5 ಸಾವಿರಕ್ಕೆ ಲ್ಯಾಪ್ಟಾಪ್ ತಂದ Aci !

Posted By: Varun
5 ಸಾವಿರಕ್ಕೆ ಲ್ಯಾಪ್ಟಾಪ್ ತಂದ Aci !

ಟ್ಯಾಬ್ಲೆಟ್ ಗಳ ಭರಾಟೆಯಲ್ಲಿ ಲ್ಯಾಪ್ಟಾಪ್ ಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ UK ಯ ಲ್ಯಾಪ್ಟಾಪ್ ತಜ್ಞ ಆಲೈಡ್ ಕಂಪ್ಯೂಟರ್ಸ್, 5 ಸಾವಿರ ರೂಪಾಯಿಯ ವಿಶ್ವದ ಅತ್ಯಂತ ಅಗ್ಗದ ಬಜೆಟ್ ಲ್ಯಾಪ್ಟಾಪ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಮುಂಬೈ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿರುವ ಆಲೈಡ್ ಕಂಪ್ಯೂಟರ್ಸ್ ಇಂಟರ್ನ್ಯಾಷನಲ್ ACi Icon 1100 ಹೆಸರಿನ ಲ್ಯಾಪ್ಟಾಪ್ ಕೇವಲ 700 ಗ್ರಾಂ ಹೊಂದಿದ್ದು ಆನ್ಲೈನ್ ನಲ್ಲಿ ಆರ್ಡರ್ ಮಾಡಬಹುದಾಗಿದೆ.

ಇದರ ಫೀಚರುಗಳು ಈ ರೀತಿ ಇವೆ :

  • ವಿಂಡೋಸ್ ತಂತ್ರಾಂಶ

  • 10.2 LED ಡಿಸ್ಪ್ಲೇ (1024 x 768 ರೆಸಲ್ಯೂಶನ್)

  • 512MB ರಾಮ್

  • 4GB ಆಂತರಿಕ ಮೆಮೊರಿ, 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • ಹೈ ಡೆಫಿನಿಶನ್ ಆಡಿಯೋ

  • ಮೂರು USB 2.0 ಪೋರ್ಟ್

  • 10/100 ಈಥರ್ನೆಟ್ ಅಡಾಪ್ಟರ್, ವಯರ್ಲೆಸ್ ಅಡಾಪ್ಟರ್

  • MMC / SD ಕಾರ್ಡ್ ರೀಡರ್

  • ವೆಬ್ ಕ್ಯಾಮ್
 

www.aci-asia.com ವೆಬ್ಸೈಟಿನಲ್ಲಿ ನೀವು ಈ ಲ್ಯಾಪ್ಟಾಪ್ ಅನ್ನು ಕೊಳ್ಳಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot