾ ಗ್ಯಾಜೆಟ್‌ಗಳು ಒಂದಿಲ್ಲೊಂದು ವಿಶೇಷತೆಗಳಿಂದ ಗಮನಸೆಳೆಯುವಂತಿದೆ.

ನಿಮ್ಮ ಗ್ಯಾಜೆಟ್ ಚಾರ್ಜ್ ಮಾಡುವ ಸೌಲಭ್ಯ ಇರುವ ಚಿಕ್ ಸಿ ಪವರ್ ಬ್ಯಾಂಕ್, ನಿಮ್ಮ ಸ್ಮಾರ್ಟ್ ಡಿವೈಸ್‌ಗೆ ವೈರ್‌ಲೆಸ್ ಮೂಲಕ ಸಂಪರ್ಕಪಡಿಸುವಂತಹ ಕ್ಯಾಮೆರಾ, ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಪೇರ್ ಮಾಡಬಹುದಾದ ವೈರ್‌ಲೆಸ್ ಸ್ಟೋರೇಜ್ ಡಿವೈಸ್, ನಿಮ್ಮ ಸಾಕು ಪ್ರಾಣಿಯ ಚಲನವಲನಗಳನ್ನು ತಿಳಿದುಕೊಳ್ಳಬಹುದಾದ ಜಿಪಿಎಸ್ ಪೆಟ್ ಟ್ರ್ಯಾಕರ್, ಆಕ್ಷನ್ ಕ್ಯಾಮ್, ಮಿಸ್ಟರಿ ಗ್ಯಾಜೆಟ್ಸ್, ಓವಲ್ ಹೆಡ್‌ಸೆಟ್ಸ್, ಆಗೂ ಲ್ಯಾಪ್‌ಟಾಪ್ ಹೀಗೆ ಬಹು ವಿಧದ ನೂತನ ಗ್ಯಾಜೆಟ್‌ಗಳನ್ನು ಇಲ್ಲಿ ನೀಡಲಾಗಿದ್ದು ನಿಮ್ಮ ಮನತಣಿಸುವಂತಿವೆ.

ಪ್ರತಿಯೊಂದು ಗ್ಯಾಜೆಟ್‌ಗಳು ಅದರದ್ದೇ ಆದ ವಿಶೇಷತೆಯನ್ನು ಹೊಂದಿದ್ದು ನೋಡಲು ಆಕರ್ಷಕವಾಗಿವೆ. ಬನ್ನಿ ಈ ಗ್ಯಾಜೆಟ್‌ಗಳ ಪರಿಪೂರ್ಣ ನೋಟ ಹಾಗೂ ಪೂರ್ಣ ವಿವರಗಳನ್ನು ತಿಳಿದುಕೊಂಡು ಮುಂದುವರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಿಕ್ ಸಿ ಪವರ್ ಬ್ಯಾಂಕ್

ಚಿಕ್ ಸಿ ಪವರ್ ಬ್ಯಾಂಕ್

#1

ರೋಸ್‌ವಿಲ್‌ನ ಚಿಕ್‌ ಸಿ ಪವರ್ ಬ್ಯಾಂಕ್ ಮೂರು 1,000mAh ಪ್ಯಾಕ್‌ಗಳೊಂದಿಗೆ ಬಂದಿದ್ದು ಅಯಸ್ಕಾಂತಗಳನ್ನು ಬಳಸಿಕೊಂಡು ಇವುಗಳನ್ನು ಒಂದಾಗಿ ಜೋಡಿಸಲಾಗಿದೆ. ನಿಮ್ಮ ಗ್ಯಾಜೆಟ್ ಅನ್ನು ಚಾರ್ಜ್ ಮಾಡಲು ಇನ್ನಷ್ಟು ದೊಡ್ಡ ಗಾತ್ರದ ಬ್ಯಾಟರಿ ಪವರ್ ಅನ್ನು ನಿರ್ಮಿಸಲು ಇನ್ನಷ್ಟನ್ನು ನಿಮಗೆ ಸೇರಿಸಬಹುದು.

ಅಲ್ಟೆಕ್ ಕ್ಯೂಬಿಕ್

ಅಲ್ಟೆಕ್ ಕ್ಯೂಬಿಕ್

#2

ಇದು 13 ಮೆಗಾಪಿಕ್ಸೆಲ್ ಕ್ಯಾಮೆರಾ ಆಗಿದ್ದು ನಿಮ್ಮ ಡಿವೈಸ್‌ಗೆ ವೈರ್‌ಲೆಸ್ ಆಗಿ ಇದನ್ನು ಸಂಪರ್ಕಗೊಳಿಸಬಹುದು. ನಿಮ್ಮ ಶಾಟ್‌ಗಳಲ್ಲಿ ಕ್ರಿಯಾತ್ಮಕತೆಯನ್ನು ತರಲು, ಪೋಟೋ ತೆಗೆಯಲು ನಿಮಗೆ ಅನುಕೂಲಕರವಾದ ಅಂತರವನ್ನು ಒದಗಿಸುವುದರೊಂದಿಗೆ ಅಲ್ಟೆಕ್ ಕ್ಯೂಬಿಕ್ ವಿಶೇಷವಾಗಿದೆ.

ಆಸಸ್ ವೈರ್‌ಲೆಸ್ ಸ್ಟೋರೇಜ್

ಆಸಸ್ ವೈರ್‌ಲೆಸ್ ಸ್ಟೋರೇಜ್

#3

ಈ ಆಸಸ್ ಗ್ಯಾಜೆಟ್ ಏರ್ ಫ್ರೆಶ್ನೆರ್‌ನಂತಿದ್ದು, ಎನ್‌ಎಫ್‌ಸಿ ಯನ್ನು ಬಳಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಇದನ್ನು ನಿಮಗೆ ಪೇರ್ ಮಾಡಬಹುದು. ಇದು 32 ಜಿಬಿ ಆನ್‌ಬೋರ್ಡ್ ಸಂಗ್ರಹಣೆ ಸಾಮರ್ಥ್ಯವನ್ನು ಹೊಂದಿದ್ದು, ಇನ್ನಷ್ಟು ಸ್ಥಳಾವಕಾಶಕ್ಕಾಗಿ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಬಳಸಿಕೊಂಡು ವಿಸ್ತರಿಸಬಹುದಾಗಿದೆ.

ಜಿಪಿಎಸ್ ಪೆಟ್ ಟ್ರಾಕರ್

ಜಿಪಿಎಸ್ ಪೆಟ್ ಟ್ರಾಕರ್

#4

ನಿಮ್ಮ ಸಾಕುಪ್ರಾಣಿಯನ್ನು ವಾಕಿಂಗ್‌ಗಾಗಿ ನೀವು ಹೊರಗೆ ಕರೆದುಕೊಂಡು ಹೋಗುವಾಗ ಅದರ ಕತ್ತು ಪಟ್ಟಿಗೆ ಈ ಟ್ರಾಕರ್ ಅನ್ನು ಅಳವಡಿಸಬಹುದಾಗಿದೆ.

ಆಕ್ಷನ್ ಕ್ಯಾಮ್

ಆಕ್ಷನ್ ಕ್ಯಾಮ್

#5

4ಕೆ ಆಲ್ಟ್ರಾ ಎಚ್‌ಡಿ ರೆಸಲ್ಯೂಶನ್‌ನಲ್ಲಿ ನಿಮ್ಮನ್ನು ಪರಿಪೂರ್ಣವಾಗಿ ವೀಡಿಯೋ ಮಾಡುವ ಸಾಮರ್ಥ್ಯ ಇದಕ್ಕಿದೆ.

ಮಿಸ್ಟರಿ ಗ್ಯಾಜೆಟ್ಸ್

ಮಿಸ್ಟರಿ ಗ್ಯಾಜೆಟ್ಸ್

#6

ಇದು ಏನೋ ಹೊಸತು ಮತ್ತು ನೂತನ ಅನುಭವವನ್ನು ನೀಡುವಂತಿದೆ.

ಓವಲ್ ಹೆಡ್‌ಸೆಟ್ಸ್

ಓವಲ್ ಹೆಡ್‌ಸೆಟ್ಸ್

#7

ಆಸಸ್‌ನ ಹೊಸದಾದ ಮಧ್ಯಮ ಕ್ರಮಾಂಕದ ಗೇಮ್ ಲೈನ್ ಸ್ಟ್ರಿಕ್ಸ್ ಗೂಬೆಯಾಕಾರದ ಹೆಡ್‌ಸೆಟ್ ಅನ್ನು ಹೊಂದಿದೆ.

ಹಾರ್ಡಿ ಫುಜಿಟಿಸು ಲ್ಯಾಪ್‌ಟಾಪ್

ಹಾರ್ಡಿ ಫುಜಿಟಿಸು ಲ್ಯಾಪ್‌ಟಾಪ್

#8

ಜಪಾನೀ ಗ್ಯಾಜೆಟ್ ಆಗಿರುವ ಇದು ನೀರು ಮತ್ತು ಧೂಳು ನಿರೋಧಕವಾಗಿದೆ ಆದ್ದರಿಂದ ಫುಜಿಟಿಸು ಲ್ಯಾಪ್‌ಟಾಪ್ ಭಿನ್ನವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot