ಆಕಾಶ್ ಉತ್ಪಾದಕನಿಂದ 2 ಯುಬಿಸ್ಲೇಟ್ ಟ್ಯಾಬ್ಲೆಟ್

Posted By: Varun
ಆಕಾಶ್ ಉತ್ಪಾದಕನಿಂದ 2 ಯುಬಿಸ್ಲೇಟ್ ಟ್ಯಾಬ್ಲೆಟ್

ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋದು ಹಳೆ ಗಾದೆ. "ಸರ್ಕಾರದ ಸಹವಾಸ ಬಿಟ್ಟ ಮೇಲೆ ಬುದ್ಧಿ ಬಂತು" ಅನ್ನೋ ಹೊಸ ಗಾದೆ ಮಾಡಬಹುದೇನೋ, ಆಕಾಶ್ 2 ಟ್ಯಾಬ್ಲೆಟ್ ಬಗ್ಗೆ ವಿಚಾರ ಮಾಡಿದಾಗ.

ಆಕಾಶ್ 2 ಟ್ಯಾಬ್ಲೆಟ್ ಸಪ್ಲೈ ಮಾಡಬೇಕಾಗಿದ್ದ ಡೇಟಾವಿಂಡ್ಸರಕಾರದ ಜೊತೆ ಸಂಬಂಧ ಮುರಿದುಕೊಂಡ ಮೇಲೆಈಗ ತನ್ನದೇ ಆದ ಹೊಸ 2 ಹೊಸ ಮಿನಿ ಬಜೆಟ್ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ತಂದಿದೆ.

ಯುಬಿಸ್ಲೇಟ್ 7C ಹಾಗು 7+ ಹೆಸರಿನ ಎರಡು ಟ್ಯಾಬ್ಲೆಟ್ ಗಳನ್ನು ಕ್ರಮವಾಗಿ3,499 ಹಾಗು 4,299 ರೂಪಾಯಿಗೆ ಹೊರತಂದಿದೆ.

ಎರಡೂ ಹೊಸ ಮಾದರಿಯ ಈ ಟ್ಯಾಬ್ಲೆಟ್ ಗಳ ಸ್ಪೆಸಿಫಿಕೇಶನ್ ಗಳು ಬಹುತೇಕ ಒಂದೇ ಆಗಿದೆ. ಎರಡಕ್ಕೂ 7 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್, 800 MHz ARM ಕಾರ್ಟೆಕ್ಸ್ A8 ಪ್ರೋಸೆಸರ್, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ, ಮೈಕ್ರೋ USB ಸ್ಲಾಟ್, ವೈ-ಫೈ ಹಾಗು GSM ಸಪೋರ್ಟ್ ಹಾಗು 3 ಗಂಟೆ ಬ್ಯಾಕಪ್ ಇರುವ 3200 mAh ಬ್ಯಾಟರಿ ಇರಲಿದೆ. 7C ಮಾಡಲ್ ಗೆ 4GB ಆಂತರಿಕ ಮೆಮೊರಿ ಇದ್ದರೆ, 7+ ಮಾಡಲ್ ಗೆ 2GB ಮೆಮೊರಿ ಇರಲಿದೆ.

ಗ್ರಾಹಕರು ಯುಬಿಸ್ಲೇಟ್ 7+ ಅನ್ನು ಡೇಟಾವಿಂಡ್ ವೆಬ್ಸೈಟ್ ನಲ್ಲಿ ಬುಕ್ ಈಗಲೇ ಮಾಡಬಹುದಾಗಿದ್ದು, 7C ಮಾಡೆಲ್ ಮುಂದಿನ ತಿಂಗಳಿಂದ ಬೂಕಿಂಗ್ ಮಾಡಬಹುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot