ಹೊಸ ಆಕಾಶ್ ಟ್ಯಾಬ್ಲೆಟ್ , ಹಳೇ ರೇಟಿಗೆ ಕೊಡ್ತೀವಿ :ಸಿಬಲ್

Posted By: Varun
ಹೊಸ ಆಕಾಶ್ ಟ್ಯಾಬ್ಲೆಟ್ , ಹಳೇ ರೇಟಿಗೆ ಕೊಡ್ತೀವಿ :ಸಿಬಲ್

ಸಂಪೂರ್ಣ ದೇಶೀಯ ತಂತ್ರಜ್ಞಾನದ, ವಿಶ್ವದ ಅಗ್ಗದ ಟ್ಯಾಬ್ಲೆಟ್- ಆಕಾಶ್ -2 ಅನ್ನು ಶೀಘ್ರದಲ್ಲೇ ಹಳೆಯ ಟ್ಯಾಬ್ಲೆಟ್ ನ ಬೆಲೆಗೇ ತರಲಿದೆಯಂತೆ

ಆಕಾಶ್ ನ ಮೊದಲ ಆವೃತ್ತಿಯಲ್ಲಿ ಹಲವಾರು ತೊಂದರೆಗಳಿದ್ದು, ಗುಣಮಟ್ಟದಲ್ಲಿ ಈ ಬಾರಿ ರಾಜಿ ಮಾಡಿಕೊಳ್ಳದೆ ಉತ್ತಮಪಡಿಸಲು C-DAC ಮತ್ತು ಐಟಿಐ ಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸುತ್ತಿದ್ದು ಏನೇ ಅಡಚಣೆ ಇದ್ದರೂ ಏಪ್ರಿಲ್ ವೇಳೆಗೆ ಟ್ಯಾಬ್ಲೆಟ್ ಬಿಡುಗಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ ಮಾನ್ಯ ಕಪಿಲ್ ಸಿಬಲ್, ಮಕ್ಕಳ ಶಿಕ್ಷಣಕ್ಕೆ ಉಪಯುಕ್ತವಾದ ಯಾವುದೇ ಕೆಲಸಕ್ಕೂ ತಮ್ಮ ಸಚಿವಾಲಯ ಸಿದ್ದವಿದೆ ಎಂದು ಸ್ಪಷ್ಟ ಪಡಿಸಿದರು.

ಅಂದಾಜು 2500 ರೂಪಾಯಿಗೆ ಆಕಾಶ್ -2 ಸಿಗಲಿದೆಯೇ ಎಂದು ಕಾದು ನೋಡಬೇಕು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot