ಹೊಸ ಏಸರ್ ಏಸ್ಪೈರ್ ಲ್ಯಾಪ್ ಟಾಪ್ ಬೇಕೆ?

ಎಂಟ್ರಿ ಲೆವೆಲ್ ಲ್ಯಾಪ್ ಟಾಪ್ Acer Aspire 5749 ಕೂಡ ಅತ್ಯುತ್ತಮವಾಗಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ, ಫೀಚರುಗಳಿಂದ, ಸಾಕಷ್ಟು ಸಂಗ್ರಹ ಸಾಮರ್ಥ್ಯ ಮತ್ತು ಬ್ಯಾಟರಿ ಬಾಳಿಕೆ ವಿಷಯದಲ್ಲಿ ಇಷ್ಟವಾಗುತ್ತದೆ.
ಹೊಸ ಏಸರ್ ಲ್ಯಾಪ್ ಟಾಪ್ ನಿರ್ಮಾಣ ಗುಣಮಟ್ಟ ಪ್ಲಾಸ್ಟಿಕ್ ಚಾಸೀಸ್ ನಿಂದ ಅತ್ಯುತ್ತಮವಾಗಿದೆ. ಇದು ಇಂಟೆಲ್ ಕೋರ್ ಐ3-2330ಎಂ ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿದೆ. ಜೊತೆಗೆ ಇದು 4ಜಿಬಿ RAM ಕೂಡ ಹೊಂದಿದೆ. ಇದು ಅತ್ಯುತ್ತಮ ಬ್ಯಾಟರಿ ಬಾಳಿಕೆ ಕೂಡ ಹೊಂದಿದೆ ಎಂದು ವರದಿಗಳು ಹೇಳಿವೆ. ಎಷ್ಟು ಗಂಟೆ ಬ್ಯಾಟರಿ ಬಾಳಿಕೆಯಿದೆ ಎನ್ನುವುದು ಸ್ಪಷ್ಟವಾಗಿಲ್ಲ.
ಎಚ್ ಡಿಎಂಐ ಪೋರ್ಟ್ ಮೂಲಕ ಎಕ್ಸ್ ಟರ್ನಲ್ ಸ್ಕ್ರೀನ್ ಸಂಪರ್ಕ ಕಲ್ಪಿಸಿ ಹೈಡೆಫಿನೇಷನ್ ವಿಡಿಯೋ ವೀಕ್ಷಿಸಬಹುದಾಗಿದೆ. ಈ ಲ್ಯಾಪ್ ಟಾಪ್ 720ಪಿ, 1080 ಪಿ ವಿಡಿಯೋಗಳಿಗೆ ಬೆಂಬಲ ನೀಡುತ್ತದೆ. ಇದರ ಕೀಬೋರ್ಡ್ ಕೂಡ ಆಕರ್ಷಕವಾಗಿದೆ.
ಈ ಲ್ಯಾಪ್ ಟಾಪ್ 16:9 ಟಚ್ ಪ್ಯಾಡ್ ಹೊಂದಿದೆ. ಎಕ್ಸ್ ಟರ್ನಲ್ ಯುಎಸ್ ಬಿ ಸ್ಪೀಕರ್ ಅಳವಡಿಸಿದರೆ ಅತ್ಯುತ್ತಮ ಸೌಂಡ್ ಕೇಳಬಹುದು. ಇದು 15.6 ಇಂಚಿನ ಸ್ಕ್ರೀನ್ ಹೊಂದಿದೆ. ಇದರ ಸ್ಕ್ರೀನ್ 1366x768 ಪಿಕ್ಸೆಲ್ ರೆಸಲ್ಯೂಷನ್ ಇದೆ.
ಏಸರ್ ಏಸ್ಪೈರ್ 5749 ಲ್ಯಾಪ್ ಟಾಪ್ ಇಂಟೆಲ್ ಮೀಗೊ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದರ ದರ ಸುಮಾರು 27 ಸಾವಿರ ರುಪಾಯಿಯಿಂದ 32 ಸಾವಿರ ರು.ವರೆಗೆ ಇರುವ ನಿರೀಕ್ಷೆಯಿದೆ.


Click it and Unblock the Notifications








