Subscribe to Gizbot

ಹೊಸ ಎಚ್‌ಪಿ ಇಂಕ್‌ಜೆಟ್‌ ಪ್ರಿಂಟರ್‌ ವಿಶೇಷತೆ ಏನು?

Posted By:

ಮನೆಯಲ್ಲಿ ಲ್ಯಾಪ್‌ಟಾಪ್‌ ಕಂಪ್ಯೂಟರ್‌ಗಳ ಬಳಕೆ ಹೆಚ್ಚಾದಂತೆ ಈಗ ಪ್ರಿಂಟರ್‌ಗಳನ್ನು ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ.ಅದರಲ್ಲೂ ಹೆಚ್ಚು ಜನರು ಈಗ ಮನೆಯಲ್ಲಿ ಆಫೀಸ್‌ ಕೆಲಸಗಳಿಗೆ ಸಂಬಂಧಿಸಿದಂತೆ ಎಚ್‌ಪಿ ಕಂಪೆನಿಯ Officejet Pro ಸರಣಿಯ ಇಂಕ್‌ಜೆಟ್‌ ಪ್ರಿಂಟರ್‌ಗಳನ್ನು ಖರೀದಿಸಲು ಇಚ್ಚಿಸುತ್ತಿದ್ದಾರೆ.ಈ ಸರಣಿಯ ಪ್ರಿಂಟರ್‌ಗಳ ಬೆಲೆ ಕಡಿಮೆ ಜೊತೆಗೆ ಹೊಸ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಈ ಪ್ರಿಂಟರ್‌ ಖರೀದಿಗೆ ಹೆಚ್‌ಪಿ ಈಗ ಹೊಸ ಆಫರ್‌ ಪ್ರಕಟಿಸಿದೆ.ಜೊತೆಗೆ ಹಳೇ ಪ್ರಿಂಟರ್‌‌ ನೀಡಿ ಹೊಸ ಪ್ರಿಂಟರ್‌ ನೀಡುವ ಇನ್ನೊಂದು ಆಫರ್‍ ಪ್ರಕಟಿಸಿದೆ. ಹೀಗಾಗಿ ಇಲ್ಲಿ ಪ್ರಿಂಟರ್‌ ಲಾಭ ಮತ್ತು ಆಫರ್‌ಗಳ ವಿವರ ನೀಡಲಾಗಿದೆ.

ಉತ್ತಮ ಗುಣಮಟ್ಟದ ಪ್ರಿಂಟ್‌:
ಈ ಪ್ರಿಂಟರ್‌ನಲ್ಲಿ ಲೇಸರ್‌ ಗುಣಮಟ್ಟದ ಪ್ರಿಂಟ್‌‌ ತೆಗೆಯಬಹದಾಗಿದ್ದು ಗ್ರಾಹಕ ಸ್ನೇಹಿ ಪ್ರಿಂಟರ್‌ ಆಗಿದೆ.

ನಿಮಿಷಕ್ಕೆ 19 ಪೇಜ್‌ ಪ್ರಿಂಟ್‌:

ಈ ಸಿರೀಸ್‌ ಪ್ರಿಂಟರ್‌ಗಳಲ್ಲಿ ನಿಮಿಷಕ್ಕೆ 19 ಪೇಜ್‌ಗಳನ್ನು ಪ್ರಿಂಟ್‌‌ ಮಾಡಬಹುದಾಗಿದೆ.

ತಿಂಗಳಿಗೆ 12 ಸಾವಿರ ಪುಟ:

ಅಷ್ಟೇ ಅಲ್ಲದೇ ಒಂದು ತಿಂಗಳು 12 ಸಾವಿರ ಪೇಜ್‌‌ಗಳನ್ನು ಪ್ರಿಂಟ್‌ ಮಾಡುವ ಸಾಮರ್ಥ್ಯ ಈ ಪ್ರಿಂಟರ್‌ನಲ್ಲಿದೆ.

ಕಡಿಮೆ ಬೆಲೆಯಲ್ಲಿ ಮುದ್ರಣ:

ಇನ್ನೂ ಒಂದು ಪೇಜ್‌ನ್ನು ಕಡಿಮೆ ಬೆಲೆಯಲ್ಲಿ ಮುದ್ರಣ ಮಾಡಬಹುದು. ಯಾಕೆಂದರೆ 999 ಬೆಲೆಯ 960 XL ಒಂದು ಕಾಟ್ರಿಜ್‌ನಲ್ಲಿ 1600 ಪೇಪರ್‌‌ಗಳನ್ನು ಮುದ್ರಣ ಮಾಡಬಹುದಾಗಿದೆ.

ಇ ಪ್ರಿಂಟ್‌ ವಿಶೇಷತೆ:

ಈ ಸರಣಿಯ ಪ್ರಿಂಟರ್‌ಗಳು ಇ ಪ್ರಿಂಟ್‌ ವಿಶೇಷತೆಯನ್ನು ಹೊಂದಿದ್ದು HP's ePrintCenter ವೆಬ್‌ ಸೈಟ್‌ನಲ್ಲಿ ರಿಜಿಸ್ಟರ್‌ ಮಾಡಿ ಮೊಬೈಲ್‌ ಇಮೇಲ್‌ ಮೂಲಕವೇ ದೂರದಿಂದಲೇ ಪ್ರಿಂಟ್‌ ತೆಗೆಯಬಹುದಾಗಿದೆ.

ಎರಡು ಕಡೆ ಪ್ರಿಂಟ್‌:

ಈ ಸರಣಿಯ ಪ್ರಿಂಟರ್‌ಗಳು ಶೇ.50 ಪೇಪರ್‌ ಬಳಕೆಯನ್ನು ಕಡಿಮೆ ಮಾಡುತ್ತದೆ. ಪೇಪರ್‌ನ ಎರಡು ಕಡೆಯಲ್ಲಿ ಆಟೋಮ್ಯಾಟಿಕ್‌ ಆಗಿ ಪ್ರಿಂಟ್‌ ತೆಗೆಯಬಹುದಾಗಿದೆ.

ನೆಟ್‌ವರ್ಕ್‌:

ನಿಮ್ಮ Ethernet ಕೇಬಲ್‌ ಮೂಲಕ ಆಫೀಸ್‌‌ ನೆಟ್‌ವರ್ಕ್‌ನಲ್ಲಿರುವ ಇತರರು ಪ್ರಿಂಟರ್‌ನಲ್ಲಿ ಪ್ರಿಂಟ್‌ ತೆಗೆಯಬಹುದು.

ಬೆಲೆ:

ಈ ಸರಣಿಯ ಕಪ್ಪು ಬಿಳುಪು ಪ್ರಿಂಟರ್‌ಗಳ ಆರಂಭದ ಬೆಲೆ 7,999 ರೂಪಾಯಿಯಾಗಿದ್ದು,ಈ ಪ್ರಿಂಟರ್‌ಗಳಿಗೆ ಎಚ್‌ಪಿ ಕಂಪೆನಿ 3 ವರ್ಷದ ವಾರಂಟಿಯನ್ನುನೀಡುತ್ತಿದೆ.

ಹೆಚ್ಚಿನ ಮಾಹಿತಿಗೆ ಮೆಸೇಜ್‌ ಕಳುಹಿಸಿ:

1 ವರ್ಷ‌ ಸ್ಟ್ಯಾಂಡರ್ಡ್‌‌ ವಾರಂಟಿ +2 ವರ್ಷ ವಿಸ್ತರಿಸಿದ ವಾರಂಟಿಯನ್ನು ಎಚ್‌ಪಿ ನೀಡಿದೆ. ಅಕ್ಟೋಬರ್‌1, 2013ರಿಂದ ಜನವರಿ 31ರವರ ನಡುವೆ ಖರೀದಿಸಿದ HP Officejet Pro 3610/3620 ಪ್ರಿಂಟರ್‌ಗಳಿಗೆ ಮಾತ್ರ ಈ ಆಫರ್‌ ಅನ್ವಯವಾಗಲಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಬಹುದು. www.hp.com/in/monoink


ಹೆಚ್ಚಿನ ಮಾಹಿತಿಗೆ 'OJ' ಟೈಪ್‌ ಮಾಡಿ 56070 ನಂಬರ್‌ಗೆ ಮೆಸೇಜ್‌ ಮಾಡಬಹುದು. ಜನವರಿ 31ರವರೆಗೆ ಮಾತ್ರ ಈ ಆಫರ್‌‌ಗಳು ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿದ್ದು ವೆಬ್‌ಸೈಟ್‌ನಲ್ಲಿ ಯಾವೆಲ್ಲ ಮಹಾನಗರಗಳಲ್ಲಿ ಈ ಆಫರ್‌ ಅನ್ವಯವಾಗಲಿದೆ ಎನ್ನುವುದನ್ನು ನೋಡಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot