ಏಸರ್ ತಂದಿದೆ ಶಕ್ತಿಯುತ ಲ್ಯಾಪ್ಟಾಪ್, 28 ಸಾವಿರಕ್ಕೆ

By Varun
|

ಏಸರ್ ತಂದಿದೆ ಶಕ್ತಿಯುತ ಲ್ಯಾಪ್ಟಾಪ್, 28 ಸಾವಿರಕ್ಕೆ
ಲ್ಯಾಪ್ಟಾಪ್ ಉತ್ಪಾದನೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಏಸರ್ ಕಂಪನಿಯು ಇತ್ತೀಚೆಗೆ E1 571 ಹೆಸರಿನ ಶಕ್ತಿಯುತವಾದ ನೋಟ್ ಬುಕ್ ಒಂದನ್ನು ಬಿಡುಗಡೆ ಮಾಡಿದ್ದು, ಕ್ರಿಸ್ಟಲ್ ಬ್ಲ್ಯಾಕ್ ಫಿನಿಶ್ ನೊಂದಿಗೆ ಬಂದಿದ್ದು, ಮನಮೋಹಕ ಡಿಸೈನ್ ಹಾಗು ಸಾಕಷ್ಟು ಫೀಚರುಗಳನ್ನು ಹೊಂದಿದೆ.

ಇಂಟೆಲ್ ಕೊರ್ರ್ i3 2350M ಪ್ರೋಸೆಸರ್ ಹೊಂದಿರುವ ಈ ಏಸರ್ ನೋಟ್ ಬುಕ್ ವಿಂಡೋಸ್ 7 ತಂತ್ರಾಂಶ ಹೊಂದಿದೆ. ಇದರ ವಿಸ್ತೃತಫೀಚರುಗಳು ಇಲ್ಲಿವೆ:

  • 15.6 ಇಂಚ್ ಡಿಸ್ಪ್ಲೇ,1366 x 768 ಪಿಕ್ಸೆಲ್ ರೆಸಲ್ಯೂಶನ್ ನೊಂದಿಗೆ.

  • ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್

  • ಇಂಟೆಲ್ ಕೋರ್ i3- 2350M ಪ್ರೋಸೆಸರ್

  • 2.3GHz ಕ್ಲಾಕ್ ಸ್ಪೀಡ್ ( ಅತ್ಯತ್ತಮ ಮಲ್ಟಿಮೀಡಿಯಾ ನಿರ್ವಹಣೆಗೆ)

  • 2GB ರಾಮ್

  • 500 GB ಹಾರ್ಡ್ ಡ್ರೈವ್

  • HD ವೆಬ್ ಕ್ಯಾಮ್

  • DVD ಸೂಪರ್ ಮಲ್ಟಿ ಆಪ್ಟಿಕಲ್ ಡ್ರೈವ್

  • ಮಲ್ಟಿ ಕಾರ್ಡ್ ರೀಡರ್

  • ಸ್ಟೀರಿಯೋ ಆಡಿಯೋ ಸ್ಪೀಕರ್

  • ಸ್ಟಾಂಡರ್ಡ್ ಕೀಬೋರ್ಡ್

  • USB v2.0, USB v3.0, HDMI ಪೋರ್ಟ್,Wi-Fi 802.11b/g/ನ,ಬ್ಲೂಟೂತ್

  • 10/100 Ethernet ಲಂ

  • 6 Li-Ion ಬ್ಯಾಟರಿ

  • 2.6 ಕೆಜಿ ತೂಕ.

4- 5 ಗಂಟೆಗಳ ಬ್ಯಾಟರಿ ಲೈಫ್ ಹೊಂದಿರುವ ಏಸರ್ E1 571 ನೋಟ್ ಬುಕ್, ಆಂತರಿಕ ಸ್ಪೀಕರ್, ನಂಬರ್ ಕೀಪ್ಯಾಡ್ ಹೊಂದಿದ್ದು ನೀವು 30 ಸಾವಿರ ರೂಪಾಯಿ ಒಳಗಿನ ಬಜೆಟ್ ಗೆ ಉತ್ತಮ ಲ್ಯಾಪ್ಟಾಪ್ ಅನ್ನು ಹುಡುಕುತ್ತಿದ್ದರೆ, ಏಸರ್ ನೋಟ್ ಬುಕ್ ಅನ್ನು ಖರೀದಿ ಮಾಡಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X