ಅಮೆಜಾನ್ ಕಿಂಡಲ್ ಇ-ರೀಡರ್ ಬಿಡುಗಡೆ

By Varun
|

ಅಮೆಜಾನ್ ಕಿಂಡಲ್ ಇ-ರೀಡರ್ ಬಿಡುಗಡೆ
ಅಮೆರಿಕಾದ ಆನ್ಲೈನ್ ಶಾಪಿಂಗ್ ವೆಬ್ಸೈಟ್ ಅಮೆಜಾನ್ ಈಗ ತನ್ನ ಇ-ಬುಕ್ ರೀಡರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಈಗ ಅದು ಕ್ರೋಮಾ ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಸಿಗಲಿದೆ ಎಂದು ಕಂಪನಿ ತಿಳಿಸಿದೆ.

ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳನ್ನು ಹೊಂದಿರುವ ಈ ಕಿಂಡಲ್ ಸ್ಟೋರ್ ರೀಡರ್ ಅನ್ನು ಅಧೀಕೃತವಾಗಿ ನೀವು 6,999 ರೂಪಾಯಿಗೆ ಕೊಳ್ಳಬಹುದು. ಇದುವರೆಗೂ ಇದನ್ನು ಕೊಳ್ಳಬೇಕಾದರೆ ಆಮದು ಮಾತ್ರ ಮಾಡಿಕೊಳ್ಳಬೇಕಿತ್ತು.

ಇ-ಬುಕ್ ರೀಡರ್ ಮೂಲಕ ಕೇವಲ ವಿದೇಶೀ ಲೇಖಕರಷ್ಟೇ ಅಲ್ಲದೆ ಭಾರತೀಯ ಲೇಖಕರಾದ ಚೇತನ್ ಭಗತ್, ಅಶ್ವಿನ್ ಸಾಂಗ್ವಿ,ರವೀಂದರ್ ಸಿಂಗ್, ಅಮಿಶ್ ತ್ರಿಪಾಟಿ, ರಂತಹ ಲೇಖಕರ ಪುಸ್ತಕಗಳೂ ಈ ಮೂಲಕ ಸಿಗುವಂತೆ ಆಗಿದೆ ಎಂದು ಕಂಪನಿ ತಿಳಿಸಿದೆ.

2007 ರಲ್ಲಿ ಅಮೆಜಾನ್ ಇ-ಬುಕ್ (ಆನ್ಲೈನ್ ಪುಸ್ತಕ) ರೀಡರ್ ಅನ್ನು ಶುರು ಮಾಡಿದ್ದು, ಇತ್ತೀಚಿಗೆ ತಾನೇ 6 ಇಂಚ್ ಡಿಸ್ಪ್ಲೇ ಹೊಂದಿರುವ 4GB ಆಂತರಿಕ ಮೆಮೊರಿ, ವೈಫೈ/3G ಸಂಪರ್ಕ ಹೊಂದಿರುವ ಇ-ಬುಕ್ ರೀಡರ್ ಅನ್ನು ಬಿಡುಗಡೆ ಮಾಡಿತ್ತು.

ಈಗ ಭಾರತದಲ್ಲೂ ಇದನ್ನು ಬಿಡುಗಡೆ ಮಾಡಿರುವ ಅಮೆಜಾನ್, ಪುಸ್ತಕ ಓದುವ ಹವ್ಯಾಸವಿರುವ ಭಾರತೀಯರಿಗೆ ತನ್ನ ಇ-ಬುಕ್ ರೀಡರ್ ಅನ್ನು ಪರಿಚಯಿಸಿರುವುದು ಬಹು ಉಪಯುಕ್ತವಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X