Subscribe to Gizbot

ಏಸರ್ ಏಸ್ಪೈರ್ ಕಂಪ್ಯೂಟರ್ ಹೀಗಿದೆ ನೋಡಿ

Posted By: Staff

ಏಸರ್ ಏಸ್ಪೈರ್ ಕಂಪ್ಯೂಟರ್ ಹೀಗಿದೆ ನೋಡಿ
ಏಸರ್ ಕಂಪನಿಯು ಇತ್ತೀಚೆಗೆ ಹೊರತಂದ ಏಸರ್ ಏಸ್ಪೈರ್ 5755ಜಿ ಆಕರ್ಷಕ ಲ್ಯಾಪ್ ಟಾಪ್. ನೋಡಲು ಮಾತ್ರ ಆಕರ್ಷಕವಾಗಿರದೇ ಹೆಚ್ಚು ಕಾರ್ಯಕ್ಷಮತೆಯನ್ನೂ ಇದರಲ್ಲಿ ನಿರೀಕ್ಷಿಸಬಹುದು. ಯಾಕೆಂದರೆ Acer Aspire 5755G ಲ್ಯಾಪ್ ಟಾಪ್ ಕ್ವಾಡ್ ಇಂಟೆಲ್ ಕೋರ್ ಐ7-2630 ಕ್ಯೂಎಂ ಪ್ರೊಸೆಸರ್ ಹೊಂದಿದೆ.

ಜೊತೆಗೆ ಇದು 8ಜಿಬಿ RAM ಹೊಂದಿದೆ. ಇದರಿಂದ ವೇಗವಾಗಿ ಅಪ್ಲಿಕೇಷನ್ ಗಳನ್ನು ಆಕ್ಸೆಸ್ ಮಾಡಬಹುದಾಗಿದೆ. ಇದರ ಗಾತ್ರದ ಕಾರಣದಿಂದ ಹೆಚ್ಚು ಕಂಫರ್ಟ್ ಲ್ಯಾಪ್ ಟಾಪ್ ಅಲ್ಲವೆಂದರೆ ಏಸರ್ ಗೆ ಬೇಸರವಾದೀತು! ಇದರ 15.6 ಿಂಚಿನ ಸ್ಕ್ರೀನ್ 1366 x 768 ಪಿಕ್ಸೆಲ್ ರೆಸಲ್ಯೂಷನ್ ನೀಡುತ್ತದೆ.

ಏಸರ್ ಏಸ್ಪೈರ್ 5755 ಜಿ ಕೋರ್ ಐ5 ಮಾಡೆಲ್ ದರ ಸುಮಾರು 44 ಸಾವಿರ ರು. ಮತ್ತು ಐ3 ಮಾಡೆಲ್ ದರ ಸುಮಾರು 33 ಸಾವಿರ ರು. ಆಗಿದೆ. ಒಟ್ಟಾರೆ ಈ ಲ್ಯಾಪ್ ಟಾಪ್ ನಲ್ಲಿರುವ ಹಲವು ಫೀಚರುಗಳು ಇಷ್ಟವಾಗುತ್ತವೆ. ಇದರಲ್ಲಿರುವ ಪ್ರಮುಖ ವಿಶೇಷತೆಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

ವಿಶೇಷತೆಗಳು
* ಕ್ವಾಡ್ ಇಂಟೆಲ್ ಕೋರ್ ಐ7-2630 ಕ್ಯೂಎಂ ಪ್ರೊಸೆಸರ್
* 8ಜಿಬಿ RAM
* ಎಚ್ ಡಿಎಂಐ ಪೋರ್ಟ್
* ಹೈಡೆಫಿನೆಷನ್ ಎಚ್ ಡಿ ಟಿವಿ
* ಸರಳ ಮತ್ತು ಅತ್ತುತ್ತಮ ದರ್ಜೆಯ ಕೀಬೋರ್ಡ್, ಕೀಗಳ ಉರುಂಟು ಆಕಾರ ಇಷ್ಟವಾಗುತ್ತದೆ.
* ಬ್ಯಾಟರಿ ಬ್ಯಾಕಪ್ 4.5 ಗಂಟೆ
* ಕ್ಯೂಐ ದರ: 44 ಸಾವಿರ ರು. ಮತ್ತು ಕ್ಯೂ3 ದರ 33 ಸಾವಿರ ರು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot