ನೋಡಿ ಸ್ವಾಮಿ, ಇದು ಆಸಸ್ 3ಡಿ ಲ್ಯಾಪ್ ಟಾಪ್

By Super
|

ನೋಡಿ ಸ್ವಾಮಿ, ಇದು ಆಸಸ್ 3ಡಿ ಲ್ಯಾಪ್ ಟಾಪ್
ಆಸಸ್ ಹೊರತರಲಿರುವ ತ್ರಿಡಿ ಟ್ಯಾಬ್ಲೆಟ್ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಗೊಂಡಿದೆ. ಈ ಟ್ಯಾಬ್ಲೆಟ್ ಕಂಪ್ಯೂಟರ್ 3ಡಿ ಫೀಚರ್ ಹೊಂದಿದ್ದರೂ ಇದನ್ನು ನೋಡಲು ವಿಶೇಷ 3ಡಿ ಗ್ಲಾಸ್ ಅಗತ್ಯವಿಲ್ಲವಂತೆ. ಒಂದು ವರದಿಯ ಪ್ರಕಾರ ಈ ಟ್ಯಾಬ್ಲೆಟ್ ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ.

ಹೆಸರು: ಆಸಸ್ ಇ ಪ್ಯಾಡ್ ಮೆಮೊ 3ಡಿ ಟ್ಯಾಬ್ಲೆಟ್. ಇದನ್ನು ಮಾರುಕಟ್ಟೆಗೆ ತರುವ ಖಚಿತ ದಿನಾಂಕವನ್ನು ಕಂಪನಿ ಇನ್ನೂ ಬಹಿರಂಗ ಪಡಿಸಿಲ್ಲ. ಆಂಡ್ರಾಯ್ಡ್ ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಮತ್ತು ಈ ಟ್ಯಾಬ್ಲೆಟ್ ಪುಟ್ಟ ಪರದೆಯ ನಡುವೆ ತಾಂತ್ರಿಕ ಜಟಿಲತೆಯಿಂದ 3ಡಿ ಟ್ಯಾಬ್ಲೆಟ್ ಮಾರುಕಟ್ಟೆಗೆ ಬರುವುದು ವಿಳಂಬವಾಗುತ್ತಿದೆ ಎನ್ನುತ್ತಿದೆ ಒಂದು ವರದಿ.

ಮಾರುಕಟ್ಟೆಗೆ ಯಾವಾಗ ಬೇಕಾದರೂ ಬರಲಿ. ಅದರ ವಿಶೇಷತೆ, ಟೆಕ್ ಮಾಹಿತಿ ಈಗಲೇ ಪಡೆದುಕೊಂಡರೆ ತೊಂದರೆ ಏನು ಇಲ್ಲ. ಇದರ ಪ್ರಮುಖ ವಿಶೇಷತೆ 3ಡಿ ಗ್ಲಾಸ್ ಇಲ್ಲದೇ 3ಡಿ ಅನುಭವ ಪಡೆಯುವುದಾಗಿದೆ.

Eee Pad MeMO 3D ಟ್ಯಾಬ್ಲೆಟ್ ಆಂಡ್ರಾಯ್ಡ್ 3.0 ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆ. ಇದು ಡ್ಯೂಯಲ್ ಕೋರ್ ಕ್ವಾಲ್ ಕಾಮ್ 1.2 ಗಿಗಾಹರ್ಟ್ಸ್ ಎಂಎಸ್ಎಂ8260 ಸ್ನಾಪ್ ಡ್ರಾಗನ್ ಪ್ರೊಸೆಸರ್ ಹೊಂದಿರಲಿದೆಯಂತೆ. ಇದು ಒಂದು ಜಿಬಿ RAM ಮತ್ತು ಆನ್ ಬೋರ್ಡ್ ಸಂಗ್ರಹ ಸಾಮರ್ಥ್ಯ 32 ಜಿಬಿ ಇರಲಿದೆ.

ಇದರಲ್ಲಿ 3.5 ಮಿ.ಮೀ. ಆಡಿಯೊ ಔಟ್, ಸಿಮ್ ಕಾರ್ಡ್ ಸ್ಲಾಟ್, ಮೈಕ್ರೊ ಎಸ್ ಡಿ ಕಾರ್ಡ್ ಸ್ಲಾಟ್ ಮತ್ತು ಮೈಕ್ರೊ ಯುಎಸ್ ಬಿ ಸ್ಲಾಟ್ ಇರಲಿದೆ, ಈ ಟ್ಯಾಬ್ಲೆಟ್ ನಲ್ಲಿ 1080ಪಿ ಸಾಮರ್ಥ್ಯದ ಫುಲ್ ಹೈಡೆಫಿನೆಷನ್ ವಿಡಿಯೋ ವೀಕ್ಷಿಸಬಹುದಾಗಿದೆ. ಇದರಲ್ಲಿ ಕ್ರಮವಾಗಿ 5 ಮೆಗಾ ಫಿಕ್ಸೆಲ್ ಮತ್ತು 1.2 ಮೆಗಾಫಿಕ್ಸೆಲ್ ನ ಎರಡು ಕ್ಯಾಮರಾ ಇರಲಿದೆ.

ಇದರ ದರ ಎಷ್ಟಿರಲಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ಇದು ಮಾರುಕಟ್ಟೆಗೆ ಯಾವಾಗ ಬರಲಿದೆ ಎಂದು ಕಂಪನಿ ಇನ್ನೂ ಖಚಿತ ಪಡಿಸಿಲ್ಲ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X