ಏಸರ್ ಏಸ್ಪೈರ್ ಒನ್ ಹ್ಯಾಪಿ 2 ನೋಟ್ ಬುಕ್ ವಿಮರ್ಶೆ

By Super
|
ಏಸರ್ ಏಸ್ಪೈರ್ ಒನ್ ಹ್ಯಾಪಿ 2 ನೋಟ್ ಬುಕ್ ವಿಮರ್ಶೆ
Acer Aspire One Happy 2 ಇದು ಏಸರ್ ಕಂಪನಿಯ ಜನಪ್ರಿಯ ನೋಟ್ ಬುಕ್. ಇದರ ಬಣ್ಣ, ವಿನ್ಯಾಸ ಮೊದಲ ನೋಟಕ್ಕೆ ಇಷ್ಟವಾಗುತ್ತದೆ. ಕಾಫಿ ಅಥವಾ ಕಪ್ಪು ಬಣ್ಣದ ನೋಟ್ ಬುಕ್ ಕಂಪ್ಯೂಟರ್ ಪುರುಷರಿಗೆ ಹೆಚ್ಚು ಇಷ್ಟ. ಈ ಪುಟ್ಟ ನೋಟ್ ಬುಕ್ ಕಂಪ್ಯೂಟರ್ ಹೇಗಿದೆ ಅಂತ ನೋಡೋಣ.

ಇದು ಹಲವು ಬಣ್ಣಗಳಲ್ಲಿ ದೊರಕುತ್ತದೆ. ಇದರ ವಿನ್ಯಾಸದಂತೆ ಕಾರ್ಯಕ್ಷಮತೆಯೂ ಸೂಪರ್. ಇದರ ತೂಕ 2.5 ಪೌಂಡ್. ಅಂದ್ರೆ ಸುಮಾರು 1.3 ಕೆ.ಜಿ. ಇದರ ದರವೂ ಇಷ್ಟವಾಗುತ್ತದೆ. ಏಸರ್ ಏಸ್ಪೈರ್ ಒನ್ ಹ್ಯಾಪಿ 2 ನೋಟ್ ಬುಕ್ ದರ 16 ಸಾವಿರ ರು.ನಿಂದ ಆರಂಭವಾಗುತ್ತದೆ.

ಇದು ಒಂದು ಜಿಬಿ RAM, jotege ಡಿಡಿಆರ್ 3 RAM ಇದೆ. ಇದರಿಂದ ವೇಗವಾಗಿ ಕಂಪ್ಯೂಟರ್ ಆಕ್ಸೆಸ್ ಮಾಡಲು ಸಹಕಾರಿಯಾಗುತ್ತದೆ. ಇದು ಅತ್ಯುತ್ತಮ ಪವರ್ ಬ್ಯಾಕಪ್ ಕೂಡ ನೀಡುತ್ತದೆ. ಇದರ ಸ್ಟಾಂಡ್ ಬೈ ಬ್ಯಾಟರಿ ಬಾಳಿಕೆ ಸುಮಾರು 6.30 ಗಂಟೆ.

ಇದರ ಹೆಸರಿನಲ್ಲಿ ಹ್ಯಾಪಿ 2 ಅಂತಿದೆ. ಇದರಲ್ಲಿ ಎರಡು ಅಪರೇಟಿಂಗ್ ಸಿಸ್ಟಮ್ ಇರೋದ್ರಿಂದ ಡಬಲ್ ಧಮಕಾ. ಹೀಗಾಗಿ ಎರಡು ಸಂತೋಷ ಅಂತ ಇದನ್ನು ಕರೀಬಹುದು. ವಿಂಡೋಸ್ 7 ಮತ್ತು ಆಂಡ್ರಾಯ್ಡ್ 2.3 ಅಪರೇಟಿಂಗ್ ಸಿಸ್ಟಮ್ ಇರುವುದು ಒಂದು ರೀತಿಯ ಸರ್ ಪ್ರೈಸ್.

ಆದರೆ ಒಂದು ವಿಷಯ ಗಮನಿಸಬೇಕು. ಈ ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಇರೋದು ಸ್ಮಾರ್ಟ್ ಫೋನ್ ಗೆ. ಬೃಹತ್ ಸ್ಕ್ರೀನ್ ಗೆ ಸೂಕ್ತವಲ್ಲ. ಆದರೂ ಇದರಲ್ಲಿ ಎರಡು ಅಪರೇಟಿಂಗ್ ಸಿಸ್ಟಮ್ ಇರೋದ್ರಿಂದ ಈ ಕುರಿತು ಚಿಂತೆ ಮಾಡಬೇಕೆಂದಿಲ್ಲ.

ಏಸರ್ ಹ್ಯಾಪಿ 2 ನೋಟ್ ಬುಕ್ ನಲ್ಲಿ ಪರಿಷ್ಕೃತ ಬ್ಲೂಟೂಥ್ ವರ್ಷನ್ 3.0 ಇದೆ. ಇದರಲ್ಲಿ ನಿಸ್ತಂತು ಅಥವಾ ವೈಫೈ ಸೌಲಭ್ಯವೂ ಇದೆ. ಇದರ ದರ ಕೂಡ ಕೈಗೆಟುಕುವಂತಿದೆ. ಏಸರ್ ಏಸ್ಪೈರ್ ಒನ್ ಹ್ಯಾಪಿ 2 ನೋಟ್ ಬುಕ್ ಆರಂಭಿಕ ದರ 16 ಸಾವಿರ ರುಪಾಯಿ.

ಟಿಪ್ಪಣಿಗಳು
* ಇಂಟೆಲ್ ಅಟಾಮ್ ಡ್ಯೂಯಲ್ ಕೋರ್ ಪ್ರೊಸೆಸರ್ ಎನ್570
* 10.1 ಇಂಚಿನ WSVGA ಎಲ್ ಇಡಿ ಬ್ಯಾಕ್ ಲಿಟ್ ಡಿಸ್ ಪ್ಲೇ
* ಇಂಟೆಲ್ ಗ್ರಾಫಿಕ್ಸ್ ಮೀಡಿಯಾ ಆಕ್ಸಿಲರೇಟರ್ 3150
* 1 ಜಿಬಿ ಡಿಡಿಆರ್3 ಮೆಮೊರಿ
* 250 ಜಿಬಿ ಹಾರ್ಡ್ ಡ್ರೈವ್
* ಮಲ್ಟಿ ಇನ್ 1 ಡಿಜಿಟಲ್ ಮೀಡಿಯಾ ಕಾರ್ಡ್ ರೀಡರ್
* 802.11b/g/n ನಿಸ್ತಂತು(ವೈಫೈ)
* ಮೂರು ಸೆಲ್ ಬ್ಯಾಟರಿ ಪ್ಯಾಕ್ ಅಥವಾ ಆರು ಸೆಲ್ ಬ್ಯಾಟರಿ ಪ್ಯಾಕ್

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X