ಚಳಿಗಾಲಕ್ಕೆ ಸಿಗದ ಸರ್ಕಾರೀ ಟ್ಯಾಬ್ಲೆಟ್

Posted By: Staff
ಚಳಿಗಾಲಕ್ಕೆ ಸಿಗದ ಸರ್ಕಾರೀ ಟ್ಯಾಬ್ಲೆಟ್

 

ಸ್ಕೂಲ್ ಹಾಗು ಕಾಲೇಜ್, ವಿದ್ಯಾರ್ಥಿಗಳಿಗೆoದೇ ಕೇಂದ್ರ ಸರ್ಕಾರ ಆಕಾಶ್-1 ಹೆಸರಿನ ಟ್ಯಾಬ್ಲೆಟ್ ಬಿಡುಗಡೆ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ನಮ್ಮನೆಯಲ್ಲೂ ಇರಲಿ ಬಿಡಿ ಒಂದು ಅಂತ ಜನ ಮುಗಿಬಿದ್ದು ಆನ್ಲೈನ್ ನಲ್ಲೆ ಬುಕ್ ಮಾಡಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾದಮೇಲೆ ಅದರ ನಿರೀಕ್ಷೆಗಳೂ ಹೆಚ್ಚಿದ್ದವು.

ಆದರೆ ಗುಣಮಟ್ಟ ಚೆನ್ನಾಗಿಲ್ಲವೆಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಆಕಾಶ್ ನ ಉತ್ಪಾದಕ ಡಾಟಾವಿಂಡ್ ಹಾಗು ಸರ್ಕಾರ, ಹೊಸ ಮಾದರಿಯ ಆಕಾಶ್-2 ಅನ್ನು ಬರುವ ಫೆಬ್ರವರಿ ವೇಳೆಗೆ ಬಿಡುಗಡೆ ಮಾಡಲು ಯೋಚಿಸಿದ್ದವು. ಏನಾಯಿತೋ ಏನೋ ಈ ಬಾರಿ "ಸಂತೆ ಹೊತ್ತಿಗೆ ಮೂರು ಮೊಳ" ಮಾಡಿ ಮುಖ ಭಂಗ ಅನುಭವಿಸುವುದು ಬೇಡ ಎಂದುಕೊಂಡ ಮಾನವ ಸಂಪನ್ಮೂಲ ಮಂತ್ರಿಗಳಾದ ಕಪಿಲ್ ಸಿಬಾಲ್ ಸಾಹೇಬರು ಟ್ಯಾಬ್ಲೆಟ್ ಬಿಡುಗಡೆಯನ್ನ ಏಪ್ರಿಲ್ ಗೆ ಮುಂದೂಡಿದ್ದಾರೆ.

ಎಚ್. ಆರ್. ಡಿ ಯ ಅಂದಾಜಿನಂತೆ ಭವಿಷ್ಯದಲ್ಲಿ 22 ಕೋಟಿ ಟ್ಯಾಬ್ಲೆಟ್ ಗಳಿಗೆ ಬೇಡಿಕೆ ಇದೆಯಂತೆ. ಏಪ್ರಿಲ್ ವರೆಗೂ ಕಾದು, ಫೂಲ್ ಆಗುವ ಮುನ್ನ ಆಕಾಶ್ -2 ನ ಫೀಚರ್ಗಳು ತಿಳಿದುಕೊಂಡುಬಿಡಿ.

  • ಕಾರ್ಟೆಕ್ಸ್ A8 700 ಮೆಗಾ ಹೆರ್ಟ್ಜ್ ಪ್ರೋಸೆಸರ್

  • 256 ಎಂ. ಬಿ ರಾಮ್

  • 3- 4 ಗಂಟೆಗಳ ಬ್ಯಾಕ್ ಅಪ್ ಇರುವ ಬ್ಯಾಟರಿ (ಆಕಾಶ್-1 ಬ್ಯಾಟರಿಯ ದುಪಟ್ಟು)

  • 2 - 32 ಜಿ. ಬಿ ಸ್ಟೋರೇಜ್

  • 7 ಇಂಚ್ ಟಿ. ಎಫ್. ಟಿ ಪರದೆ

  • ಕ್ಯಾಮೆರಾ

  • ಎಂ. ಎಸ್ ಆಫೀಸ್ , ಪಿ . ಡಿ. ಏಫ್ ರೀಡರ್

  • ಇಮೇಜ್ ಹಾಗು ವೀಡಿಯೊ ನೋಡುವ ಸೌಲಭ್ಯ

  • ವೆಬ್ ಬ್ರೌಸಿಂಗ್.

 

 

 

also read in English

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot