Home
ಕಂಪ್ಯೂಟರ್‌‌

ಏನ್ಸಾರ್ ಏಸರ್ ಒನ್ ನೆಟ್ ಬುಕ್ ಹೇಗಿದೆ?

By Super

ಏನ್ಸಾರ್ ಏಸರ್ ಒನ್ ನೆಟ್ ಬುಕ್ ಹೇಗಿದೆ?
ಟ್ಯಾಬ್ಲೆಟ್ ಕಂಪ್ಯೂಟರ್ ಭರಾಟೆಯಲ್ಲಿ ನೆಟ್ ಬುಕ್ ಕಂಪ್ಯೂಟರ್ ಮಾರಾಟ ಕಡಿಮೆಯಾಗುತ್ತಿದೆ. ಆದರೆ ಹೀಗಲೂ ಹೆಚ್ಚಿನ ಜನರು ನೆಟ್ ಬುಕ್ ಕಂಪ್ಯೂಟರ್ ಖರೀದಿಗೆ ಒಲವು ತೋರಿಸುತ್ತಿದ್ದಾರೆ.

ಏಸರ್ ಒನ್ ಸರಣಿಗೆ Acer Aspire one 722 ನೆಟ್ ಬುಕ್ ಹೊಸ ಅತಿಥಿ. ಇದು ಹೆಚ್ಚು ದುಬಾರಿಯಲ್ಲದ, ದಕ್ಷತೆಯ ಪ್ರೊಸೆಸರ್ ಹೊಂದಿರುವ ಟ್ಯಾಬ್ಲೆಟ್. ಇದರಲ್ಲಿ ಹತ್ತು ಹಲವು ಇಷ್ಟಪಡುವ ಫೀಚರುಗಳಿವೆ. ನಿಮಗೆ ಇಷ್ಟವಾದೀತು.

ಫೀಚರುಗಳು

* 11.6 ಇಂಚಿನ ಸ್ಕ್ರೀನ್

* ಎಎಂಡಿ ಸಿ-50 ಎಪಿಯು

* 2ಜಿ RAM

* 320 ಜಿಬಿ ಹಾರ್ಡ್ ಡಿಸ್ಕ್

* ಯುಎಸ್ ಬಿ 2.0 ಪೋರ್ಟ್ಸ್

* ತೂಕ: 1.35 ಕೆಜಿ.

* ಪರಿಸರ ಸ್ನೇಹಿ ಪ್ಲಾಟ್ ಫಾರ್ಮ್

ಈ ನೆಟ್ ಬುಕ್ ವಿನ್ಯಾಸ ಆಕರ್ಷಕ. ಇದರ ಕಪ್ಪು ಬಣ್ಣದ ವಿನ್ಯಾಸ ಕಣ್ಮನ ಸೆಳೆಯುತ್ತದೆ. ಈ ನೆಟ್ ಬುಕ್ ಸಣ್ಣದಾಗಿದ್ದು, ಅಚ್ಚುಕಟ್ಟಾಗಿದೆ. ಹೀಗಾಗಿ ಇದನ್ನು ಒಂದೆಡೆಯಿಂದ ಇನ್ನೊಂದಡೆ ಸಾಗಿಸುವುದು ಸುಲಭ. ಕೀಬೋರ್ಡ್ ವಿನ್ಯಾಸ ಆಕರ್ಷಕವಾಗಿದ್ದು, ಟೈಪಿಂಗ್ ಸುಲಭವಾಗಿದೆ.

ಏಸರ್ ಏಸ್ಪೈರ್ ಒನ್ 722 ನೆಟ್ ಬುಕ್ ಸ್ಪೀಕರ್ ಕೆಳಭಾಗದಲ್ಲಿದೆ. ಈ ನೆಟ್ ಬುಕ್ 11.6 ಇಂಚಿನ ಸ್ಕ್ರೀನ್ ಹೊಂದಿದ್ದು ಎಲ್ ಇಡಿ ಬ್ಯಾಕ್ ಲಿಟ್ ಮಾದರಿಯದ್ದಾಗಿದೆ. ಇದರ ಸ್ಕ್ರೀನ್ ರೆಸಲ್ಯೂಷನ್ ಅತ್ಯುತ್ತಮವಾಗಿದೆ. ಇದು ಎಎಂಡಿ ಸಿ50 ಪ್ರೊಸೆಸರ್ ಹೊಂದಿದ್ದು ಒಂದು ಗಿಗಾಹರ್ಟ್ಸ್ ಸ್ಪೀಡಿನಲ್ಲಿ ಆಕ್ಸೆಸ್ ಮಾಡಬಹುದಾಗಿದೆ.

ಹಾರ್ಡ್ ಡಿಸ್ಕ್ ಸಂಗ್ರಹ ಸಾಮರ್ಥ್ಯ 320 ಜಿಬಿ ಇದೆ. ಇದರಲ್ಲಿ ಎಂಎಸ್ ಆಫೀಸ್ ಮತ್ತು ಮೆಕಾಫಿ ಆಂಟಿ ವೈರಸ್ ಇತ್ಯಾದಿ ಸಾಮನ್ಯ ವೈರಸ್ ಗಳು ಇವೆ. Acer Aspire one 722 Netbook ದರ ಸುಮಾರು 20 ಸಾವಿರ ರುಪಾಯಿ ಇದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+