Subscribe to Gizbot

ಏಸರ್ ಟ್ಯಾಬ್ಲೆಟ್ ನಲ್ಲಿ ಹೊಸ ಸಾಫ್ಟ್ ವೇರ್

Posted By:
ಏಸರ್ ಟ್ಯಾಬ್ಲೆಟ್ ನಲ್ಲಿ ಹೊಸ ಸಾಫ್ಟ್ ವೇರ್

ಏಸರ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿರುವ ಬ್ರಾಂಡ್ ಅಗಿದೆ. ಇದು ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್, ಕಂಪ್ಯೂಟರ್ , ಟ್ಯಾಬ್ಲೆಟ್ ಗಳನ್ನು ತಯಾರಿಸಿ ಬಳಕೆದಾರರ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ಏಸರ್ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಏಸರ್ ಐಕೋನಿಕ್ ಟ್ಯಾಬ್ A500 ಟ್ಯಾಬ್ಲೆಟ್ ಮಾರುಕಟ್ಟೆಗೆ ತಂದಿದೆ.

ಈ ಟ್ಯಾಬ್ಲೆಟ್ ನಲ್ಲಿ ಎರಡು ಹೊಸ ಸಾಫ್ಟ್ ವೇರ್ 7.014.01 ಮತ್ತು 7.014.02ಬಳಸಿದ್ದಾರೆ ಎಂಬ ಸುದ್ಧಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೊಡ್ಡ ಮಟ್ಟದ ಸುದ್ಧಿಯನ್ನು ಮಾಡಿದೆ. ಇದರಿಂದ ಇದು ಮತ್ತಷ್ಟು ವೇಗದಲ್ಲಿ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಈ ಎರಡೂ ಸಾಫ್ಟ್ ವೇರ್ ನ ಮೆಮೊರಿ ಗಾತ್ರದಲ್ಲಿ 10MBಕ್ಕಿಂತ ಕಡಿಮೆ ಇದೆ.

ಏಸರ್ ಟ್ಯಾಬ್ಲೆಟ್ ನಲ್ಲಿ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಬಳಸಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯನ್ನು ಹೊಂದಿದೆ. ಈ ಟ್ಯಾಬ್ಲೆಟ್ 2012ರ ಜನವರಿಗೆ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot