ವಿಂಡೋಸ್ ಕೊರ್ಟಾನಾದಿಂದ ನಿಮಗಾಗುವ ಉಪಯೋಗಗಳು...!!!

By: Precilla Dias

ಮೈಕ್ರೋ ಸಾಫ್ಟ್ ಇದೇ ಮೊದಲ ಬಾರಿಗೆ ವಿಂಡೋಸ್ ನಲ್ಲಿ ಕೊರ್ಟಾನಾ ವಾಯ್ಸ್ ಅಸಿಸ್ಟೆಂಟ್ ಬಿಡುಗಡೆ ಮಾಡಿದ್ದು, ಆಪಲ್ ಸಿರಿ ಮಾದರಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಈಗ ಹೊಸದಾಗಿ ಆಪ್ಡೇಟ್ ಆಗಿರುವ ವಿಂಡೋಸ್ 10ನಲ್ಲಿ ಕೊರ್ಟಾನಾ ಸಹ ಆಪ್ಡೇಟ್ ಆಗಿದ್ದು, ಸ್ಮಾರ್ಟರ್ ಮತ್ತು ಕೂಲ್ ಆಗಿದೆ.

ವಿಂಡೋಸ್ ಕೊರ್ಟಾನಾದಿಂದ ನಿಮಗಾಗುವ ಉಪಯೋಗಗಳು...!!!

ಈ ಹಿನ್ನಲೆಯಲ್ಲಿ ವಿಂಡೋಸ್ ನಲ್ಲಿರುವ ಕೊರ್ಟಾನಾ ನಿಮ್ಮ ಸಿಸ್ಟಮ್ ನಲ್ಲಿ ಏನು ಮಾಡಲಿದೆ, ಇದರಿಂದ ನಿಮ್ಮ ಕಾರ್ಯ ಚಟುವಟಿಕೆಯನ್ನು ಯಾವ ರೀತಿಯಲ್ಲಿ ಸುಲಭ ಮಾಡಲಿದೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ಎರಡರಲ್ಲೂ ಬಳಕೆ:

ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ಎರಡರಲ್ಲೂ ಬಳಕೆ:

ಕೊರ್ಟಾನಾ ವಿಂಡೋಸ್ 7 ಸ್ಮಾರ್ಟ್ ಫೋನಿನಲ್ಲಿ ಸಪೋರ್ಟ್ ಮಾಡಲಿದ್ದು, ಇದಕ್ಕಾಗಿ ಮೊಬೈಲ್ ಆಪ್ ನಿರ್ಮಿಸಲಾಗಿದೆ. ಇದರೊಂದಿಗೆ ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ಗಳಲ್ಲಿಯೂ ಇದು ಸಪೋರ್ಟ್ ಮಾಡಲಿದೆ. ಅಲ್ಲದೇ ಟ್ಯಾಬ್ಲೆಟ್ ನಲ್ಲಿಯೂ ಕಾರ್ಯನಿರ್ವಹಿಸಲಿದೆ. ಇದನ್ನು ಮ್ಯಾಕ್ ಬಟನ್ ಮತ್ತು ವಿಂಡೋಸ್ ಬಟನ್ ಕ್ಲಿಕ್ ಮಾಡುವ ಮೂಲಕ ಬಳಕೆ ಮಾಡಬಹುದಾಗಿದೆ.

ಬ್ರೌಸರ್ ಕಂಪ್ಯಾಟಬಲ್:

ಬ್ರೌಸರ್ ಕಂಪ್ಯಾಟಬಲ್:

ವಿಂಡೋಸ್ 10 ಆಪ್ಡೇಟ್ ನೀಡಿರುವ ಮೈಕ್ರೋ ಸಾಪ್ಟ್ ಇಂಟರ್ನೆಟ್ ಏಕ್ಸ್ ಪ್ಲೋರ್ ಅನ್ನು ಎಡ್ಜ್ ಬ್ರೌಸರ್ ನೊಂದಿಗೆ ಬದಲಾಯಿಸಿದ್ದು, ಇದರಲ್ಲಿ ಕೊರ್ಟಾನಾ ಮತ್ತು ಎಡ್ಜ್ ಒಂದಾಗಿ ಕಾರ್ಯನಿರ್ವಹಿಸಲಿದೆ. ಇವೇರಡು ಒಂದಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸ ಮಾಡಲಾಗಿದೆ. ಬ್ರೌಸರ್ ನಲ್ಲಿ ಕೊರ್ಟಾನಾ ಪಾಪ್ ಅಪ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ.

ಸರ್ಚ್ ಫೈಲ್:

ಸರ್ಚ್ ಫೈಲ್:

ಕೊರ್ಟಾನಾ ನಿಮ್ಮ ಕಂಪ್ಯೂಟರ್ ಡೇಟಾದಲ್ಲಿರುವ ಫೈಲ್ ಗಳನ್ನು ಹುಡುಕಿಕೊಡಲು ಸಹಾಯಕಾರಿಯಾಗಲಿದೆ. ಇದು ಹಾರ್ಡ್ ಡ್ರೈವ್ ಮತ್ತು ಕ್ಲೌಡ್ ಎರಡರಲ್ಲಿರುವುದನ್ನು ಹುಡುಕಿಕೊಡಲಿದೆ. ಇದು ಹೆಚ್ಚಿನ ಡೇಟಾ ಇದ್ದ ಸಂದರ್ಭದಲ್ಲಿ ಹೆಚ್ಚಿನ ಸಹಾಯವಾಗಲಿದೆ.

ಆಯ್ಕೆ ಸ್ವಾತಂತ್ರ್ಯ:

ಆಯ್ಕೆ ಸ್ವಾತಂತ್ರ್ಯ:

ಕೊರ್ಟಾನಾ ವಿಂಡೋಸ್ 10ನಲ್ಲಿ ಬೇಕಾದ ಬಟನ್ ಗೆ ಇಟ್ಟುಕೊಳ್ಳುವ ಆಯ್ಕೆಯನ್ನು ಮಾಡಿಕೊಟ್ಟಿದೆ. ಇದು ಆಯ್ಕೆ ಮಾಡಿಕೊಂಡ ಬಟನ್ ಕ್ಲಿಕ್ ಮಾಡುವ ಮೂಲಕ ಕೊರ್ಟಾನಾ ಆಕ್ಟಿವ್ ಮಾಡಿಕೊಳ್ಳಬಹುದಾಗಿದೆ.

ಎಲ್ಲೆಡೆ ಬಳಕೆ ಮಾಡಿಕೊಳ್ಳಬಹುದು:

ಎಲ್ಲೆಡೆ ಬಳಕೆ ಮಾಡಿಕೊಳ್ಳಬಹುದು:

ಸಿರಿ ಮ್ಯಾಕ್ ನಲ್ಲಿ ಮಾತ್ರವೇ ಬಳಕೆ ಮಾಡಿಕೊಳ್ಳಬಹುದು, ಗೂಗಲ್ ನೌ ಆಂಡ್ರಾಯ್ಡ್ ಗಾಗಿ, ಹಾಗೇ ಕೊರ್ಟಾನಾ ವಿಂಡೋಸ್ ಗೆ ಮಾತ್ರವೇ ಅಲ್ಲ, ಇದನ್ನು ಐಎಸ್ಓ, ವಿಂಡೋಸ್ ಮತ್ತು ಆಂಡ್ರಾಯ್ಡ್ ನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ವೈಯಕ್ತಿಕ ಸ್ಪರ್ಶ:

ವೈಯಕ್ತಿಕ ಸ್ಪರ್ಶ:

ಕೊರ್ಟಾನಾ ವಾಯ್ಸ್ ಅಸಿಸ್ಟೆಂಟ್ ನಿಮ್ಮೊಂದಿಗೆ ಬೆರೆಯಲಿದ್ದು, ನೀವು ನೀಡುವ ಕೆಲವು ವೈಯಕ್ತಿಕ ಕಮೆಂಡ್ ಗಳಿಗೆ ಒಗ್ಗಿಕೊಳ್ಳಿದೆ. ನಿಮ್ಮ ಗ್ರಾಂಥಿಕ ಭಾಷೆಯನ್ನು ಅದಕ್ಕೆ ಕಲಿಸಿಕೊಡಬೇಕಾಗಿದೆ. ಅಲ್ಲದೇ ನಿಮ್ಮ ವೈಯಕ್ತಿಯ ಕಮೆಂಡ್ ಗಳನ್ನು ಪಾಲಿಸಲಿದೆ.

ಹಾಡು ಹಾಡಲಿದೆ:

ಹಾಡು ಹಾಡಲಿದೆ:

ಕೊರ್ಟಾನಾ ಕೇವಲ ನೀವು ಹೇಳಿದಂತೆ ಕೇಳುವುದುದಲ್ಲದೇ ಜೋಕ್ ಮಾಡಲಿದೆ, ಅಲ್ಲದೇ ನಿಮ್ಮೊಂದಿಗೆ ಹಾಡನ್ನು ಹೇಳಿದೆ. ಅಲ್ಲದೇ ನಿಮ್ಮ ಬೇಸರವನ್ನು ತಣಿಸಲಿದೆ. ಅಲ್ಲದೇ ಇದನ್ನು ಕಾರ್ಯನಿರ್ವಹಿಸುವುದು ಮಜಾವಗಿರಲಿದೆ.

ಲೋಕೆಷನ್ ಬೆಸ್ಡ್ ವಾಯ್ಸ್ ಕಮೆಂಡ್:

ಲೋಕೆಷನ್ ಬೆಸ್ಡ್ ವಾಯ್ಸ್ ಕಮೆಂಡ್:

ಇದು ನಿಮ್ಮ ಕಾರ್ಯ ನಿರ್ವಹಿಸುವ ಲೊಕೆಷನ್ ಅನುಗುಣವಾಗಿ ಕೊರ್ಟಾನಾ ಕಾರ್ಯನಿರ್ವಹಿಸಲಿದೆ. ನೀವು ನಡೆದಾಡುವ ಜಾಗಗಳನ್ನು ಗುರುತು ಇಟ್ಟುಕೊಳ್ಳಲಿದೆ. ನಿಮ್ಮ ಪ್ರತಿ ಆಕ್ಟಿವಿಟಿಗಳನ್ನು ರೆಕಾರ್ಡ್ ಮಾಡಿಕೊಳ್ಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Redmond-based Microsoft introduced its voice assistant similar to Apple's Siri, namely Cortana. As Windows 10 gets the update, so does the Cortana.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot