ಹೆಚ್ಚಿನ ಅಂತರ್ಜಾಲದ ಬಳಕೆಯಿಂದ ಮೋಸ ಹೋಗುವಿರಿ ಜೋಕೆ!
ಅಂತರ್ಜಾಲದಲ್ಲಿ ನಿಮ್ಮನ್ನು ಮೋಸಗೊಳಿಸುವುದು ಇದೀಗ ತುಂಬಾ ಸುಲಭವಾಗಿದೆ. ನೀವು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಸಣ್ಣ ತಪ್ಪು ನಿಮ್ಮನ್ನು ಮೋಸದ ಬಲೆಯಲ್ಲಿ ಸಿಲುಕುವಂತೆ ಮಾಡುತ್ತದೆ. ನೀವು ಈ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ. ನೀವು ಮಾಡುವ ಸಣ್ಣ ತಪ್ಪುಗಳಿಗೆ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.
ಇದನ್ನೂ ಓದಿ: ಅದ್ಭುತ ಎಂದೆನಿಸಿರುವ ಟಾಪ್ ಸೆಲೆಬ್ರಿಟಿ ರೇಖಾಚಿತ್ರಗಳು
ನೀವು ಅಂತರ್ಜಾಲವನ್ನು ಬಳಸಿ ಸಾಧಿಸಬಹುದಾದ ಕೆಲಸಗಳು ನಿಮಗೆ ನಗಣ್ಯವಾಗಿರಬಹುದು. ಆದರೆ ಇದೇ ಸಮಯಕ್ಕಾಗಿ ಕಾದು ಕುಳಿತುಕೊಳ್ಳುವ ವಂಚಕರು ನಿಮ್ಮ ಈ ಕೆಟ್ಟ ಸಮಯವನ್ನು ತಮ್ಮ ದುಷ್ಟ ಸಾಧನೆಗಾಗಿ ಬಳಸಿಕೊಳ್ಳುತ್ತಾರೆ ಮತ್ತು ನಿಮ್ಮನ್ನು ದೋಚುತ್ತಾರೆ. ಇಂದಿನ ಲೇಖನದಲ್ಲಿ ಆ ವಂಚನೆಗಳು ಯಾವುವು ಮತ್ತು ನೀವು ಮಾಡುವ ಯಾವ ಕೆಲಸ ಈ ವಂಚನೆಗೆ ಪೂರಕವಾಗಿರುತ್ತದೆ ಎಂಬುದನ್ನು ಅರಿತುಕೊಳ್ಳೋಣ.
ನಿಮಗೆ ಸಿನಿಮಾವನ್ನು ವೀಕ್ಷಿಸಲು ಟಿಕೇಟ್‌ನ ಅವಶ್ಯಕತೆ ಇರುತ್ತದೆ. ಅಂತರ್ಜಾಲದಲ್ಲಿ 200 ರೂಪಾಯಿಗೆ ಟಿಕೇಟ್ ದೊರೆಯುತ್ತದೆ ಎಂಬ ಜಾಹೀರಾತನ್ನು ನೋಡಿ ನೀವು ಹಣವನ್ನು ಪಾವತಿ ಮಾಡುತ್ತೀರಿ. ಆದರೆ ಸಿನಿಮಾ ವೀಕ್ಷಣೆಯಂದು ನಿಮಗೆ ಮೋಸ ಹೋಗಿರುವುದು ಅರಿವಾಗುತ್ತದೆ. ಮೋಜಿಗಾಗಿ ನಿಮ್ಮ ಸ್ನೇಹಿತರು ಯಾವುದಾದರೂ ಲಿಂಕ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುತ್ತಾರೆ. ನೀವು ಕೂಡ ಕ್ರೇಜ್‌ಗೆ ಒಳಗಾಗಿ ಈ ಲಿಂಕ್ ಅನ್ನು ಹಿಂಬಾಲಿಸುತ್ತಾರೆ. ಆದರೆ ಕೊನೆಗೆ ಇದು ನಿಮ್ಮನ್ನು ವೈರಸ್ ಇರುವ ವೆಬ್‌ಸೈಟ್‌ಗೆ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ. ಸ್ಥಳೀಯ ಪೋಲೀಸ್ ಸ್ಟೇಶನ್ ಎಂಬ ಹೆಸರಿನಿಂದ ನಿಮಗೆ ಕರೆ ಬರುತ್ತದೆ. ಮತ್ತು ನಿಮ್ಮನ್ನು ತನಿಖೆ ಮಾಡುವುದಕ್ಕಾಗಿ ನಿಮ್ಮೆಲ್ಲಾ ಮಾಹಿತಿಯನ್ನು ಈ ಕರೆ ಕೇಳುತ್ತದೆ. ಇವರು ವೆಬ್ ಸೇವೆಯನ್ನು ಬಳಸಿ ನಿಮಗೆ ಕರೆಮಾಡುತ್ತಿರುತ್ತಾರೆ ಇದನ್ನು ನಿಮ್ಮ ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಬ್ಯಾಂಕ್ ಖಾತೆಗೆ ಧಕ್ಕೆಯುಂಟಾಗಿದ್ದು ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸಬೇಕೆಂಬ ಇಮೇಲ್ ನಿಮಗೆ ದೊರಕುತ್ತದೆ. ನೀವು ಕೂಡಲೇ ಆ ಲಿಂಕ್‌ಗೆ ಹೋಗಿ ಪಾಸ್‌ವರ್ಡ್ ಬದಲಾಯಿಸುತ್ತೀರಿ. ಇದು ನಿಮ್ಮ ಬ್ಯಾಂಕ್ ಖಾತೆಯಾಗಿದೆ ಎಂಬುದು ನಿಮ್ಮ ತಲೆಯಲ್ಲಿರುತ್ತದೆ. ಆದರೆ ಇದು ಮೋಸಗಾರರ ಜಾಲವಾಗಿರುತ್ತದೆ ಎಂಬುದು ಅರಿವಾದಾಗ ತಡವಾಗಿರುತ್ತದೆ. ಇನ್ನು ನಿಮ್ಮನ್ನು ಸುಲಭದಲ್ಲಿ ಮೋಸ ಮಾಡುವವಳು ಆನ್‌ಲೈನ್ ಗೆಳತಿಯಾಗಿರುತ್ತಾಳೆ. ನಿಮ್ಮ ಜೊತೆ ಆತ್ಮೀಯವಾಗಿ ನಂತರ ಒಂದು ದಿನ ಹೇಳುತ್ತಾಳೆ ನಾನು ನ್ಯೂಯಾರ್ಕ್‌ನಲ್ಲಿದ್ದೇನೆ ನನಗೆ ದುಡ್ಡಿನ ಅವಶ್ಯಕತೆ ಇದೆ ಎಂಬುದನ್ನು ತಿಳಿಸುತ್ತಾಳೆ. ನೀವು ಒಬ್ಬ ಒಳ್ಳೆಯ ಗೆಳೆಯನಂತೆ ಆಕೆಗೆ ದುಡ್ಡು ಕಳುಹಿಸುತ್ತೀರಿ. ಆದರೆ ನೀವು ಇಲ್ಲಿ ಮೋಸಕ್ಕೆ ಒಳಗಾಗಿರುತ್ತೀರಿ. ನಿಮ್ಮ ಮನೆಯವರನ್ನು ಅಪಹರಣ ಮಾಡಲಾಗಿದೆ ಎಂದು ತಿಳಿಸುವ ಇಮೇಲೆ, ಫೋನ್ ಕರೆ ಅಥವಾ ಫೇಸ್‌ಬುಕ್ ಸಂದೇಶ ನಿಮಗೆ ಬರಬಹುದು. ಆದರೆ ಇದು ನಿಮ್ಮನ್ನು ಮೋಸಗೊಳಿಸುವ ವಿಧಾನವಾಗಿದೆ ಎಂಬುದನ್ನು ಅರಿತುಕೊಳ್ಳಿ. ಇನ್ನು ನಿಧಿ ಸಂಗ್ರಹಿಸುವವರೂ ಕೂಡ ಮೋಸದ ವೆಬ್‌ಸೈಟ್‌ಗಳನ್ನು ಬಳಸಿ ನಿಮ್ಮನ್ನು ಎಡತಾಕುತ್ತಾರೆ. ಹಾಗೂ ಅವರ ಬೇಳೆ ಬೇಯಿಸಿಕೊಳ್ಳುತ್ತಾರೆ. ನೀವು ಕೂಡ ದಡ್ಡರಂತೆ ಅವರು ಕಳುಹಿಸಿದ ಲಿಂಕ್‌ಗೆ ಹಣವನ್ನು ಕಳುಹಿಸುತ್ತೀರಿ. ಆದರೆ ಇದು ಸತ್ಯವೋ ಸುಳ್ಳೋ ಎಂಬುದನ್ನು ನಿಖರವಾಗಿ ಪರಿಶೀಲಿಸಿಕೊಳ್ಳಿ. ನೈಜೀರಿಯಾದ ರಾಜಕುಮಾರಿಯ ಇಮೇಲ್ ಅಥವಾ ರಾಜಮನೆತನದ ಯಾವುದಾದರೂ ಕರೆ ನಿಮಗೆ ಬರಬಹುದು. ಈ ಕರೆ ಹೇಗೆ ಬರುತ್ತದೆ ಎಂದರೆ ಆ ರಾಜಕುಮಾರಿ ದೇಶವನ್ನು ತೊರೆಯುತ್ತಿದ್ದು ಅವರ ಬಳಿ ಇದ್ದ ಹಣವನ್ನು ನೋಡಿಕೊಳ್ಳಲು ವ್ಯಕ್ತಿಯ ಅವಶ್ಯಕತೆ ಇದೆ ಎಂದಾಗಿರುತ್ತದೆ. ನೀವು ನೇಮಕಾತಿ ಶುಲ್ಕವನ್ನು ತುಂಬಿದರೆ ಆ ಹಣದ ಅರ್ಧಪಾಲನ್ನು ನಿಮಗೆ ನೀಡುತ್ತಾರೆ ಎಂದಾಗಿರುತ್ತದೆ.
ಅಂತರ್ಜಾಲದ ಬಳಕೆಯೇ ಮೋಸ ಹೋಗದಿರಿ ಜೋಕೆ?

ಅಂತರ್ಜಾಲದ ಬಳಕೆಯೇ ಮೋಸ ಹೋಗದಿರಿ ಜೋಕೆ?

ಅಂತರ್ಜಾಲದ ಬಳಕೆಯೇ ಮೋಸ ಹೋಗದಿರಿ ಜೋಕೆ?

ಅಂತರ್ಜಾಲದ ಬಳಕೆಯೇ ಮೋಸ ಹೋಗದಿರಿ ಜೋಕೆ?

ಅಂತರ್ಜಾಲದ ಬಳಕೆಯೇ ಮೋಸ ಹೋಗದಿರಿ ಜೋಕೆ?

ಅಂತರ್ಜಾಲದ ಬಳಕೆಯೇ ಮೋಸ ಹೋಗದಿರಿ ಜೋಕೆ?

ಅಂತರ್ಜಾಲದ ಬಳಕೆಯೇ ಮೋಸ ಹೋಗದಿರಿ ಜೋಕೆ?

ಅಂತರ್ಜಾಲದ ಬಳಕೆಯೇ ಮೋಸ ಹೋಗದಿರಿ ಜೋಕೆ?


Click it and Unblock the Notifications








