1,500 ರೂ.ಬೆಲೆಯಲ್ಲಿ ನ.11ಕ್ಕೆ ಆಕಾಶ್‌ 2 ಟ್ಯಾಬ್ಲೆಟ್‌ ಲಭ್ಯ

Posted By: Staff

ಬಹು ನಿರೀಕ್ಷೆಯ ಆಕಾಶ್‌ 2 ಟ್ಯಾಬ್ಲೆಟ್‌ ನವೆಂಬರ್‌ 1ಕ್ಕೆ ಭಾರತೀಯ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಭಾರತೀಯ ದೂರ ಸಂಪರ್ಕ ಸಚಿವರಾದ ಕಪಿಲ್‌ ಸಿಬಲ್‌ ಈ ಉರಿತು ಮಾಹಿತಿ ನೀಡಿರುವುದಾಗಿ ವರದಿಗಳು ತಿಳಿಸಿವೆ. ಅಂದಹಾಗೆ ಆಕಾಶ್‌ ಟ್ಯಾಬ್ಲೆಟ್‌ ತಯಾರಿಸಿದ ಬ್ರಿಟನ್‌ ಮೂಲದ ಡೇಟಾವಿಂಡ್‌ ಸಂಸ್ಥೆಯೆ ನೂತನ ಆಕಾಶ 2 ಟ್ಯಾಬ್ಲೆಟ್‌ ಅನ್ನು ಸಿದ್ಧ ಪಡಿಸಿದೆ.

ನೂತನ ವರದಿಗಳ ಪ್ರಕಾರ ಆಕಾಶ್‌ 2 ಟ್ಯಾಬ್ಲೆಟ್‌ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ ಆಪರೇಟಿಂಗ್‌ ಸಿಸ್ಟಂ, 1 GHz ಪ್ರೊಸೆಸರ್‌, ಟಚ್‌ ಸ್ಕ್ರೀನ್‌ ಹಾಗೂ ಉತ್ತಮ ಬ್ಯಾಟರಿ ಹೊಂದಿದ್ದು 4 ಗಂಟೆಗಳ ಬ್ಯಾಕಪ್‌ ನೀಡುತ್ತದೆ. ಅಂದ ಹಾಗೆ ಬ್ಯಾಟರಿ ಕ್ಷಮತೆಯ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಆಕಾಶ್‌ 2 ಟ್ಯಾಬ್ಲೆಟ್‌ ಆಕಾಶ್ ಟ್ಯಾಬ್ಲೆಟ್‌ಗಿಂತಲೂ ಕಡಿಮೆ ಬೆಲೆಯಲ್ಲಿ ಅಂದರೆ 1500 ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಭಾರತೀಯ ಮೂಲದ ತಯಾರಕರೊಂದಿಗೆ ಡೇಟಾ ವಿಂಡ್‌ ಸಂಸ್ಥೆಯು ಕೈಜೋಡಿಸಿ ಈ ಟ್ಯಾಬ್ಲೆಟ್‌ ಸಿದ್ಧಪಡಿಸಿದರಿಂದ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡಲು ಸಾಧ್ಯವಾಗಿದೆ ಎಂದು ಕಪಿಲ್‌ ಸಿಬಲ್‌ ತಿಳಿಸಿದ್ದಾರೆ ಹಾಗೂ ಹತ್ತು ಲಕ್ಷ ಟ್ಯಾಬ್ಲೆಟ್‌ಗಳನ್ನು ತಯಾರಿಸುವ ಯೋಜನೆ ಹಮ್ಮಿಕೊಂಡಿದೆ ಎಂದು ಸಿಬಲ್‌ ತಿಳಿಸಿದ್ದಾರೆ.

ಆಕಾಶ 2 ಹಲವಾರು ಕಾರಣಗಳಿಂದ ಸಾಕಷ್ಟು ಸುದ್ಧಿಯಲ್ಲಿದೆ. ಲೆನೊವೊ ಸಂಸ್ಥೆಯು ಇಷ್ಟೋಂದು ಕಡಿಮೆ ಬೆಲೆಯಲ್ಲಿ ಟ್ಯಾಬ್ಲೆಟ್‌ ತಯಾರಿಸುವುದು ಸಾಧ್ಯವೇ ಇಲ್ಲಾ ಎಂದು ಹೇಳಿತ್ತು. ಇದರಿಂದಾಗಿ ಆಕಾಶ್‌ 2 ಕುರಿತಾಗಿ ಸಾಕಷ್ಟು ನಿರೀಕ್ಷೆಗಳು ಮೂಡಿದೆ.

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot