Subscribe to Gizbot

ಆಕಾಶ್ ಗೆ ಸ್ಪರ್ಧೆಯೊಡ್ಡಲಿದೆ ಬಿ.ಎಸ್.ಎನ್.ಎಲ್ ಟ್ಯಾಬ್ಲೆಟ್

Posted By: Varun
ಆಕಾಶ್ ಗೆ ಸ್ಪರ್ಧೆಯೊಡ್ಡಲಿದೆ ಬಿ.ಎಸ್.ಎನ್.ಎಲ್ ಟ್ಯಾಬ್ಲೆಟ್

ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಬಿ.ಎಸ್.ಎನ್.ಎಲ್ ಈಗ ಟ್ಯಾಬ್ಲೆಟ್ ಮಾರುಕಟ್ಟೆಗೆ ಬರಲಿದೆ ಎಂದು ಶುಕ್ರವಾರ ಘೋಷಿಸಿದೆ. ನೋಯ್ಡಾ ಮೂಲದ ಪಾನ್ಟೆಲ್ ಕಂಪನಿಯ ಸಹಭಾಗಿತ್ವದಲ್ಲಿ ಮೂರು ಶ್ರೇಣಿಯ ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಲಿದೆಯಂತೆ.

ಬಿಡುಗಡೆಯಾಗುವ 3 ಟ್ಯಾಬ್ಲೆಟ್ ಗಳಲ್ಲೇ ಅಗ್ಗದ ಮಾಡಲ್ ಕೇವಲ ರೂ 3,250 ಗೆ ಬರಲಿದ್ದು ಆಕಾಶ್ ಟ್ಯಾಬ್ಲೆಟ್ ಗೆ ತೀವ್ರ ಸ್ಪರ್ಧೆ ಒಡ್ಡಲಿದೆ. 7-ಇಂಚಿನ ಟ್ಯಾಬ್ಲೆಟ್, ಬಿಎಸ್ಎನ್ಎಲ್ ಪೆಂಟಾ ಟಿ ಪ್ಯಾಡ್ 701R 1ghz ಪ್ರೊಸೆಸರ್ ಹೊಂದಿದ್ದು, 256MB ರಾಮ್, ಗೀಚು ನಿರೋಧಕ ಸ್ಕ್ರೀನ್ ಇದ್ದು, ಆಂಡ್ರಾಯ್ಡ್ ಓ.ಎಸ್ ನಲ್ಲಿ ಕೆಲಸ ಮಾಡುತ್ತದೆ.ಈ ಟ್ಯಾಬ್ಲೆಟ್ಗಳನ್ನು ಬಿಎಸ್ಎನ್ಎಲ್, 3G ಪ್ಲಾನ್ ಜೊತೆ ಮಾರಲಿದೆಯಂತೆ. .

ಉಳಿದ ಎರಡು ಟ್ಯಾಬ್ಲೆಟ್ 10,999 ಮತ್ತು 13,500 ಗೆ ಬರಲಿದ್ದು ಪಾನ್ಟೆಲ್ ಕಂಪನಿಯ ವೆಬ್ಸೈಟ್ ನಲ್ಲಿ ಎಲ್ಲಾ ಮೂರು ಮಾಡೆಲ್ಗಳ ಬೂಕಿಂಗ್ ಆರಂಭವಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot