ಶೀಘ್ರದಲ್ಲಿ ಎಚ್ ಟಿಸಿ ಹೈಬ್ರಿಡ್ ಕ್ರೋಮ್ ಬುಕ್

Posted By: Staff
ಶೀಘ್ರದಲ್ಲಿ ಎಚ್ ಟಿಸಿ ಹೈಬ್ರಿಡ್ ಕ್ರೋಮ್ ಬುಕ್
ಎಚ್ ಟಿಸಿ ಕಂಪನಿಯು ನೂತನ ಕ್ರೋಮ್ ಬುಕ್ ಅನಾವರಣ ಮಾಡಲಿದೆ ಎಂಬ ಸುದ್ದಿ ಟೆಕ್ ಲೋಕದಲ್ಲಿ ಹರಿದಾಡುತ್ತಿದೆ. ಮೊದಲ ಕ್ರೋಮ್ ಬುಕನ್ನು ಸ್ಯಾಮ್ ಸಂಗ್ ಪರಿಚಯಿಸಿತ್ತು. ಏಸರ್ ಕೂಡ ಕ್ರೋಮ್ ಬುಕ್ ಅನಾವರಣ ಮಾಡಿತ್ತು.

ಸ್ಯಾಮ್ ಸಂಗ್ ಮತ್ತು ಏಸರ್ ಕಂಪನಿಗಳು ಪ್ರತಿವರ್ಷ ಸುಮಾರು 25-30 ಸಾವಿರ ಕ್ರೋಮ್ ಬುಕ್ ಮಾರಾಟವಾಗುವ ನಿರೀಕ್ಷೆಯನ್ನು ಹೊಂದಿವೆ. ಇವೆರಡು ಕಂಪನಿಗಳು ಕ್ರೋಮ್ ಬುಕ್ ದರ ತಗ್ಗಿಸುವ ನಿಟ್ಟಿನಲ್ಲಿಯೂ ಯೋಚಿಸುತ್ತಿವೆ. ಇಂತಹ ಸಮಯದಲ್ಲಿ ಎಚ್ ಟಿಸಿ ಹೊರತರುವ ಕ್ರೋಮ್ ಬುಕ್ ಈ ಕಂಪನಿಗಳ ಮಾರಾಟಕ್ಕೆ ಹಿನ್ನಡೆ ತರುವ ನಿರೀಕ್ಷೆಯಿದೆ.

ಎಚ್ ಟಿಸಿ ಕಂಪನಿಯ ಟ್ಯಾಬ್ಲೆಟ್ ಕಂಪ್ಯೂಟರ್ ಗಳು ಅತ್ಯುತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಆದರೆ ಕಂಪನಿಯ ನೋಟ್ ಬುಕ್ ಗಳ ಮಾರಾಟ ಆಕರ್ಷಕವಾಗಿಲ್ಲ. ಕಂಪನಿ ಹೊರತರಲಿರುವ ಕ್ರೋಮ್ ಬುಕ್ ಕುರಿತು ಇನ್ನೂ ಯಾವುದೇ ಖಚಿತ ಮಾಹಿತಿಯಿಲ್ಲ. ಆದರೆ ಈ ಕುರಿತು ಸುದ್ದಿ ಹರಡಿರುವುದು ಮಾತ್ರ ನಿಜ.

ವದಂತಿಗಳ ಪ್ರಕಾರ ಈ ಹೈಬ್ರೆಡ್ ಟ್ಯಾಬ್ಲೆಟ್ ಕ್ರೋಮ್ ಬುಕ್ ಮಾರುಕಟ್ಟೆಗೆ ಶೀಘ್ರದಲ್ಲಿ ಅನಾವರಣಗೊಳ್ಳಲಿದೆ. ಇದು ಸ್ಲೈಡರ್ ಕೀಬೋರ್ಡ್ ಹೊಂದಿರಲಿದೆ ಎಂದು ಮೂಲಗಳು ಹೇಳಿವೆ. ಡಿಜಿಟೈಮ್ಸ್ ಪ್ರಕಾರ ಈ ಗ್ಯಾಡ್ಜೆಟ್ ಸಂಪೂರ್ಣವಾಗಿ ಗೂಗಲ್ ಕ್ರೋಮ್ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆಯಂತೆ.

ಸ್ಮಾರ್ಟ್ ಫೋನ್ ವಿಷ್ಯಕ್ಕೆ ಬಂದರೆ ಎಚ್ ಟಿಸಿ ಅಗ್ರಕಂಪನಿಯಾಗಿದೆ. ಈಗ ಹೊರತರಲಿರುವ ಕ್ರೋಮ್ ಬುಕ್ ಡ್ಯೂಯಲ್ ಬೂಟ್ ಸೆಟಪ್ ಹೊಂದಿರಲಿದೆಯಂತೆ. ಕಂಪನಿಯು 2008ರಲ್ಲಿಯೇ ಡ್ಯೂಯಲ್ ಬೂಟ್ ಅಪರೇಟಿಂಗ್ ಸಿಸ್ಟಮ್ ಇರುವ ಸಾಧನವನ್ನು ಹೊರತಂದಿತ್ತು. ಆದರೆ ಇದು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರಲಿಲ್ಲ.

ಎಚ್ ಟಿಸಿ ಕ್ರೋಮ್ ಬುಕ್ ಕಮಾಲ್ ಯಾವ ರೀತಿ ಇರಲಿದೆ ಎಂದು ಕಾದು ನೋಡಬೇಕಿದೆ.

Please Wait while comments are loading...
Opinion Poll

Social Counting