ಏಸರ್ ಐಕೊನಿಯಾ ಹೊಸ ಟ್ಯಾಬ್ಲೆಟಿಗೆ ಸುಸ್ವಾಗತ

Posted By: Staff
ಏಸರ್ ಐಕೊನಿಯಾ ಹೊಸ ಟ್ಯಾಬ್ಲೆಟಿಗೆ ಸುಸ್ವಾಗತ
ಈಗಾಗಲೇ ಮಾರುಕಟ್ಟೆಯಲ್ಲಿ ಏಸರ್ ಐಕೊನಿಯಾ ಎ200 ಟ್ಯಾಬ್ಲೆಟ್ ಅತ್ಯುತ್ತಮವಾಗಿ ಮಾರಾಟವಾಗುತ್ತಿದೆ. ಕಂಪನಿಯ ನೂತನ ಟ್ಯಾಬ್ಲೆಟ್ ಆವೃತ್ತಿ Acer Iconia A200 ಶೀಘ್ರದಲ್ಲಿ ಅಂದರೆ ಮುಂದಿನ ವಾರ ನಡೆಯಲಿರುವ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋನಲ್ಲಿ ಅನಾವರಣಗೊಳ್ಳಲಿದೆ ಎಂಬ ಸುದ್ದಿ ಟೆಕ್ ಲೋಕದಲ್ಲಿ ಹಬ್ಬಿದೆ.

ನೂತನ ಏಸರ್ ಐಕೊನಿಯಾ ಎ200 ಟ್ಯಾಬ್ಲೆಟ್ ನಲ್ಲಿ ಆಕರ್ಷಕ ಫೀಚರುಗಳಿವೆ. ಈ ಟ್ಯಾಬ್ಲೆಟ್ ನ ಫೀಚರುಗಳು, ಟೆಕ್ ಮಾಹಿತಿ ಮತ್ತು ವಿಶೇಷತೆಗಳ ಟಿಪ್ಪಣಿ ಇಲ್ಲಿದೆ.

ಟೆಕ್ ಮಾಹಿತಿ

* ಪ್ರೊಸೆಸರ್ ಮಾದರಿ: ಡ್ಯೂಯಲ್ ಕೋರ್

* ಎನ್ವಿಡಿಯಾ ಟೆಗ್ರಾ ಡ್ಯೂಯಲ್ ಕೋರ್

* ಅಪರೇಟಿಂಗ್ ಸಿಸ್ಟಮ್: 3.2 ಹನಿಕಾಂಬ್ ಆಂಡ್ರಾಯ್ಡ್ ಟ್ಯಾಬ್ಲೆಟ್

ಪ್ರಮುಖ ಫೀಚರುಗಳು

* ಡಿಸ್ ಪ್ಲೇ ಮಾದರಿ: ಹೈಡೆಫಿನೇಷನ್ ಮಲ್ಟಿ ಟಚ್

*  ಟ್ಯಾಬ್ಲೆಟ್ ಗಾತ್ರ: 10.1 ಇಂಚು

* ರೆಸಲ್ಯೂಷನ್: 1280 x 800 ಪಿಕ್ಸೆಲ್

* ಕ್ಯಾಮರಾ ಮಾದರಿ: ಫ್ರಂಟ್ ಪೇಸಿಂಗ್ ಕ್ಯಾಮರಾ, 2 ಮೆಗಾ ಫಿಕ್ಸೆಲ್

ಬ್ಯಾಟರಿ ಬಾಳಿಕೆ: 8 ಗಂಟೆ

ಸಂಗ್ರಹ ಸಾಮರ್ಥ್ಯ

* ಆಂತರಿಕ ಮೆಮೊರಿ: 8 ಜಿಬಿ ಮತ್ತು 16 ಜಿಬಿ ಆವೃತ್ತಿ

* RAM: 1 ಜಿಬಿ

ಈ ಪುಟ್ಟ ಟ್ಯಾಬ್ಲೆಟ್ ಸಾಧನ ಬಳಕೆದಾರರ ಹೆಚ್ಚಿನ ಅವಶ್ಯಕತೆ ಪೂರೈಸುತ್ತದೆ. ಅಂದರೆ ಗೇಮ್, ವೆಬ್ ಬ್ರೌಸಿಂಗ್, ಸಾಮಾಜಿಕ ಜಾಲತಾಣಗಳ ಇತ್ಯಾದಿ ಹತ್ತು ಹಲವು ಫೀಚರುಗಳು ಇದರಲ್ಲಿವೆ. ಈ ಟ್ಯಾಬ್ಲೆಟ್ ದರಕ್ಕೆ ಹೋಲಿಸಿದರೆ ಇಷ್ಟೇಲ್ಲ ಫೀಚರುಗಳಿರುವುದು ಪ್ಲಸ್ ಪಾಯಿಂಟ್.

ಮಲ್ಟಿಮೀಡಿಯಾ ಮನರಂಜನೆಗೆ ಪೂರಕವಾಗಿ ಈ ಟ್ಯಾಬ್ಲೆಟ್ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಸಾಕಷ್ಟು ಪ್ರೀಲೋಡೆಡ್ ಗೇಮುಗಳಿವೆ. ಏಸರ್ ಐಕೊನಿಯಾ ಎ200 ಟ್ಯಾಬ್ಲೆಟ್ ಎರಡು ಆವೃತ್ತಿಗಳಲ್ಲಿ ದೊರಕಲಿದೆ. ಇದು 8 ಜಿಬಿ ಮತ್ತು 16 ಜಿಬಿಗಳ ಆವೃತ್ತಿಗಳಲ್ಲಿ ದೊರಕಲಿದೆ.

8 ಜಿಬಿ Acer Iconia A 200 ದರ ಸುಮಾರು 17 ಸಾವಿರ ರುಪಾಯಿ ಮತ್ತು 16 ಜಿಬಿ ಆವೃತ್ತಿ ದರ ಸುಮಾರು 18,500 ರುಪಾಯಿ ಇರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot