ಆಂಡ್ರಾಯ್ಡ್ ಫೋನು ಕಳೆದು ಹೋದರೆ ಪತ್ತೆ ಹೇಗೆ ?

By Varun
|
ಆಂಡ್ರಾಯ್ಡ್ ಫೋನು ಕಳೆದು ಹೋದರೆ ಪತ್ತೆ ಹೇಗೆ ?

ನಿಮ್ಮ ನೆಚ್ಚಿನ ಫೋನ್ ಕಳೆದು ಹೋದರೆ ಮನಸ್ಸು ಎಷ್ಟು ಗಲಿಬಿಲಿಗೊಳ್ಳುತ್ತೆ ಅಲ್ಲವಾ? ಅದರಲ್ಲೂ ಸ್ಮಾರ್ಟ್ ಫೋನ್ ಆಗಿದ್ದರಂತೂ ಇನ್ನೂ ಬೇಜಾರಾಗುತ್ತೆ. ರಿಮೋಟ್ ಲೊಕೇಟರ್ App ಇಲ್ಲವೆ ಸೆಕ್ಯೂರಿಟಿ App ಅನ್ನು ಮೊದಲೇ Install ಮಾಡಿಕೊಂಡಿದ್ದರೆ ಹೇಗೋ ಪತ್ತೆ ಹಚ್ಚಬಹುದು. Install ಆಗಿಲ್ಲದಿದ್ದರೆ ಏನಪ್ಪಾ ಮಾಡುವುದು ಎಂದು ತಲೆ ಕೆಡಿಸಿಕೊಳ್ಳುವುದು ಬೇಡ.

ಅದಕ್ಕಾಗಿಯೇ ಒಂದು ಸುಲಭ ಉಪಾಯವಿದೆ. ಈ ಕೆಳಗಿನ ಹಂತಗಳನ್ನು ಪಾಲಿಸಿ:

  • ನೀವು ಫೋನ್ ಕಳೆದು ಹೋದ ತಕ್ಷಣ ನೀವು ಗೂಗಲ್ ಪ್ಲೇ ಮಳಿಗೆಗೆ ಹೋಗಿ

  • ನಂತರ AndroidLost page ಗೆ ಹೋಗಬೇಕು

  • ಇದಾದ ಮೇಲೆ ನಿಮ್ಮ ಅ ಳೆದು ಹೋದ ಫೋನ್ ನಲ್ಲಿ ನೀವು ಯಾವ ಗೂಗಲ್ ಖಾತೆ ಉಪಯೋಗಿಸುತ್ತಿದ್ದರೋ ಅದೇ ಗೂಗಲ್ ಖಾತೆಗೆ Sign in ಮಾಡಿ.

  • ನಿಮ್ಮ ಕಳೆದುಹೋದ ಫೋನ್ ಏನಾದರೂ ಆನ್ ಆಗಿದ್ದರೆ, ಈ App ಆಟೋಮ್ಯಾಟಿಕ್ ಆಗಿ Install ಆಗುತ್ತದೆ.

  • ನಂತರ ನೀವು AndroidLost.com ಗೆ ಹೋಗಿ ಮತ್ತೆ Sign in ಮಾಡಿ

  • ಇದಾದ ನಂತರ Controls/Settings page ಗೆ ಹೋಗಿ

  • ಆ ಪೇಜ್ ನಲ್ಲಿ remote control options active ಎಂದು ತೋರಿಸುತ್ತಿದ್ದರೆ ನಿಮ್ಮ ಫೋನ್ ಅನ್ನು ಹುಡುಕಬಹುದು.

  • Inactive ಆಗಿದ್ದರೆ ಮತ್ತೆ Login ಮಾಡಿ ಟ್ರೈ ಮಾಡಬೇಕು.

ನಿಮ್ಮ ಫೋನ್ ಕಳೆದು ಹೋಗುವ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಕೂಡಾ ನೀವು ಈ App ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X