ಏಸರ್ ಮತ್ತು ಸೋನಿ ಟ್ಯಾಬ್ಲೆಟ್: ಸಂಪೂರ್ಣ ವಿಮರ್ಶೆ

Posted By: Staff
ಏಸರ್ ಮತ್ತು ಸೋನಿ ಟ್ಯಾಬ್ಲೆಟ್: ಸಂಪೂರ್ಣ ವಿಮರ್ಶೆ
ಏಸರ್ ಮತ್ತು ಸೋನಿ ಎರಡು ಕಂಪನಿಗಳೂ ಜಾಗತಿಕ ಮಾರುಕಟ್ಟೆಯಲ್ಲಿ ಜಗಜಟ್ಟಿಗಳು. ಈ ಕಂಪನಿಗಳು ಗ್ರಾಹಕ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಸದಾ ವಿನೂತನ ಉತ್ಪನ್ನಗಳನ್ನು ಹೊರತಂದು ಸುದ್ದಿ ಮಾಡುತ್ತವೆ. ಹೆಚ್ಚಿನವರಿಗೆ ಈ ಕಂಪನಿಗಳ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್ ಗಳು ಅಚ್ಚುಮೆಚ್ಚು.

ಟ್ಯಾಬ್ಲೆಟ್ ಕಂಪ್ಯೂಟರಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಏಸರ್ ಮತ್ತು ಸೋನಿ ಕಂಪನಿಗಳು ನೂತನ ಟ್ಯಾಬ್ಲೆಟ್ ಹೊರತಂದಿವೆ. ಅದರ ಹೆಸರು ಏಸರ್ ಐಕಾನಿಯಾ ಮತ್ತು ಸೋನಿ ಟ್ಯಾಬ್ಲೆಟ್ ಎಸ್. ಇವೆರಡು ಸಾಕಷ್ಟು ಫೀಚರುಗಳಿಂದ ಮತ್ತು ವಿಶೇಷತೆಗಳಿಂದ ಇಷ್ಟವಾಗುತ್ತದೆ.

* ಇದರಲ್ಲಿ Acer Iconia A500 ಟ್ಯಾಬ್ಲೆಟ್ ಆಂಡ್ರಾಯ್ಡ್ ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಸೋನಿ ಟ್ಯಾಬ್ಲೆಟ್ ಎಸ್ ಕೂಡ ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ.

* ಇವೆರಡು ಟ್ಯಾಬ್ಲೆಟ್ ಗಳು NVIDIA ಟೆಗ್ರಾ2 ಪ್ರೊಸೆಸರ್ ಹೊಂದಿವೆ. ಇದು ವೇಗದ ಆಕ್ಸೆಸ್ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ನೆರವಾಗಿದೆ.

* ಏಸರ್ ಐಕಾನಿಯಾ ಡಿಸ್ ಪ್ಲೇ ಗಾತ್ರ 10.1 ಇಂಚು. ಇದು ಮ್ಯಾಟ್ರಿಕ್ಸ್ ಟಿಎಫ್ ಟಿ ಕಲರ್ ಎಲ್ ಸಿಡಿ ಡಿಸ್ ಪ್ಲೇ ಹೊಂದಿದೆ. ಸೋನಿ ಟ್ಯಾಬ್ಲೆಟ್ ಎಸ್ 9.4 ಇಂಚಿನ ಡಿಸ್ ಪ್ಲೇ ಹೊಂದಿದೆ. ಇದರ ಡಿಸ್ ಪ್ಲೇ 1280 x 800 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ.

* ಎರಡು ಟ್ಯಾಬ್ಲೆಟ್ ಗಳು ವೈಫೈ, ಬ್ಲೂಟೂಥ್ ಮತ್ತು ಯುಎಸ್ ಬಿ ಇತ್ಯಾದಿ ಸ್ಟಾಂಡರ್ಡ್ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿವೆ. ಜೊತೆಗೆ ಅತ್ಯುತ್ತಮ ವಿಡಿಯೋ ವೀಕ್ಷಣೆಗೆ ನೆರವಾಗಲು ಎಚ್ ಡಿಎಂಐ ಪೋರ್ಟ್ ಬೆಂಬಲ ಕೂಡ ಇದರಲ್ಲಿವೆ.

* ಏಸರ್ ಟ್ಯಾಬ್ಲೆಟ್  3260 ಮೆಗಾವ್ಯಾಟ್ 2 ಸೆಲ್ ಲೀಥಿಯಂ ಪಾಲಿಮಾರ್ ಬ್ಯಾಟರಿ ಹೊಂದಿದೆ. ಸೋನಿ ಟ್ಯಾಬ್ಲೆಟ್ ಎಸ್ 5000 ಮೆಗಾವ್ಯಾಟ್ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಇವೆರಡರ ಬ್ಯಾಟರಿ ಬಾಳಿಕೆ ಸುಮಾರು 8 ಗಂಟೆ.

* ಏಸರ್ ಐಕಾನಿಯಾ ಎ500 ಟ್ಯಾಬ್ಲೆಟ್ ಇನ್ ಬುಲ್ಟ್ ವೆಬ್ ಕ್ಯಾಮ್ ಹೊಂದಿದೆ. ಇದರಿಂದ ಅತ್ಯುತ್ತಮ ವಿಡಿಯೋ ಚಾಟಿಂಗ್ ಅನುಭವ ಪಡೆಯಬಹುದಾಗಿದೆ. ಸೋನಿ ಟ್ಯಾಬ್ಲೆಟ್ ಎಸ್ ಮುಂಭಾಗದಲ್ಲಿ 0.3 ಮೆಗಾಫಿಕ್ಸೆಲ್ ಮತ್ತು ಹಿಂಭಾಗದಲ್ಲಿ 5 ಮೆಗಾಫಿಕ್ಸೆಲ್ ಕ್ಯಾಮರಾಗಳಿವೆ.

* ಇವೆರಡೂ ಟ್ಯಾಬ್ಲೆಟ್ ಗಳು 1 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿವೆ. ಎರಡರಲ್ಲೂ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

* ಏಸರ್ ಟ್ಯಾಬ್ಲೆಟ್ ತೂಕ 765 ಗ್ರಾಂ ಇದೆ. ಸೋನಿ ಟ್ಯಾಬ್ಲೆಟ್ ತೂಕ 468 ಗ್ರಾಂ ಇದೆ. ಇವೆರಡೂ ಟ್ಯಾಬ್ಲೆಟ್  ಗಳು ಗರಿಷ್ಠ ಸಂಗ್ರಹ ಸಾಮರ್ಥ್ಯ 32 ಜಿಬಿ.

* ಏಸರ್ ಐಕಾನಿಯಾ ಎ500 ನಿಖರ ದರವಿನ್ನೂ ಖಚಿತಗೊಂಡಿಲ್ಲ. ಆದರೆ ಸೋನಿ ಎಸ್ ಟ್ಯಾಬ್ಲೆಟ್ ದರ ಸುಮಾರು 25 ಸಾವಿರ ರು.ನಿಂದ 30 ಸಾವಿರ ರು.ವರೆಗಿರಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot