ಗೂಗಲ್ ಟ್ಯಾಬ್ಲೆಟ್: ಗೊತ್ತಿರಬೇಕಾದ 9 ಅಂಶಗಳು

By Varun
|

ಗೂಗಲ್ ಟ್ಯಾಬ್ಲೆಟ್: ಗೊತ್ತಿರಬೇಕಾದ 9 ಅಂಶಗಳು

11 ಸಾವಿರಕ್ಕೆ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಿಟ್ಟಿರುವ ಗೂಗಲ್ ಒಂದೇ ಏಟಿಗೆ ಎರಡು ಕಲ್ಲು ಹೊಡೆದಿದೆ. ಇತ್ತ ತನ್ನದೇ ಆದ ಬಿಟ್ಟಿ ತಂತ್ರಾಂಶ ಉಪಯೋಗಿಸಿಕೊಂಡು ಬೇರೆ ಕಂಪನಿಗಳು ಮೆರೆದಿದ್ದನ್ನು ನೋಡಿ ತಾನು ಒಂದು ಕೈ ನೋಡೇ ಬಿಡುವ ಎಂದು ಟ್ಯಾಬ್ಲೆಟ್ ಬಿಟ್ಟಿದೆ. ಒಂದು ಕಡೆ ಉತ್ತಮ ಫೀಚರುಗಳನ್ನು ಅಳವಡಿಸಿ ನಂ 1 ಟ್ಯಾಬ್ಲೆಟ್ ಮಾರಾಟಗಾರ ಆಪಲ್ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದರೆ ಮತ್ತೊಂದು ಕಡೆ ಅಗ್ಗದ ಟ್ಯಾಬ್ಲೆಟ್ ಉತ್ಪಾದಕರನ್ನು ಅಣಕಿಸುವಂತೆ ಅಗ್ಗದ ಬೆಲೆಗೆ ಟ್ಯಾಬ್ಲೆಟ್ ತಂದಿದೆ.

ಟ್ಯಾಬ್ಲೆಟ್ ಭಾರತದ ಮಾರುಕಟ್ಟೆಗೆ ಬರುವುದಕ್ಕೆ ಇನ್ನೂ ಎರಡು ವಾರ ಇದ್ದು, ಟ್ಯಾಬ್ಲೆಟ್ ನಲ್ಲಿ ಏನೇನಿದೆ ಏನೇನಿಲ್ಲ ಎಂದು ತಿಳಿದುಕೊಂಡರೆ ಚೆನ್ನಾಗಿರುತ್ತೆ ಅಲ್ವಾ?

ಹಾಗಾಗಿ ಇಲ್ಲಿವೆ ಗೂಗಲ್ ನೆಕ್ಸಸ್ 7 ಟ್ಯಾಬ್ಲೆಟ್ ನ 9 ಪ್ರಮುಖ ಅಂಶಗಳು:

1) ಸೈಜ್ ಮತ್ತು ತೂಕ- ಅಸೂಸ್ ಉತ್ಪಾದಿತ ಈ ಟ್ಯಾಬ್ಲೆಟ್ 198.5x120x10.45mm ಇದ್ದು, 340 ಗ್ರಾಂ ತೂಕವಿದೆ.

2) ಡಿಸ್ಪ್ಲೇ- 7 ಇಂಚ್ HD (ಹೈ-ಡೆಫಿನಿಶನ್) ಇರುವ ಇದರ ಡಿಸ್ಪ್ಲೇ,1280x800 ಪಿಕ್ಸೆಲ್ ಹೊಂದಿದೆ. IPS ಡಿಸ್ಪ್ಲೇ ( ಎಲ್ಲ ಆಂಗಲ್ ಗಳಿಂದ ಬಣ್ಣಗಳು ಸಂಪೂರ್ಣವಾಗಿ ಕಾಣುತ್ತವೆ) ಕೂಡ ಇರುವ ಇದಕ್ಕೆ, ತರಚು ನಿರೋಧಕ ಗೊರಿಲ್ಲಾ ಗ್ಲಾಸ್ ಸುರಕ್ಷತೆ ಇದೆ.

3) ಪ್ರೋಸೆಸರ್ ಹಾಗು ಗ್ರಾಫಿಕ್ಸ್- ಶಕ್ತಿಯುತವಾದ Nvdia ಟೆಗ್ರಾ 3 ಕ್ವಾಡ್ ಕೋರ್ ಪ್ರೋಸೆಸರ್ ಇದರಲ್ಲಿದ್ದು, 1GB ರಾಮ್ ಹಾಗು 12 ಕೋರ್ GPU ನಿಂದಾಗಿ ಗೇಮಿಂಗ್ ಹಾಗು ಮಲ್ಟಿಮೀಡಿಯಾ ಗಾಗಿ ಉತ್ತಮ ಗ್ರಾಫಿಕ್ಸ್ ಹೊಂದಿದೆ. ಇದರೊಟ್ಟಿಗೆ ಗೈರೋಸ್ಕೋಪ್, ಆಕ್ಸೆಲೆರೋಮೀಟರ್ ಹಾಗು ಮ್ಯಾಗ್ನೆಟೋಮೀಟರ್ ಕೂಡ ಇದೆ.

