ಏರ್ಟೆಲ್ ನಲ್ಲಿ ಬ್ಲಾಕ್ ಆಗಿದೆ, ಆದ್ರೆ BSNLನಲ್ಲಿ ಆಗಿಲ್ಲ

Posted By: Varun
ಏರ್ಟೆಲ್ ನಲ್ಲಿ ಬ್ಲಾಕ್ ಆಗಿದೆ, ಆದ್ರೆ BSNLನಲ್ಲಿ ಆಗಿಲ್ಲ

ಇತ್ತೀಚೆಗಂತೂ ಆನಲೈನ್ ಪೈರಸಿ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ಯಾವುದೇ ಫಿಲಂ ಬಿಡುಗಡೆಯಾಗಲಿ, ಅದರ ಡಿವಿಡಿಗಳು ಕೂಡಲೇ ಮಾರುಕಟ್ಟೆಯಲ್ಲಿ ಸಿಗುತ್ತವೆ. ಕೆಲವರಂತೂ ಆನ್ಲೈನ್ ನಲ್ಲಿ ಇರುವ ಹಲವಾರು ಟಾರೆಂಟ್ ವೆಬ್ಸೈಟುಗಳಲ್ಲಿ ಈ ರೀತಿಯ ಪೈರೇಟೆಡ್ ಚಿತ್ರಗಳನ್ನು ಅಪ್ಲೋಡ್ ಮಾಡಿ ಹಂಚುವವರೂ ಇದ್ದಾರೆ. ಇದರಿಂದ ಚಿತ್ರೋದ್ಯಮಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ.

ಕಳೆದ ವರ್ಷ ರಿಲಯನ್ಸ್ ಎಂಟರ್ಟೈನ್ಮೆಂಟ್, ತಾನು ನಿರ್ಮಿಸಿದ ಹಲವಾರು ಚಿತ್ರಗಳ ಪೈರಸಿ ಆಗಿದ್ದರಿಂದ, ದೆಹಲಿ ಹೈ ಕೋರ್ಟ್ ನಿಂದ ಜಾನ್ ಡೋ ಆರ್ಡರ್ ತೆಗೆದುಕೊಂಡು ಬಂದು, ಆನಲೈನ್ ನಲ್ಲಿ ಈ ರೀತಿ ಪೈರಸಿ ಹರಡುವ ವೆಬ್ಸೈಟುಗಳನ್ನು ಬ್ಲಾಕ್ ಮಾಡುವಂತೆ ಎಲ್ಲಾ ಇಂಟರ್ನೆಟ್ ಸೇವೆ ಕೊಡುವ ಕಂಪನಿಗಳಿಗೆ ಆಗ್ರಹಿಸಿತ್ತು ಹಾಗು ತನ್ನದೇ ರಿಲಯನ್ಸ್ ಕಮ್ಯೂನಿಕೇಷನ್ ನಿಂದ ಈ ರೀತಿಯ ವೆಬ್ಸೈಟುಗಳನ್ನು ಬ್ಲಾಕ್ ಮಾಡಿತ್ತು.

ಈಗ MTNL ಹಾಗು ಏರ್ಟೆಲ್ ಈ ಜಾನ್ ಡೋ ಆಜ್ಞೆಯಂತೆ, ಇದೇ ದಾರಿಯನ್ನು ಅನುಸರಿಸಿದ್ದು, ವೀಡಿಯೋ ಶೇರಿಂಗ್ ವೆಬ್ಸೈಟ್ ಆದ vimeo, dailymotion, ಹಾಗು ಪೈರೆಟ್ ವೆಬ್ಸೈಟ್ ಗಳಾದ thepiratebay, sohunt.com, torrentz.eu, kat.ph, torlock.com, kickasstorrents.com, torrentfunk.com, fenopy.eu ಹಾಗು ಟೆಕ್ಸ್ಟ್ ಮತ್ತು ಕೋಡಿಂಗ್ ವೆಬ್ಸೈಟ್ Pastebin, ಬುಕ್ ಮಾರ್ಕ್ ವೆಬ್ಸೈಟ್ ಆದ Xmarks ಗಳನ್ನೂ ಬ್ಲಾಕ್ ಮಾಡಿದೆ.

ಆದರೆ ಸರಕಾರದ ಒಡೆತನದಲ್ಲಿ ಇರುವ BSNL ಮಾತ್ರ ಇವ್ಯಾವೂ ವೆಬ್ಸೈಟನ್ನು ಬ್ಲಾಕ್ ಮಾಡಿಲ್ಲ ಎಂಬುದೇ ನಮ್ಮ ಚಿಂತೆ. ಪೈರಸಿಯನ್ನು ತಡೆಗಟ್ಟಲು ಖಾಸಗೀ ಕಂಪನಿಗಳೇ ಮುಂದಾಗಿರುವಾಗ ಸರಕಾರದ ಕಂಪನಿಯಾದ BSNL ಈ ನಿಟ್ಟಿನಲ್ಲಿ ಇನ್ನೂ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯವಾಗುತ್ತೆ.

ಇದೇ ರೀತಿ ಅಂತರ್ಜಾಲ ಸೇವೆ ಒದಗಿಸುವ ಕಂಪನಿಗಳಾದ ಟಾಟಾ, ಡೋಕೊಮೋ, ಐಡಿಯಾ, ವೊಡಾಫೋನ್, MTS, ಟಿಕೋನಾ ದಂತಹ ಕಂಪನಿಯ ಇಂಟರ್ನೆಟ್ ಅನ್ನು ನೀವು ಉಪಯೋಗಿಸುತ್ತಿದ್ದು, ಈ ಮೇಲಿನ ಪೈರಸಿ ವೆಬ್ಸೈಟುಗಳು ಬ್ಲಾಕ್ ಆಗಿಲ್ಲವಾದರೆ ನಮಗೆ ತಿಳಿಸಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot