ಖರೀದಿ ಯೋಗ್ಯ ಅತ್ಯಾಧುನಿಕ ಗ್ಯಾಜೆಟ್‌ ಶ್ರೇಣಿ

By Shwetha
|

ನಿಮ್ಮನ್ನು ಹೆಚ್ಚು ಸಂಪರ್ಕದಲ್ಲಿರಿಸುವ ಹಲವಾರು ಗ್ಯಾಜೆಟ್‌ಗಳು ಈಗ ಲಭ್ಯವಿದೆ. ಇದನ್ನು ಉಉಯೋಗಿಸುವ ರೀತಿ ನಿಮ್ಮನ್ನು ಅವಲಂಬಿಸಿ ಇದೆ ಎಂಬುದನ್ನು ನೀವು ಬಲ್ಲಿರಾ? ನೀವು ಖರೀದಿಸುವ ಗ್ಯಾಜೆಟ್ ಹೊಸ ನೋಟ್‌ಬುಕ್ ಆಗಿರಬಹುದು ಇಲ್ಲವೇ ಬ್ರ್ಯಾಂಡೆಡ್ ಟಿವಿ ಕೂಡ ಆಗಿರಬಹುದು ಅದರ ವಿಶೇಷತೆ ಈ ಗ್ಯಾಜೆಟ್‌ಗಳು ನೀವು ಬಳಸುವ ವಿಧಾನವನ್ನು ಅನುಸರಿಸಿ ಇದೆ.

ನಿಮ್ಮ ಆಯ್ಕೆ ಮತ್ತು ಅಭಿರುಚಿಗೆ ತಕ್ಕಂತೆ ಇಂದು ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಉತ್ಪನ್ನಗಳು ದೊರೆಯುತ್ತಿದ್ದು ನಿಮ್ಮ ನೋಟ್‌ಬುಕ್ ಸ್ವಲ್ಪ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಾದಲ್ಲಿ ಆಧುನಿಕತೆಯನ್ನು ಮೇಳೈಸಿಕೊಂಡಿರುವ ನೋಟ್‌ಬುಕ್‌ಗೆ ನೀವು ಮೊರೆಹೋಗಬಹುದು.

ಹಾಗಿದ್ದರೆ ಈ ಆಧುನಿಕ ಎಂಬ ಅಂಶವನ್ನು ಮನಸ್ಸಿನಲ್ಲಿರಿಸಿಕೊಂಡು ಹೊಸ ಉತ್ಪನ್ನಗಳನ್ನು ಖರೀದಿಸಲು ತಜ್ಞರ ಸಲಹೆ ಅತೀ ಅಗತ್ಯ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ನಿಮಗೆ ಅತ್ಯಾಧುನಿಕತೆಯ ವಿಚಾರದ ಅಂಶಗಳನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಈಗಾಗಲೆ ಹೊಸದಾಗಿ ಎಂಟು ಗ್ಯಾಜೆಟ್‌ಗಳು ಲಾಂಚ್ ಆಗಿದ್ದು ಇವುಗಳು ನಿಮ್ಮೆಲ್ಲಾ ಆಸೆಯನ್ನು ನೆರವೇರಿಸುವ ಮಾದರಿಯಲ್ಲಿವೆ.

ಹಾಗಿದ್ದರೆ ಆ ಹೊಸ ಗ್ಯಾಜೆಟ್‌ಗಳು ಯಾವುವು ಅವುಗಳ ವಿವರಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೋಡಿ

#1

#1

ಸ್ಯಾಮ್‌ಸಂಗ್‌ನ ಮೂರನೇ ತಲೆಮಾರಿನ ಸ್ಮಾರ್ಟ್‌ ವಾಚ್, ಗೇರ್ ಲೈವ್ ಆಂಡ್ರಾಯ್ಡ್ ಬೆಂಬಲವಿರುವ ವೇರಿಯೇಬಲ್ ಆಗಿದೆ. ಇದು 1.63 ಇಂಚಿನ (320x320) Super AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 1.2 GHz ಪ್ರೊಸೆಸರ್ ಇದರಲ್ಲಿದೆ, 512MB RAM ಡಿವೈಸ್‌ನಲ್ಲಿದೆ ಮತ್ತು 4GB ROM ಅನ್ನು ಇದು ಒಳಗೊಂಡಿದೆ. ಇನ್ನು ಬ್ಯಾಟರಿ ಸಾಮರ್ಥ್ಯ 300mAh ಆಗಿದ್ದು ಬ್ಲ್ಯೂಟೂತ್ v4.0; ಹಾರ್ಟ್ ರೇಟ್ ಮಾನಿಟರ್, ಅಕ್ಸೆಲರೋಮಿಟರ್, ಆಂಡ್ರಾಯ್ಡ್ ವೇರ್ ಇದರಲ್ಲಿದೆ ಬೆಲೆ ರೂ 14,990 ಆಗಿದೆ.

#2

#2

ಇದರ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಇಂದು ಒಕ್ಯುಲಸ್ ರಿಫ್ಟ್ ಹೆಚ್ಚು ಪ್ರಸಿದ್ಧವಾಗಿದೆ. ಇದೊಂದು ಗೇಮಿಂಗ್ ಹೆಡ್‌ಸೆಟ್ ಆಗಿದ್ದು ಇದು 3D ಅಂಶ ಮತ್ತು 360 ವೀಕ್ಷಣಾ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ. ಇದರಿಂದ ನೀವು ಆಡುತ್ತಿರುವ ಗೇಮ್ಸ್ ಅಥವಾ ಸಿನಿಮಾದಲ್ಲಿ ನಿಮ್ಮನ್ನು ತೊಡಗಿಸಿದಂತಹ ಅನುಭವ ನಿಮಗುಂಟಾಗುತ್ತದೆ. ಇದರ ಬೆಲೆ ರೂ 21,000 ಆಗಿದೆ.

#3

#3

3D ಅಂಶ ಮಾರುಕಟ್ಟೆಯಲ್ಲಿ ತನ್ನ ಕಮಾಲನ್ನು ಕೊಂಚ ಕಳೆದುಕೊಳ್ಳುತ್ತಿರುವಂತೆಯೇ, ಕರ್ವ್ಡ್ ಟಿವಿ ಮಾರುಕಟ್ಟೆಯಲ್ಲಿ ಪ್ರಳಯವನ್ನೇ ಹುಟ್ಟುಹಾಕಿತು. ಇದರಲ್ಲಿ ನೀವು ನೋಡುವಂತಹ ಚಿತ್ರಗಳು ಇನ್ನಷ್ಟು ಸ್ಪಷ್ಟ ಮತ್ತು ನೇರ ರೂಪದಲ್ಲಿದ್ದು ಇವುಗಳು ಉತ್ತಮ ಕಾಂಟ್ರಾಸ್ಟ್ ಅನುಪಾತವನ್ನು ಒದಗಿಸುತ್ತವೆ. 65 ಮಾಡೆಲ್ ಬೆಲೆ ರೂ 4,49,900 ಮತ್ತು 55 ನದ್ದು ರೂ 3,29,900, ಗೆ ದೊರೆಯುತ್ತಿದೆ. H8000 ಕರ್ವ್ ಸ್ಮಾರ್ಟ್ ಟಿವಿ 65 ಮಾಡೆಲ್‌ನದ್ದು ರೂ 3,85,900 ಗೆ ಮತ್ತು 55 ಮಾಡೆಲ್‌ನದ್ದು ರೂ 2,51,900 ಜೊತೆಗೆ 48 ಮಾಡೆಲ್‌ನದ್ದು ರೂ 1,62,900 ಗೆ ದೊರೆಯುತ್ತಿದೆ.

#4

#4

ಪ್ಲೇ ಸ್ಟೇಶನ್ 3 ಯ ಯಶಸ್ವಿ ಹರಿಕಾರರಾಗಿರುವ ಈ ಡಿವೈಸ್ ನಿಮಗೆ ಅತ್ಯುತ್ತಮ ಗೇಮಿಂಗ್ ಅನುಭವವನ್ನು ಒದಗಿಸುತ್ತವೆ. ಇದು ಸೋನಿ ಕಂಪ್ಯೂಟರ್ ಎಂಟರ್‌ಟೈನ್‌ಮೆಂಟ್‌ನಿಂದ ಫ್ಲ್ಯಾಗ್‌ಶಿಪ್ ಶೀರ್ಷಿಕೆಯನ್ನು ಪಡೆದುಕೊಂಡಿದೆ. ಇದರ ಬೆಲೆ ರೂ 39,990 ಆಗಿದೆ.

#5

#5

ಆಪಲ್ ಮ್ಯಾಕ್‌ಬುಕ್ ತನ್ನ ಗಂಭೀರ ಕಾರ್ಯವೈಖರಿ ಮತ್ತು ನೈಜತೆಗೆ ಹೆಸರುವಾಸಿಯಾಗಿದೆ. ಇತ್ತೀಚೆಗಷ್ಟೇ ಕಂಪೆನಿ ರೆಟಿನಾ ಡಿಸ್‌ಪ್ಲೇ ಉಳ್ಳ ಮ್ಯಾಕ್‌ಬುಕ್ ಪ್ರೊ ವನ್ನು ಲಾಂಚ್ ಮಾಡಿದೆ.
ಆಪಲ್ ಮ್ಯಾಕ್‌ ಬುಕ್ ಪ್ರೊ ರೆಟಿನಾ ಡಿಸ್‌ಪ್ಲೇಯೊಂದಿಗೆ (128GB) - ರೂ 94,000
ಆಪಲ್ ಮ್ಯಾಕ್‌ ಬುಕ್ ಪ್ರೊ ರೆಟಿನಾ ಡಿಸ್‌ಪ್ಲೇಯೊಂದಿಗೆ (256GB) - ರೂ 109,000
ಆಪಲ್ ಮ್ಯಾಕ್‌ ಬುಕ್ ಪ್ರೊ ರೆಟಿನಾ ಡಿಸ್‌ಪ್ಲೇಯೊಂದಿಗೆ (512GB) - ರೂ 129,000 ಲಭ್ಯವಿದೆ.

#6

#6

5 ಇಂಚಿನ 1080p ಡಿಸ್‌ಪ್ಲೇ
2.3 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 800 (MSM 8974AB) ಪ್ರೊಸೆಸರ್
2 ಜಿಬಿ RAM; MIUI;
13MP ಕ್ಯಾಮೆರಾ 2MP ಫ್ರಂಟ್ ಫೇಸಿಂಗ್ ಶೂಟರ್
16GB ಸ್ಥಳೀಯ ಸಂಗ್ರಹಣಾ ಸಾಮರ್ಥ್ಯ
3050mAh ಬ್ಯಾಟರಿ
Bluetooth ಆವೃತ್ತಿ 4.0; NFC
ಬೆಲೆ ರೂ: 13,999

#7

#7

ನಿಮಗೆ ಗೇಮ್ಸ್ ಆಡುವಾಗ ಪೂರ್ಣ ಎಚ್‌ಡಿ ಅನುಭವವನ್ನು ಇದು ನೀಡುತ್ತದೆ. ಇದು 8 ಇಂಚಿನ 1080p ಡಿಸ್‌ಪ್ಲೇಯನ್ನು ನೀಡುತ್ತಿದ್ದು ನಿವಿಡಿಯಾ Tegra K1 SoC ಜೊತೆಗೆ Cortex-A15 CPU ಇದರಲ್ಲಿದೆ. 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಡಿವೈಸ್‌ನಲ್ಲಿದ್ದು 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದರಲ್ಲಿದೆ ನಿವಿಡಿಯಾ ಗೇಮ್‌ಸ್ಟ್ರೀಮ್ ತಂತ್ರಜ್ಞಾನವನ್ನು ಇದು ಒದಗಿಸುತ್ತಿದ್ದು 4G; 3G; 16GB/Wi-Fi; ಬ್ಲ್ಯೂಟೂತ್ ಡಿವೈಸ್‌ನಲ್ಲಿದೆ.

#8

#8

ಹೊಸದಾಗಿ ಲಾಂಚ್ ಆಗಿರುವ ಸರ್ಫೇಸ್ ಪ್ರೊ 3 ಟ್ಯಾಬ್ಲೆಟ್ ಮತ್ತು ನೋಟ್‌ಬುಕ್ ಆಗಿ ಬಳಸಬಹುದಾಗಿದೆ. ಮೈಕ್ರೋಸಾಫ್ಟ್ ತನ್ನ ಈ ಉತ್ಪನ್ನವನ್ನು ನಿಯಮಿತ ಲ್ಯಾಪ್‌ಟಾಪ್ ಬಳಕೆದಾರರನ್ನು ಕೇಂದ್ರೀಕರಿಸಿ ತಯಾರಿಸಿದೆ ಮತ್ತು ಟ್ಯಾಬ್ಲೆಟ್ ಖರೀದಿಸುವವರನ್ನು ಹೊರಗಿಟ್ಟಿದೆ. ನಿಮ್ಮ ಲ್ಯಾಪ್‌ಟಾಪ್ ಅನ್ನು ಸ್ಥಾನಾಂತರಿಸುವ ಟ್ಯಾಬ್ಲೆಟ್ ಇದಾಗಿದೆ ಎಂಬ ಆಕರ್ಷಕ ಶೀರ್ಷಿಕೆಯನ್ನು ಕೂಡ ಕಂಪೆನಿ ನೀಡಿದೆ. ಇದು 12-inch FHD ಸ್ಕ್ರೀನ್ ಅನ್ನು ಹೊಂದಿದ್ದು, 4GB RAM ಅನ್ನು ಒಳಗೊಂಡಿದೆ. ಇಂಟೆಲ್ ಕೋರ್ i3 ಪ್ರೊಸೆಸರ್ ಡಿವೈಸ್‌ನಲ್ಲಿದೆ. ವಿಂಡೋಸ್ 8.1, ಪೂರ್ಣ ಗಾತ್ರದ USB 3.0 ಪೋರ್ಟ್, ಮೈಕ್ರೋಎಸ್‌ಡಿ ಕಾರ್ಡ್ ರೀಡರ್ ಟ್ಯಾಬ್ಲೆಟ್‌ನಲ್ಲಿದೆ.

Best Mobiles in India

English summary
This article tells about 8 Cool Gadgets Which You Can Buy in 2014.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X