4) ಆಪರೇಟಿಂಗ್ ಸಿಸ್ಟಮ್- ಇದರ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ತಂತ್ರಾಂಶ,  ಸ್ಮಾರ್ಟ್ ಕೀಬೋರ್ಡ್ ಹೊಂದಲಿದ್ದು , ಸಂಜ್ಞೆ ಮೂಲಕ ಆಪರೇಟ್ ಮಾಡುವುದಕ್ಕೆ, ವಾಯ್ಸ್ ಸರ್ಚ್ ಮಾಡುವುದಕ್ಕೆ ಹಾಗು ಸುಲಭವಾಗಿ ಫೋಟೋ ಶೇರಿಂಗ್ ಮಾಡಲು ಅನುಕೂಲಕರವಾಗಿದೆ.

5) ಕ್ಯಾಮರಾ - ಬೇರೆಲ್ಲ ಫೀಚರುಗಳಿಗೆ ಹೋಲಿಸಿದರೆ ಗೂಗಲ್ ನೆಕ್ಸಸ್ 7, ತನ್ನ  ಕ್ಯಾಮರಾ ಮೂಲಕ ನಿರಾಸೆ ಮೂಡಿಸುತ್ತದೆ, ಯಾಕೆಂದರೆ ಬೇರೆ ಟ್ಯಾಬ್ಲೆಟ್ ಗಳಿಗೆ ಹೋಲಿಸಿದರೆ ಇದರಲ್ಲಿ ಹಿಂಬದಿಯ ಕ್ಯಾಮರಾ ಇಲ್ಲ. ಅದರ ಬದಲಿಗೆ ವಿಡಿಯೋ ಚಾಟ್ ಗೆ ಅನುಕೂಲವಾಗುವ 1.2 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ ಮಾತ್ರ ಹೊಂದಿದೆ.

6) ಬ್ಯಾಟರಿ ಹಾಗು ಸ್ಟೋರೇಜ್ -  8 ಗಂಟೆ ಸತತವಾಗಿ ಉಪಯೋಗಿಸಬಹುದಾದ 4325 mAh ಬ್ಯಾಟರಿ ಸಾಮರ್ಥ್ಯವಿದೆ. ಸ್ಟೋರೇಜ್ ವಿಷಯಕ್ಕೆ ಬಂದರೆ ಇದರ ಆಂತರಿಕ ಮೆಮೊರಿ 8 GB ಹಾಗು 16 GB.

7) ಕನೆಕ್ಟಿವಿಟಿ- ವೈಫೈ, ಬ್ಲೂಟೂತ್, USB, ಮೈಕ್ರೋ USB, ಮೈಕ್ರೋಫೋನ್ ಹಾಗು NFC (ನಿಯರ್ ಫೀಲ್ಡ್ ಕನೆಕ್ಟಿವಿಟಿ- ಆಂಡ್ರಾಯ್ಡ್ ಬೀಮ್) ಹಾಗು GPS ಇದೆ.

8 ) ಆಪ್ಸ್- ಸುಮಾರು 6 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ ಮಾಡಬಹುದಾದ ಆಪ್ಸ್ ಇರುವ ಗೂಗಲ್ ಪ್ಲೇ ಮಳಿಗೆ ಪ್ರೀ-ಲೋಡೆಡ್ ಆಗಿ ಬರಲಿದೆ

9) ಮ್ಯೂಸಿಕ್ ಮ್ಯಾನೇಜರ್ - ಆಪಲ್ ನ ಐಟ್ಯೂನ್ ಮ್ಯೂಸಿಕ್ ಲೈಬ್ರರಿಯಿಂದ 20 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಗೂಗಲ್ ಪ್ಲೇ ಖಾತೆಗೆ ಆಮದು ಮಾಡಿಕೊಂಡು ಕೇಳಬಹುದಾಗಿದೆ.

ನೆಕ್ಸಸ್ 7 ನ ಬಗ್ಗೆ ಇಷ್ಟು ಸಂಗತಿಗಳು ಈಗ ನಿಮಗೆ ಗೊತ್ತಾಗಿರುವುದರಿಂದ ಅದನ್ನು ಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸಲು ನಿಮಗೆ ಸುಲಭವಾಗಲಿದೆ.

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X